ಹಳಿಯಾಳ:- ಭಾನುವಾರ ಒಂದೇ ದಿನ ೧೪ ಜನ ಸೊಂಕಿನಿAದ ಗುಣಮುಖರಾಗಿ ಬಿಡುಗಡೆ ಹೊಂದಿದ್ದರೇ ಕೇವಲ ಒಬ್ಬರಿಗೆ ಮಾತ್ರ ಸೊಂಕು ದೃಢಪಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಗುಣಮುಖರಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದರೇ ಸೊಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಈವರೆಗೆ ತಾಲೂಕಿನಲ್ಲಿನ ಕೊರೊನ ಪ್ರಕರಣಗಳ ಸಂಖ್ಯೆ 193 ಆಗಿದೆ. ಪಟ್ಟಣದ ಯಾತ್ರಿ ನಿವಾಸ ಮತ್ತು ಬಾಣಸಗೇರಿಯ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 151 ಜನರು ಸಂಪೂರ್ಣ ಗುಣಮುಖರಾಗಿ ಮನೆ ಸೇರಿದ್ದರೇ ಸಕ್ರಿಯ 41 ಜನ ಕೊರೊನಾ ಸೊಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.

ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಭಾನುವಾರ ೪೦ ಜನರನ್ನು ರ್ಯಾಪಿಡ್ ಟೆಸ್ಟ್ಗೆ ಒಳಪಡಿಸಿದ್ದರೇ ೪೦ ಜನರ ವರದಿ ನೆಗೆಟಿವ್ ಬಂದಿದ್ದರೇ ಕಾರವಾರಕ್ಕೆ ಕಳಿಸಿದ ಗಂಟಲು ದ್ರವದ ಪರೀಕ್ಷೆಯಲ್ಲಿ ಓರ್ವ ಪುರುಷನಿಗೆ ಸೊಂಕು ಒಕ್ಕರಿಸಿದೆ.
ಸೋಂಕಿತ ವ್ಯಕ್ತಿ ಧಾರವಾಡದವನಾಗಿರುವುದರಿಂದ ಧಾರವಾಡ ತಾಲೂಕಾಡಳಿತಕ್ಕೆ ಈ ಕುರಿತು ಮಾಹಿತಿ ನೀಡಿ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Leave a Comment