ಹಳಿಯಾಳ:- ಸೋಮವಾರ ಇಲ್ಲಿಯ ತಾಲೂಕಾ ಆಸ್ಪತ್ರೆಯಲ್ಲಿ ನಡೆಸಿದ ೮ ಜನರ ರ್ಯಾಪಿಡ್ ಟೆಸ್ಟ್ನಲ್ಲಿ ಎಲ್ಲರ ವರದಿ ನೆಗೆಟಿವ ಬಂದಿದ್ದರೇ ಇನ್ನೊಂದೆಡೆ ತಾಲೂಕಾಡಳಿತದ ಕೈ ಸೇರಿದ ೨೧೯ ಜನರ ಗಂಟಲು ದ್ರವದ ಪರೀಕ್ಷೆಯಲ್ಲಿ ೧೫ ಜನರಿಗೆ ಕೊರೊನಾ ಸೊಂಕು ತಗುಲಿದ್ದು ಸೋಮವಾರ ೧೫ ಜನರಿಗೆ ಕೊರೊನಾ ಕನಫರ್ಮಂ ಆಗಿದೆ.
ಪಟ್ಟಣದ ಸದಾಶಿವನಗರ ಓರ್ವರಿಗೆ, ಕೆಎಸ್ಆರ್ಟಿಸಿಯ ಇಬ್ಬರು ನೌಕರರಿಗೆ ಹಾಗೂ ಬೇರೆ ರಾಜ್ಯದಿಂದ ಬಂದ ಗ್ರಾಮಾಂತರ ಭಾಗದ ಓರ್ವನಿಗೆ ಒಟ್ಟೂ ನಾಲ್ಕೂ ಜನರಿಗೆ ಮತ್ತು ಗ್ರಾಮಾಂತರ ಭಾಗದ ಯಡೋಗಾದಲ್ಲಿ ೬, ಅಡಿಕೆ ಹೊಸುರ ಗ್ರಾಮದಲ್ಲಿ ೨, ಬಿಕೆ ಹಳ್ಳಿ-೧, ಮದ್ನಳ್ಳಿ-೨ ಪ್ರಕರಣಗಳು ದೃಢಪಟ್ಟಿದೆ. ೬ ಮಹಿಳೆಯರು ಹಾಗೂ ೯ ಜನ ಪುರುಷರಿಗೆ ಸೊಂಕು ಒಕ್ಕರಿಸಿದೆ.
ಈ ಮೂಲಕ ಇಲ್ಲಿನ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ ೨೫೫ಕ್ಕೆ ಏರಿಕೆಯಾಗಿದೆ. ಸೋಮವಾರ ೩ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ ೧೯೭ ಇದ್ದರೇ ೫೭ ಸಕ್ರಿಯ ಸೊಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

Leave a Comment