ಹಳಿಯಾಳ:- ಗುರುವಾರ ಹಳಿಯಾಳ ತಾಲೂಕಾಡಳಿತದ ಕೈ ಸೇರಿದ ೭೪ ಜನರ ಗಂಟಲು ದ್ರವದ ಪರೀಕ್ಷೆಯಲ್ಲಿ 14 ಜನರಿಗೆ ಹಾಗೂ ಇಲ್ಲಿಯ ತಾಲೂಕಾ ಆಸ್ಪತ್ರೆಯಲ್ಲಿ ೮ ಜನರಿಗೆ ನಡೆಸಿದ ರ್ಯಾಪಿಡ್ ಪರೀಕ್ಷೆಯಲ್ಲಿ ಓರ್ವರಿಗೆ ಒಟ್ಟೂ 15ಜನರಿಗೆ ಕೊರೊನಾ ಸೊಂಕು ದೃಢಪಟ್ಟಿದೆ.

ಗುರುವಾರ ಒಂದೇ ದಿನ 10 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 216ಕ್ಕೆ ಏರಿಕೆಯಾಗಿದೆ. ಒಟ್ಟೂ ಸೊಂಕಿತರ ಸಂಖ್ಯೆ 282ಕ್ಕೆ ಏರಿಕೆಯಾಗಿದ್ದರೇ ತಾಲೂಕಿನಲ್ಲಿ ಸದ್ಯ 70 ಸಕ್ರಿಯ ಸೊಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

ಗುರುವಾರ ಕೊರೊನಾ ವಾರಿಯರ್ 33ವರ್ಷದ ಪೋಲಿಸ್ ಸಿಬ್ಬಂದಿಯೊರ್ವರಿಗೆ, ಪಟ್ಟಣದ ಹೊಸುರಗಲ್ಲಿಯ ವೃದ್ದ, ಕಸಬಾಗಲ್ಲಿಯ ವೃದ್ದೆ, ದೇಶಪಾಂಡೆನಗರದ 5ವರ್ಷದ ಬಾಲಕಿ ಮತ್ತು 28 ವರ್ಷದ ಯುವತಿ, ನವಲಗುಂದ ತಾಲೂಕಿನಿಂದ ಬಂದು ಪಟ್ಟಣದಲ್ಲಿರುವ ಓರ್ವರಿಗೆ ಒಟ್ಟೂ 6 ಜನರಿಗೆ ಹೊರತು ಪಡಿಸಿದರೇ ಗ್ರಾಮಾಂತರ ಭಾಗದ ಹವಗಿಯಲ್ಲಿ 4, ತೇರಗಾಂವ ಗ್ರಾಮದಲ್ಲಿ ಓರ್ವ ಯುವತಿಗೆ, ಯಡೋಗಾದಲ್ಲಿ ಓರ್ವರಿಗೆ, ಕೆಕೆ ಹಳ್ಳಿಯ ವೃದ್ದ ಮತ್ತು ಹಂದಲಿಯ ವೃದ್ದೆಗೆ ಒಟ್ಟೂ 8 ಜನರಿಗೆ ಸೊಂಕು ದೃಢವಾಗಿದೆ.
Leave a Comment