ಬೆಂಗಳೂರು:- ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ_ಕೋಣೆಸರ ಮೂಲದ ಹಾಲಿ ಬೆಂಗಳೂರಿನ ಸಿ.ಆಯ್.ಡಿ ವಿಭಾಗದ `ಆರ್ಥಿಕ ಅಪರಾಧಗಳು’ ವಿಭಾಗದಲ್ಲಿ ಡಿ.ವಾಯ್.ಎಸ್.ಪಿ ಯಾಗಿ ಸೇವೆ ಸಲ್ಲಿಸುತ್ತಿರುವ ಪರಮೇಶ್ವ ಹೆಗಡೆ, ಕೋಣೆಸರ ಅವರಿಗೆ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ನೀಡುವ ರಾಷ್ಟ್ರಪತಿ ನೀಡುವ ಗೌರವ ಪದಕ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ
ಅವರು ಅರ್ಥಿಕ ಅಪರಾದ ಪ್ರಕರಣಗಳಲ್ಲಿ ತೋರಿದ ತನಿಖೆಯ ಜಾಣ್ಮೆಗಾಗಿ, ದಕ್ಷ ಅಧಿಕಾರಿಯಾಗಿ ಇಲಾಖೆಗೆ ಹಾಗೂ ರಾಜ್ಯ- ರಾಷ್ಟ್ರಕ್ಕೆ ಕೀರ್ತಿ ತಂದ ಸಾಧನೆಗಾಗಿ ರಾಷ್ಟ್ರಪತಿ ಪದಕವನ್ನು ನೀಡಲಾಗುತ್ತಿದೆ.
ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ನಿಯುಕ್ತಿಗೊಂಡ ಪರಮೇಶ್ವರ ಹೆಗಡೆ ಹಂತಹಂತವಾಗಿ ಮೇಲೇರಿ ಈಗ ಡಿ.ವಾಯ್.ಎಸ್.ಪಿ ಆಗಿದ್ದು, ಕರ್ನಾಟಕದಲ್ಲಿ ಮಂಗಳೂರು, ಧಾರವಾಡ, ಬೆಳಗಾವಿ, ಬೆಂಗಳೂರು, ಮುಂತಾದೆಡೆ ಧಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಕುಟುಂಬಕ್ಕೆ, ಇಲಾಖೆಗೆ ಹಾಗೂ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ.

Leave a Comment