ಇತ್ತೀಚಿನ ದಿನಗಳಲ್ಲಿ ನೀವು ನೋಡಬಹುದು ಹಲವರು ಮಾನಸಿಕ ಖಿನ್ನತೆಗೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಕೌಟುಂಬಿಕ ಕಲಹ ಅಥವಾ ಇನ್ನಿತರ ಸಣ್ಣಪುಟ್ಟ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡವರನ್ನು ನೋಡಬಹುದು. ಅವರು ಒಂದು ಬಾರಿ ಸರಿಯಾಗಿ ಯೋಚಿಸಿದರೆ ಅವರು ಈ ರೀತಿ ಮಾಡಿಕೊಳ್ಳುತ್ತಿರಲಿಲ್ಲವೇನೋ. ಅವರಿಗೆ ತಮ್ಮ ಮನಸ್ಸಿನ ಮೇಲೆ ಹಿಡಿತ ಇದ್ದಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಯೋಗ-ಸಂಜೀವಿನಿ ಎಂದೇ ಹೇಳಬಹುದು. ಯೋಗ ಮನುಷ್ಯನ ಎಲ್ಲಾ ಕೆಲಸಗಳಿಗೆ ಒಳ್ಳೆಯ ಶಕ್ತಿ ನೀಡುತ್ತದೆ. ನಮಗೆ ಮಾನಸಿಕವಾಗಿ, ಶಾರೀರಿಕವಾಗಿ ಶಕ್ತಿ ನೀಡುತ್ತದೆ. ನಮ್ಮ ಕೆಲಸಗಳಲ್ಲೂ ವ್ಯತ್ಯಾಸ ಕಾಣುತ್ತದೆ. ನಮ್ಮಲ್ಲಿ ಉತ್ಸಾಹ,ಕ್ರಿಯಾಶೀಲತೆ,ಕೌಶಲ್ಯ, ಏಕಾಗ್ರತೆ, ಒತ್ತಡ ಕಡಿಮೆ ಮಾಡುವ ಶಕ್ತಿ ಹೆಚ್ಚಿಸಿ ನಮ್ಮ ಕೆಲಸಗಳಲ್ಲಿ ಪ್ರಗತಿ ಹೆಚ್ಚಿಸುತ್ತದೆ. ಕಳೆದ ಕೆಲವು ತಿಂಗಳಿನಿಂದ ಇಲ್ಲಿಯವರೆಗೆ ನಾವೇ ನೋಡಬಹುದು ಸಾವಿರಾರು ಜನ ಕರೋನ ವೈರಾಣು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದನ್ನು ಹೊರತಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಸಣ್ಣ ವಯಸ್ಸಿನಲ್ಲೇ ಸಾಯುತ್ತಿದ್ದರೆ. ಚಿಕ್ಕಪುಟ್ಟ ಮಕ್ಕಳಿಗೆ ಡಯಾಬಿಟಿಸ್ ಬರುವುದನ್ನು ಕೇಳಿರುತ್ತೀರಿ.

ನಿಜವಾಗಿಯೂ ಹೇಳಬೇಕೆಂದರೆ ಈಗಿನ ಪರಿಸರ ಹದಗೆಟ್ಟಿದೆ. ಔಷಧಿ ಸಿಂಪಡಿಸಿದ ತರಕಾರಿ, ಹಣ್ಣು,ಸೊಪ್ಪು ಇವೆಲ್ಲಾ ಆರೋಗ್ಯಕ್ಕೆ ಹಾನಿ ಮಾಡುವ ಎಲ್ಲಾ ಸಂಭವ ಇದೆ. ಅದರಲ್ಲೂ ವಾಹನ ಸಂಚಾರ, ಕಾರ್ಖಾನೆ ಹಾಗೂ ಹಲವು ಕೆಲಸಗಳಿಂದ ಗಾಳಿ ವಿಷಪೂರಿತವಾಗಿದೆ. ಇನ್ನು ನೀರಿನ ವಿಷಯಕ್ಕೆ ಬಂದರೆ ಅದೂ ಸಹ ಹದಗೆಟ್ಟಿದೆ. ನಾವು ಸಮಾಜದಲ್ಲಿ ಬದುಕಬೇಕಾದರೆ ಈ ಕಷ್ಟಗಳು ಎದುರಾಗೇ ಆಗುತ್ತವೆ. ನಾವು ಈ ಸಮಯದಲ್ಲಿ ನಮ್ಮ ಸುರಕ್ಷತೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಅದಕ್ಕೆ ಯೋಗ ಉತ್ತಮ ಪರಿಹಾರವಾಗಿದೆ. ಹಲವರು ಹೇಳ್ತಾರೆ ಯೋಗ ಮಾಡುವ ಮೊದಲು ಆ ನೋವು ಇತ್ತು ಈ ನೋವು ಇತ್ತು ಈಗ ಅವರೇ ಹೇಳ್ತಾರೆ ಯೋಗ ಸಂಜೀವಿನಿ ಅಂತ. ಧೀರ್ಘ ಕಾಲದಿಂದ ಯೋಗ ಮಾಡುವವರ ಶಕ್ತಿ,ಯುಕ್ತಿ ಅಪ್ರತಿಮ. ಅವರಲ್ಲಿ ರೋಗ ನಿರೋಧಕ ಶಕ್ತಿ ಅಪಾರವಾಗಿರುತ್ತದೆ. ಅದ ಕಾರಣ ಪ್ರತಿಯೊಂದು ಸಮಸ್ಯೆ ಎದುರಿಸುವ ಶಕ್ತಿ ನಿರ್ಮಾಣ ವಾಗಿರುತ್ತದೆ. ಜನರ ತಪ್ಪು ಕಲ್ಪನೆ ಎಷ್ಟಿದೆ ಅಂದರೆ ಯೋಗ ಮಾಡಿದ್ರೆ ಅವರು ಏಕೆ ಸಾಯ್ತಾರೆ ಅಂತ ಕೇಳುವವರು ಇದ್ದಾರೆ. ಸಾವು ಜಗತ್ತಿನ ನಿಯಮ . ಹುಟ್ಟಿದವರು ಸಾಯಲೇ ಬೇಕು. ಯೋಗ ಮಾಡಿದ್ರೆ ಅವರು ಸಾಯದೆ ಇರುವುದಿಲ್ಲ. ಎಲ್ಲರೂ ಸಾಯಲೇ ಬೇಕು ಆದರೆ ಪೂರ್ಣ ಆಯಸ್ಸು ಅನುಭವಿಸುವ ಭಾಗ್ಯ ದೊರೆಯುವುದಂತೂ ನಿಜ. ಯೋಗ ಆರೋಗ್ಯದ ಲಸಿಕೆ ಇದ್ದಂತೆ ಯೋಗ ಮಾಡಿ ಆರೋಗ್ಯವಂತರಾಗಿರಿ. ಮೊದಲು ಯೋಗ ಆರೋಗ್ಯ ಕಾಪಾಡಿಕೊಳ್ಳಲು ಒಂದು ಆಯ್ಕೆಯಾಗಿತ್ತು ಈಗ ಅದು ಅನಿವಾರ್ಯವಾಗಿದೆ.
Leave a Comment