ಧಾರವಾಡ :- ಇತ್ತೀಚೆಗೆ ಅತಿವೃಷ್ಟಿಯಿಂದ ತುಪ್ಪರಿ ಹಳ್ಳ ತುಂಬಿದ ಸಂದರ್ಭದಲ್ಲಿ ಹಾರೋಬೆಳವಡಿ ಗ್ರಾಮದ ಮಡಿವಾಳಪ್ಪ ನಾಗಪ್ಪ ಜಕ್ಕಣ್ಣವರ್ ಅವರು ದನ ಮೇಯಿಸಲು ಹೋದ ಸಂದರ್ಭದಲ್ಲಿ ಹಳ್ಳದಲ್ಲಿ ತೇಲಿ ಹೋಗಿ ನಿಧನರಾಗಿದ್ದರು.
ಮೃತನ ಮನೆಗೆ ಭೇಟಿ ನೀಡಿ ಕುಟುಂಬದಲ್ಲಿ ಮೃತನ ತಂದೆಯ ನಾಗಪ್ಪ ಜಕ್ಕಣ್ಣವರ ಅವರಿಗೆ ಸರ್ಕಾರದಿಂದ ೫ ಲಕ್ಷ ರೂಪಾಯಿಗಳ ಪರಿಹಾರದ ಧನದ ಚೆಕ್ ನೀಡಿ, ಅವರ ಕುಟುಂಬಕ್ಕೆ ಸಾಂತ್ವನವನ್ನು ಹೇಳಲಾಯಿತು.
ಈ ಸಂಧರ್ಭದಲ್ಲಿ ಶಾಸಕ ಅಮೃತ_ದೇಸಾಯಿ, ಧಾರವಾಡ ಜಿಲ್ಲಾಧಿಕಾರಿ_ನಿತೀಶ್ ಪಾಟೀಲ,ಉಪ ವಿಭಾಗ ಅಧಿಕಾರಿಗಳಾದ ಮೊಹಮ್ಮದ ಜುಬೇರ ,ತಹಶೀಲ್ದಾರರಾದ ಸಂತೋಷ್ ಬಿರಾದಾರ್ ಪಕ್ಷದ ಪ್ರಮುಖರಾದ ತವನಪ್ಪ ಅಷ್ಟಗಿ, ಸಂತೋಶಗೌಡ ಪಾಟೀಲ, ಈರಣ್ಣ ಗಾಣಿಗೇರ, ವಿರುಪಾಕ್ಷಪ್ಪ ಜಕ್ಕಣ್ಣವರ್, ಪಕ್ಕೀರಪ್ಪ ಪಾರ್ವತಿ, ಬಾಬುಗೌಡ ಪಾಟೀಲ್ , ಹಿರಿಯರು ಉಪಸ್ಥಿತರಿದ್ದರು.


Leave a Comment