ಹಳಿಯಾಳ :- ಶನಿವಾರ 3 ಜನ ಮತ್ತು ಭಾನುವಾರ ಇಬ್ಬರಲ್ಲಿ ಎರಡು ದಿನದಲ್ಲಿ 5ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಈ ಎರಡು ದಿನಗಳಲ್ಲಿ 10ಜನ ಕೊರೊನಾ ಸೊಂಕಿನಿAದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಹಳಿಯಾಳದಲ್ಲಿ ಈವರೆಗೆ ಕೊರೊನಾ ಒಟ್ಟೂ ಸೊಂಕಿತರ ಸಂಖ್ಯೆ 336 ಕ್ಕೆ ಏರಿಕೆಯಾಗಿದೆ. ಇನ್ನೂ ಪ್ರತಿನಿತ್ಯ ಸೊಂಕಿತರ ಪತ್ತೇ ಪ್ರಮಾಣ ಕಡಿಮೆಯಾಗಿದ್ದರಿಂದ ಕೊವಿಡ್ ಕೇರ್ ಸೆಂಟರಗಳಿAದ ಗುಣಮುಖರಾಗುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿರುವ ಪರಿಣಾಮ ಈವರೆಗೆ 302 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ.
ಸದ್ಯ ಕೊರೊನಾ ಸಕ್ರಿಯ ಸೊಂಕಿತರ ಸಂಖ್ಯೆ ೩೨ಕ್ಕೆ ಇಳಿಕೆಯಾಗಿದೆ. ಶನಿವಾರ ಮತ್ತು ಭಾನುವಾರ ಬಿದ್ರೊಳ್ಳಿ ಗ್ರಾಮದಲ್ಲಿ-೨, ಮುಂಡವಾಡ ಗ್ರಾಮದಲ್ಲಿ-೧, ಭಾಗವತಿ ಗ್ರಾಮದ ೧೭ ಮತ್ತು ೧೯ ವರ್ಷದ ಯುವಕರಲ್ಲಿ ಸೊಂಕು ದೃಢಪಟ್ಟಿದೆ.
ಸೊಂಕಿತರ ಸಂಖ್ಯೆ ಕಡಿಮೆಯಾಗಿದ್ದರಿಂದ ಬಾಣಸಗೇರಿಯ ಕೊವಿಡ್ ಕೇರ್ ಸೆಂಟರ್ ಮುಚ್ಚಲಾಗಿದ್ದು ಹಳಿಯಾಳದ ಸರ್ಕಾರಿ ಆಸ್ಪತ್ರೆಯ ಪಕ್ಕದ ಯಾತ್ರಿ ನಿವಾಸದಲ್ಲಿಯ ಕೊವಿಡ್ ಕೆರ್ ಕೇಂದ್ರದಲ್ಲಿ ಸೊಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಹಳಿಯಾಳದ 68 ವರ್ಷದ ವೃದ್ದೆಯೊರ್ವಳು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕಳೆದ ೨ ದಿನಗಳ ಹಿಂದೆ ಕೊರೊನಾ ಸೊಂಕಿನಿAದ ಮೃತಪಟ್ಟಿದ್ದಾಳೆ. ಈ ಮೂಲಕ ಹಳಿಯಾಳದಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ ಎರಡಕ್ಕೇರಿದೆ.

Leave a Comment