ಹಳಿಯಾಳ :- ಸೋಮವಾರ ತಾಲೂಕಿನ ಗ್ರಾಮಾಂತರ ಭಾಗದ ನಾಲ್ವರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಹವಗಿ ಗ್ರಾಮದ ೯೬ ವರ್ಷದ ವೃದ್ದೆ ಕೊರೊನಾಕ್ಕೆ ಕೊನೆಯುಸಿರೆಳೆದಿದ್ದು ಈವರೆಗೆ ಹಳಿಯಾಳ ತಾಲೂಕಿನಲ್ಲಿ ಮೂವರು ಕೊರೊನಾಕ್ಕೆ ಉಸಿರು ಚೆಲ್ಲಿದಂತಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹವಗಿಯ 96 ವರ್ಷದ ವೃದ್ದೆ ಸೋಮವಾರ ಮೃತಪಟ್ಟಿದ್ದಾಳೆ. ಮಾಹಿತಿ ಪಡೆದ ಹಳಿಯಾಳ ಆರೋಗ್ಯ ಇಲಾಖೆ ಅಧಿಕಾರಿಗಳು ವೃದ್ದೆಯ ಕೊವಿಡ್-19 ಪತ್ತೆಗಾಗಿ ರ್ಯಾಪಿಡ್ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಮೃತಳಿಗೆ ಕೊರೊನಾ ಸೊಂಕು ಒಕ್ಕರಿಸಿರುವುದು ದೃಢಪಟ್ಟಿದೆ. ಹೀಗಾಗಿ ಸಂಪೂರ್ಣ ಸುರಕ್ಷಾ ಕ್ರಮಗಳೊಂದಿಗೆ ವೃದ್ದೆಯ ಅಂತ್ಯ ಸಂಸ್ಕಾರವನ್ನು ತಾಲೂಕ ಪಂಚಾಯತ ಅಧಿಕಾರಿಗಳ ನೇತೃತ್ವದಲ್ಲಿ ನೆರವೆರಿಸಲಾಗಿದೆ.
ಸೋಮವಾರ ತಾಲೂಕಿನ ರಾಮಾಪುರದ ೨೯,೩೫ ವರ್ಷದ ಪುರುಷರು, ೨೪,೨೧ ವರ್ಷದ ಯುವತಿಯರಲ್ಲಿ ಸೊಂಕು ದೃಢಪಟ್ಟಿದೆ. ತಾಲೂಕಿನಲ್ಲಿ ಈವರೆಗೆ ಒಟ್ಟೂ ಸೊಂಕಿತರ ಸಂಖ್ಯೆ ೩೪೧ಕ್ಕೆ ಏರಿಕೆಯಾಗಿದ್ದು ಇದರಲ್ಲಿ ಈವರೆಗೆ ೩೦೨ ಜನರು ಗುಣಮುಖರಾಗಿದ್ದಾರೆ. ಸದ್ಯ ಕೊರೊನಾ ಸಕ್ರಿಯ ಸೊಂಕಿತರ ಸಂಖ್ಯೆ ೩೬ಕ್ಕೆ ಇಳಿಕೆಯಾಗಿದೆ.

Leave a Comment