ಹಳಿಯಾಳ:- ವಿಜೃಂಭಣೆಯಿ0ದ ನಡೆಯುತ್ತಿದ್ದ ಗಣೇಶೋತ್ಸವ ಕೊರೊನಾ ಕರಿನೆರಳಿನ ಮಧ್ಯೆ ಈ ಬಾರಿ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿರುವುದು, ವಿಘ್ನನಿವಾರಕ ಸಂಕಷ್ಟಹರ ಗಣಪತಿಯು ಈ ಕೊರೊನಾವನ್ನು ಬೇಗ ನಾಶಮಾಡಲಿ ಎಂದು ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿರುವ ಎಸ್.ಎಲ್.ಘೊಟ್ನೇಕರ ಪ್ರಾರ್ಥಿಸಿದರು.
ಪಟ್ಟಣದ ಧಾರವಾಡ ರಸ್ತೆಯ ಲಕ್ಷö್ಮಣ ಪ್ಯಾಲೇಸ್ ಹೊಟೆಲ್ ಎದುರುಗಡೆ ಇರುವ ಅವರ ನಿವಾಸದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿದ ಅವರು ಮೊಮ್ಮಕ್ಕಳಾದ ಸ್ವಸ್ತಿ, ಸ್ವಯಂ, ಅಂಶ ಹಾಗೂ ಶರ್ಯ ಪುಟಾಣಿ ಮಕ್ಕಳೊಂದಿಗೆ ಗಣೇಶ ಹಬ್ಬ ಸಂತಸದಿAದ ಆಚರಿಸಿದರು.

ಹಳಿಯಾಳ:- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಶಾಸಕ ಆರ್ ವಿ ದೇಶಪಾಂಡೆ ಅವರು ಪಟ್ಟಣದ ಮುಖ್ಯಮಾರುಕಟ್ಟೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಪ್ರತಿಷ್ಠಾಪಿಸಿದ ಗಣೇಶನನ್ನು ಭಾನುವಾರ ಇಲ್ಲಿಯ ಬಸಪ್ಪಾ ಹೊಂಡದಲ್ಲಿ ವಿಸರ್ಜಿಸಿದರು. ಪುತ್ರ ಪ್ರಶಾಂತ ದೇಶಪಾಂಡೆ, ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇದ್ದರು.

Leave a Comment