ಹಳಿಯಾಳ :- ಬುಧವಾರ ಬೆಳಗಿನ ಜಾವ ಡೆಡ್ಲಿ ವೈರಸ್ ಕೊರೊನಾಕ್ಕೆ ತಾಲೂಕಿನ ಹವಗಿ ಗ್ರಾಮದ 40ವರ್ಷದ ಯುವಕ ಸಾವನ್ನಪ್ಪಿರುವುದು ಹಳಿಯಾಳ ತಾಲೂಕಿನಲ್ಲಿ ಒಂದು ವಾರದಲ್ಲಿ 4ಜನರು ಸಾವಗಿಡಾಗಿದ್ದು ಒಟ್ಟೂ 5 ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ.
ಕಳೆದ ೩ ದಿನದಲ್ಲಿ ಮೂರು ಜನರು ಸಾವನ್ನಪ್ಪಿದ್ದು ತಾಲೂಕಿನಲ್ಲಿ ಸದ್ಯ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ 349 ಕ್ಕೆ ಏರಿಕೆಯಾಗಿದ್ದು ಇದರಲ್ಲಿ 309 ಜನ ಗುಣಮುಖರಾಗಿದ್ದರೇ 35 ಸಕ್ರಿಯ ಕೊರೊನಾ ಸೊಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.
ಪಟ್ಟಣದ ಜವಾಹರ(ಗೌರಿಗುಡಿ) ರಸ್ತೆಯ ೭೩ ವರ್ಷದ ವೃದ್ದ, ಕಸಬಾಗಲ್ಲಿಯ ೬೮ವರ್ಷದ ವೃದ್ದೆ, ತೇರಗಾಂವ ಗ್ರಾಮದ ೩೬ವರ್ಷದ ಯುವಕ, ಹವಗಿಯ ೯೬ವರ್ಷದ ವೃದ್ದೆ ಹಾಗೂ ಇದೇ ಗ್ರಾಮದ 40ವರ್ಷದ ಪುರುಷ ಒಟ್ಟೂ ಐವರು ಕೊರೊನಾಕ್ಕೆ ಬಲಿಯಾಗಿದ್ದಾರೆ.

ಹಳಿಯಾಳ ತಾಲೂಕಾ ಆಸ್ಪತ್ರೆಯಲ್ಲಿ ಬುಧವಾರ ೮೫ ಜನರ ಗಂಟಲು ದ್ರವ ಸಂಗ್ರಹಿಸಿ ಕಾರವಾರದ ಲ್ಯಾಬ್ಗೆ ಕಳುಹಿಸಲಾಗಿದ್ದರೇ ೧೦೭ ಜನರಲ್ಲಿ ನಡೆಸಿದ ರ್ಯಾಪಿಡ್ ಟೆಸ್ಟ್ನಲ್ಲಿ 4 ಜನರಲ್ಲಿ ಕೊರೊನಾ ಸೊಂಕು ಕಾಣಿಸಿಕೊಂಡಿದೆ. ಇನ್ನೂ ಬುಧವಾರ 7ಜನರು ಗುಣಮುಖರಾಗಿ ಬಿಡುಗಡೆ ಹೊಂದಿದರು.
ತೇರಗಾಂವ ಮತ್ತು ಹವಗಿ ಗ್ರಾಮದ ಯುವಕರು ಕೊರೊನಾಕ್ಕೆ ಬಲಿಯಾಗಲು ಅವರು ಆರೋಗ್ಯದ ಬಗ್ಗೆ ವಹಿಸಿದ ನೀರ್ಲಕ್ಷö್ಯ ಹಾಗೂ ಜನರ ಸುಳ್ಳು ವದಂತಿಗಳೇ ಕಾರಣ ಎನ್ನಲಾಗಿದೆ. ಇನ್ನಾದರೂ ಜನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಾಗ ತಕ್ಷಣ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಸಂಪರ್ಕಿಸಬೇಕೆAದು ಕೊರೊನಾ ವಾರಿಂiÀರ್ಸ್ಗಳು ವಿನಂತಿಸಿದ್ದಾರೆ.
Leave a Comment