ಹೊನ್ನಾವರ: ಸೇವೆಯಲ್ಲಿ ಸದಾ ಮುಂಚೂಣೆಯಲ್ಲಿರುವ ಹೊನ್ನಾವರ ಲಯನ್ಸ್ ಕ್ಲಬ್ ಇದೀಗ ತಾಲೂಕಿನ ಕೇಂದ್ರ ಅಂಚೆ ಕಚೇರಿಗೆ ಆಟೋಮ್ಯಾಟಿಕ್ ಸಾನಿಟೈಸರ್ ಮಷೀನ್ ವಿತರಿಸುವ ಮೂಲಕ ಅಲ್ಲಿಯ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರ ಆರೊಗ್ಯ ಸುರಕ್ಷತೆಗೆ ಮುಂದಾಗಿದೆ. ಎಲ್ಲಡೆ ಕೊರೋನಾ ಮಹಾಮಾರಿಯ ಆರ್ಭಟ ಮುಂದುವರೆದಿದ್ದು, ಮಾಸ್ಕ ಮತ್ತು ಸ್ಯಾನಿಟೈಜರ್ ಬಳಕೆಯ ಬಗ್ಗೆ ಮಾಡಲಾಗುತ್ತಿದೆ. ತಾಲೂಕಿನ ಅಂಚೆ ಕಚೇರಿಗೆ ಸಾರ್ವಜನಿಕ ಸಂಪರ್ಕ ಹೆಚ್ಚಿನ ಪ್ರಮಾಣದಲ್ಲಿ ಇದ್ದು ಪ್ರತಿನಿತ್ಯ ನೂರಾರು ಜನರು ಅಂಚೆ ಕಚೇರಿಗೆ ವ್ಯವಹಾರಕ್ಕಾಗಿ ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲದೇ ಸಿಬ್ಬಂದಿಗಳು ಪತ್ರ ಬಟವಾಡೆ ,ಪಾರ್ಸೆಲ್ ಗಳ ವಿಲೇವಾರಿ ಸೇರಿದಂತೆ ಎಲ್ಲಡೆ ಸಂಚರಿಸುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೈ ಸ್ವಚ್ಛತೆ ಅತ್ಯಂತ ಪ್ರಮುಖವಾಗಿದ್ದು ಕೊರೋನವೈರಸ್ ಹರಡುವ ಭೀತಿ ಎದುರಾಗಿದೆ. ಇದನ್ನು ಮನಗಂಡು ಹೊನ್ನಾವರ ತಾಲೂಕಿನವರಿಗೆ ಉಪಯೋಗವಾಗುವಂತೆ ಸ್ವಚ್ಛತೆ ಕಾಪಾಡಿಕೊಳ್ಳಲು ಸ್ವಯಂ ಚಾಲಿತ ಸ್ಯಾನಿಟೈಸರ್ ಮಷೀನ್ ಕೊಡುಗೆಯಾಗಿ ನೀಡಿದರು., ಈ ಯಂತ್ರದ ಪ್ರಾಯೋಜಕತ್ವವನ್ನು ಈ ಹಿಂದೆ ಅಂಚೆ ಕಚೇರಿಯಲ್ಲಿ ಸೇವೆ ಮಾಡಿ ನಿವೃತ್ತರಾಗಿ ಪ್ರಸುತ್ತ ಲಯನ್ ಎನ್. ಜಿ. ಭಟ್ ವಹಿಸಿಕೊಂಡಿದ್ದರು. ಈ ಕಾರ್ಯಕ್ಕೆ ಅಂಚೆ ಕಚೇರಿ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷರು, ಪದಾಧಿಕಾರಿಗಳು,ಸದಸ್ಯರು ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.

Leave a Comment