ಹೊನ್ನಾವರಕ್ಕೆ ನೂತನ ಬಸ್ ನಿಲ್ದಾಣ ಮಂಜೂರಾಗಿದ್ದು, ನಿರ್ಮಾಣ ಹಂತದ ಕಾಮಾಗಾರಿ ನಡೆಯುವರೆಗೆ ತಾತ್ಕಲಿಕವಾಗಿ ಪೋಲಿಸ್ ಮೈದಾನಕ್ಕೆ ಶಿಪ್ಟ ಮಾಡಿರುದಾಗಿ ಗುರುವಾರ ಬ್ಯಾನರ್ ಹಾಕಲಾಗಿತ್ತು. ಅದೇ ರೀತಿ ಶುಕ್ರವಾರ ಬೆಳಿಗ್ಗೆಯಿಂದಲೇ ಮೂಲಭೂತ ಸೌಕರ್ಯಗಳ ಕೊರತೆ ಮಧ್ಯೆ ಪೋಲಿಸ್ ಮೈದಾನಕ್ಕೆ ಬಸ್ ನಿಲ್ದಾಣ ಎಂದು ಬೊರ್ಡ ಹಾಕಿ, ಬಸ್ ಸಂಚಾರ ಆರಂಭವಾಯಿತು. ಗ್ರಾಮೀಣ ಭಾಗದ ಬಸ್ ಹಾಗೂ ದೂರದ ಊರಿನಿಂದ ಆಗಮಿಸುವ ಬಸ್ಸುಗಳು ಮಧ್ಯಾಹ್ನದವರೆಗೆ ಮಾತ್ರ ಬಂದು ನಂತರ ಪುನಃ ಹಳೆ ಬಸ್ ನಿಲ್ದಾಣಕ್ಕೆ ಶಿಫ್ಟ ಮಾಡಲಾಯಿತು. ಕಳೆದ 6 ತಿಂಗಳಿನಿಂದ ಗೊಂದಲದ ಗೂಡಾಗಿದ್ದ ತಾತ್ಕಲಿಕ ಬಸ್ ನಿಲ್ದಾಣ ಮತ್ತೆ ಗೊಂದಲಮಯವಾಗಿದೆ.
ಮೂಲಭೂತ ಸೌಕರ್ಯದ ಕೊರತೆ ಮಧ್ಯೆ ತಾತ್ಕಲಿಕ ಬಸ್ ನಿಲ್ದಾಣ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣವಾದ ತಾತ್ಕಲಿಕ ಬಸ್ ನಿಲ್ದಾಣದಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಇಲ್ಲದಿರುದು ಒಂದಡೆಯಾದರೆ, ಶೌಚಾಲಯ ನಿರ್ಮಾಣ ಹಂತದಲ್ಲಿದೆ. ಕಂಟ್ರೋಲ್ ಕೊಠಡಿಯು ಸಮರ್ಪಕವಾಗಿಲ್ಲ. ಪ್ರಯಾಣಿಕರಿಗೆ ತಂಗುದಾಣ ವ್ಯವಸ್ಥೆ ಇಲ್ಲ. ಮಳೆ ನೀರು ನಿಂತು ಹೊಂಡಮಯವಾಗಿರುದರಿಂದ ಬಸ್ ಹೊರ ಹೋಗುವ ಸ್ಥಳದಲ್ಲಿ ಕೆಸರು ತುಂಬಿದೆ.
ಇಲಾಖೆಯ ನಡುವೆ ಕಿತ್ತಾಟ ಸಾರ್ವಜನಿಕರ ಪರದಾಟ: ಪೋಲಿಸ್ ಹಾಗೂ ಸಾರಿಗೆ ಇಲಾಖೆಯ ನಡುವೆ ನಡೆದ ಈ ಕಿತ್ತಾಟ ಸಾರ್ವಜನಿಕರಿಗೆ ಸಮಸ್ಯೆ ಉದ್ಬವಿಸಿದೆ. ಬೆಳಿಗ್ಗೆಯಿಂದಲೇ ಪ್ರಾರಂಭವಾದ ಬಸ್ ಸೇವೆ 12ಗಂಟೆಯವರೆಗೆ ನಡೆಯುವವರೆಗೆ ಪೋಲಿಸ್ ಇಲಾಖೆ ತಡೆಯದೇ ಆ ಬಳಿಕ ತಡೆದಿರುವುದು ಒಂದಡೆಯಾದರೆ ತಿಂಗಳ ಹಿಂದಿನಿಂದ ಶಡ್ ಹಾಗೂ ಶೌಚಾಲಯ ನಿರ್ಮಾಣ ಮಾಡುತ್ತಿರುವಾಗ ಪೋಲಿಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕಛೇರಿ ಮುಂದೆ ನಡೆದ ಬೆಳವಣೆಗೆ ಬೆಳಕಿಗೆ ಬರಲು ಇಷ್ಟು ಸಮಯ ಬೇಕಾಯಿತಾ? ಇನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ಅಧಿಕೃತವಾಗಿ ಆದೇಶ ಬರುವ ಮುಂಚೆ ಅಲ್ಲಿಗೆ ಹೋಗಿರುವುದು ಯಾಕೆ? ಆದೇಶ ಬರುವ ಮುಂಚೆ ಸೌಕರ್ಯ ವ್ಯವಸ್ಥೆ ಕಲ್ಪಿಸುವ ಮೊದಲೇ ಅತಿಕ್ರಮಣ ಮಾಡಿ ಕಾನೂನು ಉಲ್ಲಂಘನೆ ಮಾಡಿರುವುದಾದರೆ ಇವರ ಮೇಲೆ ಕ್ರಮ ಇಲ್ಲವಾ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಬಸ್ ನಿಲ್ದಾಣ ತೀರಾ ಅಗತ್ಯವಾಗಿದ್ದರೂ ನಿದಾನವಾಗಿ ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರದ ಹೊಸ್ತಿಲಿನಲ್ಲಿ ಇರುವಾಗ ಮೂಲಭೂತ ಸೌಕರ್ಯ ಇಲ್ಲದೇ ಹೋದರೆ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಸಮಸ್ಯೆ ಆಗುವುದರಲ್ಲಿ ಎರಡು ಮಾತಿಲ್ಲ. ಶುಕ್ರವಾರದ ಈ ನಿರ್ಧಾರದಿಂದ ಬೆಳಿಗ್ಗೆ ಗೇರುಸೊಪ್ಪಾ, ಕುಮಟಾ, ಭಟ್ಕಳ ಮಾರ್ಗದಿಂದ ಬಂದ ಬಸ್ಸುಗಳಿಂದ ನೂರಾರು ಸಂಖ್ಯೆಯ ಪ್ರಯಾಣಿಕರು ಪಟ್ಟಣಕ್ಕೆ ಆಗಮಿಸಿ ವಾಪಸ್ಸು ಹೋಗುವಾಗ ಸಮಸ್ಯೆ ಎದುರಿಸಿದರು, ಕುಮಟಾ, ಗೇರುಸೊಪ್ಪಾ ಮಾರ್ಗ ತೆರಳುವವರು, ಪೋಲಿಸ್ ಠಾಣಿಯ ಮುಂಭಾಗದಲ್ಲಿಯೇ ಬಸ್ಸು ಏರಿದರೆ, ಭಟ್ಕಳ ಮಾರ್ಗದತ್ತ ಸಂಚರಿಸುವ ಪ್ರಯಾಣಿಕರು ನಡೆದುಕೊಂಡು ಶರಾವತಿ ವೃತ್ತದತ್ತ ಹಿಡಿಶಾಪ ಹಾಕುವ ಮೂಲಕ ಆಗಮಿಸಿದರು. ಇನ್ನು ಮುಂದೆಯಾದರೂ ಸಕಲ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿ, ಅಧಿಕೃತ ಆದೇಶ ಪಡೆದು ನಿರ್ಧಾರ ಕೈಗೊಳ್ಳುವ ಕಾರ್ಯ ಸಾರಿಗೆ ಇಲಾಖೆ ಮಾಡಬೇಕಿದೆ.

……………………
ಪೋಲಿಸ್ ಇಲಾಖೆಯ ಅಧಿಕಾರಿಗಳಿಗೆ ಗೃಹ ಸಚೀವರು, ಉಸ್ತುವಾರಿ ಸಚೀವರು ಮಾತನಾಡಿ ಒಪ್ಪಿಸುವ ಕಾರ್ಯ ಈ ಹಿಂದೆಯೆ ಮಾಡಲಾಗಿತ್ತು. ಪರವಾನಗಿ ನೀಡಲು ಹಿಂದೆಟು ಹಾಕಿರುವದರಿಂದ ಪುನಃ ಮೊದಲಿನ ಸ್ಥಳಕ್ಕೆ ಬರಲಾಗಿದೆ. ಸದ್ಯ ಇದೇ ಸ್ಥಳದಲ್ಲಿ ಬಸ್ ನಿಲ್ದಾಣವಿರಲಿದ್ದು, ಸಾರ್ವಜನಿಕರು ಸಹಕರಿಸಬೇಕು.
ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ
Leave a Comment