ಹೊನ್ನಾವರ – ಪಟ್ಟಣ ವ್ಯಾಪ್ತಿಯಲ್ಲಿನ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ವಾರ್ಡ ಮಟ್ಟದಲ್ಲಿ ಜನ ಸ್ಪಂದನಾ ಸಭೆಗಳನ್ನು ನಡೆಸಲಾಗುತ್ತಿದೆ.
ಆಯಾ ವಾರ್ಡಗಳಿಂದ ಚುನಾಯಿತರಾದ ಸದಸ್ಯರು ಹಾಗೂ ಪಟ್ಟಣ ಪಂಚಾಯತ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದ ಜನರ ಸಮಸ್ಯೆಗಳನ್ನು ವಿಚಾರಿಸಿದರು. ಕುಡಿಯುವ ನೀರು, ತೆರಿಗೆ, ಬೀದಿ ದೀಪ, ಸಿವಿಲ್ ಕಾಮಗಾರಿ, ಕಸದ ಸಮಸ್ಯೆ ಕುರಿತಂತೆ ಜನರು ತಮ್ಮ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಮುಕ್ತವಾಗಿ ಸಭೆಯಲ್ಲಿ ಹೇಳಿಕೊಂಡರು.
ಪ್ರತೀ ವಾರ್ಡನಲ್ಲಿಯೂ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು ಚುನಾಯಿತ ಸದಸ್ಯರೂ ಸಹಕಾರ ನೀಡಿದ್ದಾರೆ. ಜನರು ಹೇಳಿಕೊಂಡ ಸಮಸ್ಯೆಗಳನ್ನು ಆದಷ್ಟು ತ್ವರಿತವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ ತಿಳಿಸಿದ್ದಾರೆ.


Leave a Comment