ಹೊನ್ನಾವರ;
ತಾತ್ಕಲಿಕ ಬಸ್ ನಿಲ್ದಾಣವನ್ನು ಸುವ್ಯವಸ್ಥಿತವಾಗಿ ಆರಂಭಿಸುವಂತೆ ಕರವೇ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಹೊನ್ನಾವರ ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣದ ಕಾರಣದಿಂದ ಸ್ಥಳವಕಾಶದ ಸಮಸ್ಯೆ ಹಿನ್ನಲೆಯಲ್ಲಿ ರಸ್ತೆ ಮಧ್ಯೆಯೆ ನಿಲ್ಲುತ್ತಿರುದರಿಂದ ಸಾರ್ವಜನಿಕರಿಗೆ ಸಂಚಾರ ನಡೆಸಲು ಸಮಸ್ಯೆ ಉಂಟಾಗಿದೆ.

ತಾತ್ಕಲಿಕ ಬಸ್ ನಿಲ್ದಾಣವನ್ನು ಪೋಲಿಸ್ ಮೈದಾನದಲ್ಲಿ ನಿರ್ಮಾಣ ಮಾಡಲು ಹೋರಟಿದ್ದಾರೆ. ಇದು ಸುರಕ್ಷಿತವಲ್ಲ. ಇದರ ಬದಲಿಗೆ ಪ್ರಭಾತನಗರದ ಸೆಂಟ್ ಅಂತೋನಿ ಮೈದಾನಕ್ಕೆ ಸ್ಥಳಾಂತರ ಮಾಡುವುದರಿಂದ ಸಾರ್ವಜನಿಕರಿಗೆ ಅನೂಕೂಲವಾಗಲಿದೆ. ಈ ಸ್ಥಳದಲ್ಲಿ ಶೌಚಾಲಯ, ಹಾಗೂ ಕಂಪೌಡ್ ವ್ಯವಸ್ಥೆ ಇದ್ದು, ಕಳೆದ ಮೂರು ವರ್ಷದಿಂದ ಶಾಲೆ ಕೂಡಾ ಬಂದ್ ಆಗಿದೆ. ಈ ಬಗ್ಗೆ ವಿಶೇಷ ಗಮನವಹಿಸಬೇಕು. ಅಲ್ಲದೇ ತಾಲೂಕಿನಲ್ಲಿ ಕೊರೋನಾ ನೆಪ ಒಡ್ಡಿ ಹಲವು ತಿಂಗಳನಿಂದ ವಾರದ ಸಂತೆ ಬಂದ್ ಆಗಿದೆ. ಜಿಲ್ಲೆಯ ವಿವಿಧ ತಾಲೂಕಿನಲ್ಲಿ ವಾರದ ಸಂತೆ ಆರಂಭವಾಗಿರುದರಿಂದ ತಾಲೂಕಿನಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಶಿಘ್ರ ಆರಂಭಿಸುವಂತೆ ಕರವೇ ಪ್ರವೀಣ ಶೆಟ್ಟಿ ಬಣದಿಂದ ಮನವಿ ಸಲ್ಲಿಸಿದರು.
ತಹಶೀಲ್ದಾರ ವಿವೇಕ ಶೆಣ್ವಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕ ಅಧ್ಯಕ್ಷ ಉದಯರಾಜ ಮೇಸ್ತ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಧಾಕರ ಹೊನ್ನಾವರ, ಗೌರವಾಧ್ಯಕ್ಷ ಕೇಶವ ಮೇಸ್ತ, ಸಂಘಟನೆಯ ಪ್ರಮುಖರಾದ ಶೇಖರ ವಗ್ಗರ್, ಸುಭಾಷ ಮೇಸ್ತ, ರಾಘವ ಮೇಸ್ತ, ಗಣಪತಿ ಮೇಸ್ತ ಮತ್ತಿತರರು ಉಪಸ್ಥಿತರಿದ್ದರು.
Leave a Comment