ಹೊನ್ನಾವರ : ತಾಲೂಕಿನ ಕೋಡಾಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಅನಿಲಗೋಡ ಗ್ರಾಮದ ಪುರಾಣ ಪ್ರಸಿದ್ದ ಕ್ಷೇತ್ರವಾದ ಶ್ರೀಕುಮಾರರಾಮ ದೇವಸ್ಥಾನದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಸುನಿಲ್ ನಾಯ್ಕ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಗ್ರಾಮಸ್ಥರ ದಶಕಗಳ ಬೇಡಿಕೆ ರಸ್ತೆ ನಿರ್ಮಾಣ 1 ಕೋಟಿ ಎಪ್ಪತೈದು ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡುವ ಜೊತೆಗೆ ಕುದ್ರಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಂಶಿ ಸೇತುವೆಯಿಂದ ಹರಿಜನಕೇರಿಗೆ ಹೋಗುವ ರಸ್ತೆಗೆ ದುರಸ್ಥಿಗೆ 15 ಲಕ್ಷ ವೆಚ್ಚದ ಕಾಮಗಾರಿU ಇದೇ ಸಂದರ್ಭದಲ್ಲಿ É ಚಾಲನೆ ನೀಡಿದರು.

ಕುಮಾರರಾಮ ದೇವಸ್ಥಾನದಲ್ಲಿ ಪಕ್ಷದ ಕಾರ್ಯಕರ್ತರು 1 ಸಾವಿರ ಬಾಳೆಹಣ್ಣು ಮತ್ತು 25 ತೆಂಗಿನಕಾಯಿ ಪೂಜೆ ಸಲ್ಲಿಸಿ ಶಾಸಕ ಸುನೀಲ್ ನಾಯ್ಕ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಬಳಿಕ ಶಾಸಕ ಸುನೀಲ ನಾಯ್ಕ ಮಾತನಾಡಿ ನಿಮ್ಮೆಲ್ಲರ ಬಹುವರ್ಷದ ಬೇಡಿಕೆ ಇಂದು ಈಡೇರಿದೆ. ಮುಂದಿನ ದಿನದಲ್ಲಿ ಗ್ರಾಮದ ಸರ್ವಂಗೀಣ ಅಭಿವೃದ್ದಿಗೆ ಶ್ರಮಿಸುತ್ತೇನೆ. ಚುನಾವಣೆ ಪೂರ್ವದಲ್ಲಿ ನೀವು ಇಟ್ಟಿರುವ ಪ್ರೀತಿ ವಿಶ್ವಾಸವನ್ನು ಎಂದಿಗೂ ಉಳಿಸಿಕೊಂಡು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಳ್ಕೂರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಕೇಶವ ನಾಯ್ಕ, ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ, ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಗಣಪತಿ ನಾಯ್ಕ ಬಿಟಿ, ದೇವಸ್ಥಾನದ ಮೊಕ್ತೇಸರರಾದ ತಿಪ್ಪಯ ಬಾಗಿಲವೈದ್ಯ, ಮುಖಂಡರಾದ ಶಂಭು ಬೈಲಾರ, ರಾಜೇಶ ನಾಯ್ಕ. ವೇಂಕಟೇಶ ನಾಯ್ಕ, ಪಾಂಡು ನಾಯ್ಕ, ಶ್ರೀನಿವಾಸ ನಾಯ್ಕ, ಚಂದ್ರಕಾಂತ ನಾಯ್ಕ, ಮಣಿಕಂಠ ನಾಯ್ಕ, ವಿನುತಾ ಪೈ, ಧರ್ಮ ನಾಯ್ಕ ಬಾಲಚಂದ್ರ ನಾಯ್ಕ, ಮತ್ತಿತರರು ಹಾಜರಿದ್ದರು.


Leave a Comment