ಭಟ್ಕಳ: ಸಹಾಯಕ ಆಯುಕ್ತ ಹಾಗೂ ಪುರಸಭಾ ಆಡಳಿತಾಧಿಕಾರಿ ಭರತ್ ಎಸ್. ಅವರು ಇಂದು ದಿಡೀರ್ ಅಂಗಡಿಗಳಿಗೆ ಭೇಟಿ ನೀಡಿ ಅಂಗಡಿಕಾರರ ಲೈಸನ್ಸ್ ಪರಿಶೀಲಿಸಿದರಲ್ಲದೇ ಮೂರು ಬಾರಿ ನೋಟೀಸು ನೀಡಿ ಲೈಸನ್ಸ್ ನವೀಕರಿಸಿಕೊಳ್ಳಲು ಹೇಳಿದ್ದರೂ ಸಹ ನವೀಕರಿಸಿಕೊಳ್ಳದೇ ಇರುವ ಐವರ ಅಂಗಡಿಗಳನ್ನು ಮುಚ್ಚಿಸಿ ಬೀಗ ಹಾಕಿದರು.
ನಗರದ ಶಂಶುದ್ಧೀನ್ ಸರ್ಕಲ್ ಹಾಗೂ ಮುಖ್ಯ ರಸ್ತೆಗಳಲ್ಲಿ ದಾಳಿ ನಡೆಸಿದ ಸಹಾಯಕ ಆಯುಕ್ತರು ಹಾಗೂ ಪುರಸಭಾ ಹಿರಿಯ ಆರೋಗ್ಯ ನಿರೀಕ್ಷಕಿ ಸುಜಯಾ ಸೋಮನ್, ವೇಣುಗೋಪಾಲ ಶಾಸ್ತ್ರಿ ಹಾಗೂ ಇತರರು ಅಂಗಡಿಕಾರರಿಗೆ ಲೈನಸ್ಸ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು ಪ್ರತಿ ವರ್ಷವೂ ಕೂಡಾ ಪುರಸಭೆಯಿಂದ ನವೀಕರಿಸಿಕೊಳ್ಳಬೇಕು. ಇಲ್ಲವಾದಲ್ಲಿ ವ್ಯಾಪಾರ ವಹಿವಾಟು ನಡೆಸುವುದು ಕಾನೂನು ಬಾಹೀರ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಲ ಅಂಗಡಿಕಾರರು ತಮ್ಮ ಅಂಗಡಿಗಳಿಗೆ ಬೀಗ ಹಾಕದಂತೆ ಕೇಳಿಕೊಂಡರೂ ಕೂಡಾ ಲೈನಸ್ಸ್ ನವೀಕರಣಕ್ಕೆ ಕಾಗದ ಪತ್ರಗಳನ್ನು ನೀಡಿ ನವೀಕರಿಸಿಕೊಳ್ಳುವಂತೆ ತಾಕೀತು ಮಾಡಿ ಬೀಗ ಹಾಕಲಾಯಿತು. ಕೆಲವೊಂದು ಅಂಗಡಿಕಾರರು 8-10 ವರ್ಷಗಳಿಂದ ನವೀಕರಿಸಿಕೊಳ್ಳದೇ ವ್ಯಾಪಾರ ನಡೆಸುತ್ತಿದ್ದು ಇದು ಪುರಸಭಾ ಕಾಯಿದೆಗೆ ವಿರುದ್ಧವಾಗಿದೆ ಎಂದು ತಿಳಿಸಲಾಯಿತು.
Leave a Comment