ಹೊನ್ನಾವರ – ಪಟ್ಟಣದ ರಾಮತೀರ್ಥ ಗುಡ್ಡದ ಚಾಂದ್ರಾಣಿ ಬಳಿ ಇರುವ ಆರುಸೀಮೆ ಕೆರೆಯಲ್ಲಿ ಮೀನು ಹಿಡಿಯಲು ಹೋದ ಸ್ಥಳಿಯ ವ್ಯಕ್ತಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವನನ್ನು ಕೇಶವ ಸುರೇಶ ಉಪ್ಪಾರ್ (35) ಎಂದು ಗುರುತಿಸಲಾಗಿದೆ. ಈತ ಕಳೆದ ಮಂಗಳವಾರ 10 ಗಂಟೆ ಸುಮಾರಿಗೆ ಕೆರೆಯಲ್ಲಿ ಮೀನು ಹಿಡಿಯಲು ಹೋಗುವುದಾಗಿ ಹೇಳಿ ಹೋಗಿದ್ದವನು ಕಣ್ಮರೆಯಾಗಿದ್ದ. ಗುರುವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಆರುಸೀಮೆ ಕೆರೆಯಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತನ ಸಹೋದರ ಮಹೇಶ ಉಪ್ಪಾರ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಅಣ್ಣನ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾನೆ.
Leave a Comment