ಹೊನ್ನಾವರ – ಮಂಕಿ ಅರಲೆಯ ನಿವಾಸಿ 32 ರ ಪ್ರಾಯದ ರಾಘವೇಂದ್ರ ಕಮಲಾಕರ ಪ್ರಭು ಎಂಬಾತ ಕಾಣೆಯಾದ ಬಗ್ಗೆ ಮನೆಯವರು ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಂದೆಯ ಚಿಕಿತ್ಸೆಯ ಖರ್ಚಿನ ಲೆಕ್ಕ ಕೇಳಿದಾಗ ಮನೆಯವರೊಂದಿಗೆ ಸಿಟ್ಟುಮಾಡಿಕೊಂಡು ದಿನಾಂಕ 17-09-2020 ಗುರುವಾರ ಮಧ್ಯಾಹ್ನ 4 ಗಂಟೆಗೆ ಮನೆಯಿಂದ ಬೈಕ್ತೆಗೆದುಕೊಂಡು ಹೋದವನು ತನ್ನ ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿದ್ದಾನೆಂದು ದೂರಿನಲ್ಲಿ ವಿವರಿಸಿದ್ದಾರೆ.
ಕಾಣೆಯಾದಾತ 5 ಪೂಟ್ 6 ಇಂಚು ಎತ್ತರವಿದ್ದು ಗೋದಿಬಣ್ಣ ದುಂಡನೆಯ ಮುಖ ತೆಳ್ಳನೆಯ ಮೈಕಟ್ಟು ಹೊಂದಿದ್ದಾನೆ. ಹಳದಿ ಮತ್ತು ನೀಲಿ ಬಣ್ಣ ಮಿಶ್ರಿತ ಟಿ ಶರ್ಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಕನ್ನಡ ಮತ್ತು ಕೊಂಕಣಿ ಭಾಷೆ ಮಾತನಾಡುತ್ತಿದ್ದು ಬಲ ಕೈ ಮೇಲೆ ಆಂಜನೇಯ ದೇವರ ಹಚ್ಚೆ ಇದೆ. ಈ ಚಹರೆಯುಳ್ಳ ವ್ಯಕ್ತಿ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಮನವಿಮಾಡಿದ್ದಾರೆ. ಮಂಕಿ ಪೊಲೀಸ್ ಠಾಣೆ :08387 – 257886 ಅಥವಾ ಎಸ್.ಪಿ ಕಛೇರಿ ಕಾರವಾರ :08382 – 226233 ನಂಬರ್ಎ

Leave a Comment