ಕಳೆದ ವರ್ಷ ಶÀತಮಾನೋತ್ಸವ ಆಚರಿಸಿರುವ ಗ್ರಾಹಕ ಸ್ನೇಹಿಯಾಗಿರುವ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಹೊನ್ನಾವರ ಅರ್ಬನ್ ಕೋ-ಒಪರೇಟಿವ್ ಬ್ಯಾಂಕ್ 2019-20ನೇ ಸಾಲಿನಲ್ಲಿ ರೂ.144.06 ಲಕ್ಷ ನಿರ್ವಹಣಾ ಲಾಭವನ್ನು ಗಳಿಸಿದ್ದು, ಸರಕಾರಕ್ಕೆ ಆದಾಯ ತೆರಿಗೆ ಪಾವತಿಸುವ ಬಗ್ಗೆ ಅನುವು ಮಾಡಿದ ನಂತರ ರೂ.102.76 ಲಕ್ಷ ನಿಕ್ಕಿ ಲಾಭ ಗಳಿಸಿದೆ ಎಂತ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಘವ ವಿಷ್ಣು ಬಾಳೇರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬ್ಯಾಂಕಿನ ಠೇವು ಸಂಗ್ರಹಣೆ ರೂ.185.02 ಕೋಟಿ ತಲುಪಿದ್ದು, ಸಾಲ-ಮುಂಗಡಗಳು ರೂ.118.42 ಕೋಟಿಗಳಿಗೆ ತಲುಪಿವೆ. ಶೇರು ಭಂಡವಾಳ ಮತ್ತು ಸ್ವಂತ ನಿಧಿಗಳು ರೂ.18.23 ಕೋಟಿಗಳಾಗಿದ್ದು, ಒಟ್ಟೂ ದುಡಿಯುವ ಭಂಡವಾಳ ರೂ.208.50 ಕೋಟಿಗಳಿಗೆ ಏರಿಕೆಯಾಗಿದೆ. ಒಟ್ಟೂ ರೂ.72.10 ಕೋಟಿ ಹಣವನ್ನು ಬ್ಯಾಂಕು ಕೇಂದ್ರ ಸರ್ಕಾರದ ಸಾಲಪತ್ರಗಳಲ್ಲಿ, ಓoಟಿ-Sಐಖ ಬೋಂಡ್ಗಳಲ್ಲಿ ಹಾಗೂ ವಿವಿಧ ಬ್ಯಾಂಕುಗಳಲ್ಲಿ ಗುಂತಾಯಿಸಿರುವದು ಬ್ಯಾಂಕಿನ ಆರ್ಥಿಕ ಸ್ಥಿರತೆಯನ್ನು ದೃಢೀಕರಿಸಿದೆ. ಬ್ಯಾಂಕು ಪ್ರಸಕ್ತ ಸಾಲಿನಲ್ಲಿ ರೂ.303.44 ಕೋಟಿ ಒಟ್ಟೂ ವ್ಯವಹಾರವನ್ನು ನಡೆಸಿದೆ. ಬ್ಯಾಂಕಿನ ಅಖಂಖ ಭಾರತೀಯ ರಿಜರ್ವ ಬ್ಯಾಂಕ್ ಸೂಚಿಸಿರುವ 9% ಕ್ಕಿಂತ ಸಾಕಷ್ಟು ಹೆಚ್ಚು ಅಂದರೆ 12.25 ಇದ್ದು, ಇದು ಬ್ಯಾಂಕಿನ ಆರ್ಥಿಕ ಸುಭದ್ರತೆಯ ಸಂಕೇತವಾಗಿದೆ. ಒಟ್ಟೂ 24115 ಶೇರು ಸದಸ್ಯರನ್ನು ಹೊಂದಿರುವ ಬ್ಯಾಂಕು ರೂ.6.79 ಕÉೂೀಟಿಗಳಿಗÉ ಶÉೀರು ಭಂಡವಾಳ ವÀÀೃದ್ಧಿಸಿಕೊಂಡಿದೆ. ಬ್ಯಾಂಕು ಕಳೆದ 7 ವರ್ಷಗಳಿಂದ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡುತ್ತಾ ಬಂದಿದೆ. ಸತತವಾಗಿ ಬ್ಯಾಂಕು ಲೆಕ್ಕಪರಿಶೋಧನೆಯಲ್ಲಿ ‘ಅ’ ವರ್ಗದಲ್ಲಿ ಮುಂದುವರೆದಿದೆ. ವರದಿ ವರ್ಷದಲ್ಲಿ ಮುಖ್ಯವಾಗಿ ಮೀನುಗಾರಿಕೆಯು ಸಂಪೂರ್ಣ ಸ್ಥಗಿತಗೊಂಡಿತ್ತು ಹಾಗೂ ವರ್ಷಾಂತ್ಯದಲ್ಲಿ ಕೋವಿಡ್-19ರ ನಿಮಿತ್ತ ಸಾಲ ವಸೂಲಾತಿಯಲ್ಲಿ ಸಾಕಷ್ಟು ವ್ಯತ್ಯಯವಾಯಿತು. ಆದಾಗ್ಯೂ ಬೇಂಕಿನ ಸಾಲ ವಸೂಲಾತಿ ಪ್ರಮಾಣ 97.44% ಇರುತ್ತದೆ ಎಂದು ತಿಳಿಸಲು ಹರ್ಷವೆನಿಸುತ್ತದೆ ಎಂತ ಅವರು ತಿಳಿಸಿದ್ದಾರೆ.
ಬ್ಯಾಂಕು ಸಾಲ ಮತ್ತು ಮುಂಗಡಗಳನ್ನು ನೀಡಲು ಹೆಚ್ಚಿನ ಸಂಪನ್ಮೂಲವನ್ನು ಹೊಂದಿದ್ದು, ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಬ್ಯಾಂಕಿನ ಶರತ್ತುಗಳಿಗೆ ಒಳಪಟ್ಟು ಪ್ರತಿ ಗ್ರಾಂ ಬಂಗಾರಕ್ಕೆ ಗರಿಷ್ಠ ರೂ. 3,100/- ಬಂಗಾರ ದಾಗಿನೆ ಸಾಲವನ್ನು ಶೇ. 7.95 ರಿಂದ ಶೇ. 11 ರವರೆಗಿನ ಬಡ್ಡಿದರಗಳಲ್ಲಿ ನೀಡುತ್ತಿದೆ. ಇದರ ಹೊರತಾಗಿ ಬ್ಯಾಂಕಿನ ಶರತ್ತುಗಳಿಗೆ ಒಳಪಟ್ಟು ವಿಶೇಷ ಸಾಲ ಯೋಜನೆಗಳಾದ ಕಾರು ಸಾಲ 7.95%, ಗೃಹಸಾಲ 8.50% ಹಾಗೂ ವ್ಯವಹಾರ ಉದ್ದಿಮೆಗಳಿಗೆ 9.00% ರ ಬಡ್ಡಿದರಗಳಲ್ಲಿ ಸಾಲವನ್ನು ನೀಡಲಾಗುತ್ತಿವೆ.
ಬ್ಯಾಂಕು ಕೋರ್ ಬ್ಯಾಂಕಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬ್ಯಾಂಕಿನ ಗ್ರಾಹಕರಿಗೆ ತಂತ್ರಜ್ಞಾನ ಪೂರಿತ ಅತ್ಯಾಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ನೀಡುತ್ತಿದೆ. ತನ್ಮೂಲಕ ಎಲ್ಲಾ ಶಾಖೆಗಳಲ್ಲಿ ಆರ್.ಟಿ.ಜಿ.ಎಸ್./ನೆಫ್ಟ್, ಸಿ.ಟಿ.ಎಸ್.ಕ್ಲಿಯರಿಂಗ್, ಎಸ್.ಎಂ.ಎಸ್. ಅಲರ್ಟ್ ಸರ್ವೀಸ್, ರುಪೇ ಕಾರ್ಡ್, ಇ-ಸ್ಟಾಂಪಿಂಗ್ ಮುಂತಾದ ನವೀನ ಗ್ರಾಹಕ ಸ್ನೇಹಿ ಸೌಲಭ್ಯಗಳನ್ನು ಪ್ರಚುರಪಡಿಸುತ್ತಿದೆ. ಬ್ಯಾಂಕು ಸ್ವಂತ ಎ.ಟಿ.ಎಮ್. ಹೊಂದಿದೆ. ಹಾಗೂ ಮುಂದಿನ ದಿನಗಳಲ್ಲಿ ಬ್ಯಾಂಕು ಡಿಜಿಟಲ್ ಬ್ಯಾಂಕಿಂಗ್ ಹಾಗೂ ಇ-ಪೇಮೆಂಟ್ಗಳಿಗೆ ಹೆಚ್ಚಿನ ಒತ್ತು ನೀಡಲಿದೆ.
ಬ್ಯಾಂಕು ಸಮಾಜಮುಖಿಯಾಗಿ ತನ್ನ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಜಿಲ್ಲೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಪರಿಪಾಠ ಹಾಕಿಕೊಂಡಿದೆ. ವಿಕಲಚೇತನ ವಿದ್ಯಾರ್ಥಿಗಳನ್ನು ಸಹ ಪ್ರೋತ್ಸಾಹಿಸಿದೆ. ಬ್ಯಾಂಕು ತನ್ನ ಧರ್ಮದಾನ ನಿಧಿಯಿಂದ ಬಡ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ನೀಡುತ್ತಿದೆ. ಬ್ಯಾಂಕು ತನ್ನ ಸಂಸ್ಥಾಪಕರಾದ ದಿ. ಎಮ್. ಎ. ಕಿಣಿ ಹಾಗೂ ದಿ. ಎಲ್. ಕೆ. ಶ್ಯಾನಭಾಗ ಶ್ರೋಫ್ರವರ ಸ್ಮರಣಾರ್ಥ ನಿರ್ಮಿಸಿರುವ ಸಭಾಭವನವನ್ನು ಸಹಕಾರಿ ವಲಯದ ತರಬೇತಿ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುತ್ತಿದೆ.
ಬ್ಯಾಂಕು ತನ್ನ ಬೋರವೆಲ್ ನೀರನ್ನು ಶುದ್ಧೀಕರಿಸುವ ನೀರಿನ ಘಟಕವೊಂದನ್ನು ಸ್ಥಾಪಿಸಿದ್ದು ಸಾರ್ವಜನಿಕರಿಗೆ ಒಂದು ರೂಪಾಯಿಗೆ ಒಂದು ಲೀಟರ ಶುದ್ಧೀಕರಿಸಿದ ಕುಡಿಯುವ ನೀರನ್ನು ಒದಗಿಸುತ್ತಿದೆ. ಪ್ರತಿ ದಿವಸ ಸಾರ್ವಜನಿಕರು ಅಜಮಾಸ ಒಂದು ಸಾವಿರದಷ್ಟು ಲೀಟರ ನೀರಿನ ಪ್ರಯೋಜನ ಪಡೆಯುತ್ತಿದ್ದಾರೆ. ಆ ಪ್ರಕಾರ ಸಹಕಾರದ ಮೂಲ ಅರ್ಥದಂತೆ ‘ಜನಸೇವೆಯೇ ಜನಾರ್ಧನ ಸೇವೆ’ ಎಂಬ ನೈಜ ಕಳಕಳಿಯನ್ನು ಅನುಷ್ಠಾನಕ್ಕೆ ತಂದಿದೆ. ಕೋವಿಡ್-19ರ ನಿಮಿತ್ತ ಲಾಕ್ಡೌನ್ ಸಮಯದಲ್ಲಿ ಬ್ಯಾಂಕು ದುರ್ಬಲರಿಗೆ ಆಹಾರ ದಿನಸಿ ಕಿಟ್ಗಳನ್ನು ನೀಡಿ ಸಹಕರಿಸಿದೆ. ಹೊನ್ನಾವರ, ಕುಮಟಾ ಹಾಗೂ ಮಂಕಿ ಪೋಲಿಸ ಠಾಣೆಗಳಿಗೆ ಮಾಸ್ಕ್ ಹಾಗೂ ಸಾನಿಟೈಸರ ಪೂರೈಸಿದೆ. ಅದೇ ಪ್ರಕಾರ ಸರ್ಕಾರದ ಸೂಚನೆಯಂತೆ ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ನೀಡಿ ನೆರವಾಗಿದೆ ಎಂತ ಬ್ಯಾಂಕಿನ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment