ಹೊನ್ನಾವರ – ಅಂತರಾಷ್ಟ್ರೀಯ ಪ್ರವಾಸೋಧ್ಯಮಕ್ಕೆ ತೆರೆದುಕೊಳ್ಳುವ ಉದ್ದೇಶದೊಂದಿಗೆ ಬೀಚ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್ ಪಡೆಯುವನಿಟ್ಟಿನಲ್ಲಿ ತಯಾರಿ ನಡೆಸಿರುವ ಕಾಸರಕೋಡ ಇಕೋ ಬೀಚ್ ರಕ್ಷಣೆಯ ಉದ್ದೇಶದ ಸೇವ್ ಮೈ ಬೀಚ್ ಅಭಿಯಾನಕ್ಕೆ ಶಾಸಕ ಸುನಿಲ್ ನಾಯ್ಕ ದ್ವಜಾರೋಹಣ ನೆರವೇರಿಸುವ ಮೂಲಕ ಶುಕ್ರವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು 8 ಕೋಟಿ ವೆಚ್ಚದಲ್ಲಿ ಪ್ರವಾಸೊದ್ಯಮ ಇಲಾಖೆಯ ವತಿಯಿಂದ ಬೀಚ್ ಅಭಿವೃದ್ಧಿ ಹೊಂದುತ್ತಿರುವುದು ಅತ್ಯಂತ ಒಳ್ಳೆಯ ಬೆಳವಣಿಗೆ ಇದರಿಂದ ತಾಲೂಕಿನ ಪ್ರವಾಸೋಧ್ಯಮ ಅಭಿವೃದ್ಧಿಯಾಗಲಿದ್ದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೂರಾರು ಮಂದಿಗೆ ಉದ್ಯೋಗವನ್ನೊದಗಿಸಲಿದೆ ಎಂದರು.
ಮಾತನಾಡಿ ಜಿಲ್ಲೆಯ ಇಕೋ ಬೀಚ್ ಪ್ರತಿಷ್ಠಿತ ಬ್ಲೂಪ್ಲ್ಯಾಗ್ ಪ್ರಮಾಣ ಪತ್ರ ಪಡೆಯಲು ಒಂದು ತಿಂಗಳ ಕಾಲವಕಾಶವಿದೆ. ಕಡಲತೀರ ಉಳಿಸಿ ಎನ್ನುವ ಘೋಷವಾಕ್ಯದೊಂದಿಗೆ ಧ್ವಜಾರೋಹಣ ನಡೆಸಿ ನಾನು ನನ್ನ ಸಮುದ್ರತೀರವನ್ನು ರಕ್ಷಿಸುತ್ತೇನೆ ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡುವ ದಿನವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರ, ಕಡಲಜೀವಿಗಳ ರಕ್ಷಣೆ ಮಾಡುವ ಉದ್ದೇಶವನ್ನು ಹೊಂದಿದೆ. ಇದು ವಿದೇಶಿ ಪ್ರವಾಸಿಗರನ್ನು ಆಕರ್ಷಣೆ ಮಾಡುವುದಷ್ಟೆ ಅಲ್ಲದೇ ಪರಿಸರ ಸಂರಕ್ಷಣೆಯ ಕಾರ್ಯಕ್ರಮವಾಗಿದೆ ಎಂದು ಪ್ರವಾಸೊದ್ಯಮ ಇಲಾಖೆಯ ಜಂಟಿ ನಿರ್ದೆಶಕರಾದ ಪುರುಷೋತ್ತಮ ಕಾರ್ಯಕ್ರಮದ ಉದ್ದೇಶವನ್ನು ಬಿಚ್ಚಿಟ್ಟರು. ಡಿ.ಎಫ್.ಓ ಗಣಪತಿ.ಕೆ, ಎ.ಸಿ.ಫ್ ಕೆ.ಟಿ. ಬೋರಯ್ಯ, ಆರ್.ಎಫ್.ಓ ಶರತ ಶೆಟ್ಟಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Comment