ಹೊನ್ನಾವರ: ತಾಲೂಕಿನ ಮೂಡ್ಕಣಿಯ ದೊಡ್ಡಹಿತ್ತಲ ಭಾಗದ ಗ್ರಾಮಸ್ಥರು ರಸ್ತೆ ಸರಿಪಡಿಸುವಂತೆ ಹಿಂದಿನಿಂದಲೂ ಮನವಿ ಸಲ್ಲಿಸಿದ್ದರೂ ಯಾರಿಂದಲೂ ಸೂಕ್ತ ಸ್ಪಂದನೆ ದೊರಕಿರಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ಈ ಭಾಗದ ಸಾರ್ವಜನಿಕರಿಗೆ ನೀಡಿದ ಭರವಸೆಯಂತೆ ರಸ್ತೆ ಕಾಮಗಾರಿಗೆ ಶಾಸಕರು ಚಾಲನೆ ನೀಡಿರುದರಿಂದ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಅವರ ಕಾರ್ಯಲಯಕ್ಕೆ ತೆರಳಿ ಅಭಿನಂದನಾಪೂರ್ವಕವಾಗಿ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ಬಳಿಕ ಶಾಸಕರು ಮಾತನಾಡಿ ಮೂಡ್ಲಿಯ ಏತ ನೀರಾವರಿ ಕಾಲುವೆಯ ಪುನಶ್ಚೆತನಕ್ಕೆ 40 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು, ಶಿಘ್ರದಲ್ಲೆ ಕಾಮಗಾರಿ ಪ್ರಾರಂಭಿಸಲಾಗುವುದು. ಮುಂದಿನ ದಿನದಲ್ಲಿ ಅಡಕಾರ, ಮೂಡ್ಕಣಿ ಸುತ್ತಮುತ್ತಲಿನ ಗ್ರಾಮದ ರಸ್ತೆ ಕಾಮಗಾರಿಯನ್ನು ಹಂತಹಂತವಾಗಿ ಅಭಿವೃದ್ದಿಪಡಿಸಲಾಗುವುದು ಎಂದರು.
ಮೂಡ್ಕಣಿ ಭಾಗದ ಗದ್ದೆಗೆ ಹಳ್ಳದ ಕಂಠ ಮುರಿದು ನೂರಾರು ರೈತರ ಗದ್ದೆ ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿ ಹಾನಿ ಸಂಭವಿಸುದರಿಂದ ಹಳ್ಳದ ಹೂಳೆತ್ತಿ ತಡೆಗೊಡೆ ನಿರ್ಮಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಜಲವಳ್ಳಿ ವಿ.ಎಸ್.ಎಸ್ ಅಧ್ಯಕ್ಷ ಜಯಂತ ನಾಯ್ಕ, ತ್ರಿವಿಕ್ರಮ ನಾಯ್ಕ, ವಿನಾಯಕ ನಾಯ್ಕ ಮೂಡ್ಕಣಿ, ನರಸಿಂಹ ನಾಯ್ಕ, ಜಗದೀಶ ನಾಯ್ಕ, ದೊಡ್ಡಹಿತ್ತಲ್ ಭಾಗದ ಗ್ರಾಮಸ್ಥರು ಉಪಸ್ಥಿತರಿದ್ದರು.
Leave a Comment