ಬೀದಿ ನಾಯಿಗಳು ಗುಂಪು ಗುಂಪಾಗಿ ದಂಡಯಾತ್ರೆ ಹೊರಟಂತ ದ್ರಶ್ಯಗಳು ತಾಲೂಕಿನಲ್ಲಿ ಹಾದುಹೋದ ಹೆದ್ದಾರಿಗಳಲ್ಲಿ ಸರ್ವೇ ಸಾಮಾನ್ಯ ಎನ್ನುವಂತೆ ಕಾಣಸಿಗುತ್ತದೆ. ಬೀದಿನಾಯಗಳ ಉಪಟಳ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಿಂದಲೂ ಪದೇ ಪದೇ ದೂರುಗಳು ಕೇಳಿಬರುತ್ತಿದೆ. ದ್ವಿಚಕ್ರ ವಾಹನ ಸವಾರರಂತೂ ಹೆದ್ದಾರಿಯಲ್ಲಿ ಸಂಚರಿಸುವಾಗ ಎದುರಿನಿಂದ ಬರುವ ವಾಹನಗಳ ಭಯಕ್ಕಿಂತ ನಾಯಿಗಳ ಭಯವೇ ಹೆಚ್ಚು ಎನ್ನುತ್ತಿದ್ದಾರೆ.

ರಸ್ತೆಯ ಯಾವ ಬದಿಯಿಂದ ನಾಯಿಗಳು ಓಡಿ ಬಂದು ಚಕ್ರದಡಿ ಸಿಲುಕತ್ತದೆ ಎಂದು ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ನಾಯಿ ಅಡ್ಡಬಂದಾಗ ಬ್ರೇಕ್ ಒತ್ತಿ ಸ್ಕಿಡ್ ಆಗಿ ಬಿದ್ದು ಪೆಟ್ಟುಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿದೆ. ಬೀದಿನಾಯಿಗಳು ಗುಂಪಾಗಿರುವಾಗ ಮತ್ತಷ್ಟು ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ಜಾನುವಾರುಗಳನ್ನು ಬೆನ್ನಟ್ಟಿ ಗಾಯಗೊಳಿಸುತ್ತವೆ ಎನ್ನುವುದು ಹಲವರ ಆರೋಪವಾಗಿದೆ. ಇದೇ ಕಾರಣಕ್ಕೆ ಕೆಲವರು ಬೀದಿ ನಾಯಿಗಳ ಸಂತತಿಯನ್ನು ನಿಯಂತ್ರಿಸಲು ಅವುಗಳನ್ನು ಹಿಡಿದು ಪಶು ವೈದ್ಯರಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ ಘಟನೆಗಳೂ ವರದಿಯಾಗುತ್ತಿದೆ. ಕಟ್ಟು ಸಾಕುವುದಾದರೆ ಮಾತ್ರ ನಾಯಿಗಳನ್ನು ಸಾಕಿ ಬಿಟ್ಟು ಸಾಕುವುದಾದರೆ ಸಾಕಲೇ ಬೇಡಿ ಎನ್ನುವ ಮಾತು ಕೇಳಿಬರುತ್ತಿದೆ.

Leave a Comment