ಹಳಿಯಾಳ:- ಪ್ರಧಾನಿ ನರೇಂದ್ರ ಮೊದಿಯವರ ಅಚ್ಚೇ ದಿನ್ ಎಲ್ಲಿ ಹೊದವು ? ಸಬಕಾ ಸಾಥ್ ಸಬಕಾ ವಿಕಾಸ್ ಆಗಿರದೇ ಸಬಕಾ ಸತ್ಯಾನಾಸ್ ಆಗಿದ್ದು, ಜಿಡಿಪಿ ತೀವೃ ಕುಸಿತ ಕಂಡಿದೆ ಅಲ್ಲದೇ ದೇಶದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಕಿಡಿ ಕಾರಿದರು.
ಅವರ ನೇತೃತ್ವದಲ್ಲಿ ಯುವ ಕಾಂಗ್ರೇಸ್ ಘಟಕ, ಕ್ಷತ್ರೀಯ ಮರಾಠಾ ಪರಿಷತ್, ಕರ್ನಾಟಕ ನವನಿರ್ಮಾಣ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಪಡೆ ಸಂಘಟನೆಗಳನ್ನೊಳಗೊಂಡು ಕರ್ನಾಟಕ ಬಂದ್ ಹಿನ್ನೆಲೆ ನಡೆದ ಹಳಿಯಾಳ ಬಂದ್ ಪ್ರತಿಭಟನೆ ಉದ್ದೇಶಿಸಿ ಇಲ್ಲಿಯ ಶಿವಾಜಿ ವೃತ್ತದಲ್ಲಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ದಿವಾಳಿ ತೆಗೆದಿವೆ, ಉಭಯ ಸದನಗಳಲ್ಲಿ ಚರ್ಚಿಸದೇ ಮಸೂದೆಗಳನ್ನು, ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯಾಗಿದೆ ಎಂದ ಅವರು ಎಪಿಎಮ್ಸಿ, ಭೂ ಸುಧಾರಣಾ, ಕೃಷಿ ಮತ್ತು ವಿದ್ಯುತ್ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು, ರೈತ, ಕಾರ್ಮಿಕ ಸಂಘಟನೆಗಳ ಕರೆ ನೀಡಿದ ಕರ್ನಾಟಕ ಬಂದ್ಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ನೂತನ ಕಾಯ್ದೆಗಳಿಂದ ಮುಂದಿನ ದಿನಗಳಲ್ಲಿ ರೈತರು ತೀವೃ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರೈತರಿಗೆ ಸಹಕಾರಿಯಾಗುವ ಕಾಯ್ದೆಗಳನ್ನು ಬಿಟ್ಟು ರೈತರನ್ನು ಕೊಲ್ಲುವ ಕಾಯ್ದೆಗಳನ್ನು ತರುವ ಮೂಲಕ ಬಿಜೆಪಿ ಪಕ್ಷ ತಾನು ರೈತವಿರೋಧಿ ಎನ್ನವುದನ್ನು ಮತ್ತೇ ಸಾಬಿತು ಪಡಿಸಿದೆ ಎಂದರು.

ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ರೈತ ಮುಖಂಡ ಸುರೇಶ ಶಿವಣ್ಣವರ, ಪುರಸಭೆ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಪುರಸಭೆ ಸದಸ್ಯೆ ಸುವರ್ಣಾ ಮಾದರ ಮಾತನಾಡಿ ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಶಿವಾಜಿ ವೃತ್ತದಲ್ಲಿ ಪ್ರತಿಭಟನೆಗೂ ಮುನ್ನ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೇರವಣಿಗೆ ನಡೆಸಿ ಸರ್ಕಾರದ ವಿರುದ್ದ ಘೊಷಣೆ ಕೂಗಲಾಯಿತು. ಬಳಿಕ ಇಲ್ಲಿಯ ಶಿವಾಜಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟಿಸಿ, ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು ಹಾಗೂ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಲಾಯಿತು.
ಮನವಿಯಲ್ಲಿ ಪ್ರಮುಖವಾಗಿ ಎಪಿಎಮ್ಸಿ, ಭೂ ಸುಧಾರಣಾ, ಕೃಷಿ ಸಂಬಂಧಿತ ಕಾಯ್ದೆ, ಗೊವಿನ ಜೊಳಕ್ಕೆ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ತೆರೆಯುವುದು, ಹಳಿಯಾಳ ತಾಲೂಕನ್ನು ನೆರೆ ಪಿಡಿತ ಪಟ್ಟಿಗೆ ಸೇರಿಸಿ ರೈತರಿಗೆ ಪರಿಹಾರ ಬಿಡುಗಡೆಗೊಳಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿಡಲಾಗಿದೆ.
ಪ್ರತಿಭಟನೆಯಲ್ಲಿ ಯುವ ಕಾಂಗ್ರೇಸ್ ಅಧ್ಯಕ್ಷ ರವಿ ತೋರಣಗಟ್ಟಿ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ಮಹೇಶ್ರಿ ಮಿಶ್ಯಾಳೆ, ಸಹಕಾರಿ ಯುನಿಯನ್ನ ಶಿವಪುತ್ರಪ್ಪಾ ನುಚ್ಚಂಬ್ಲಿ, ಪುರಸಭೆ ಸದಸ್ಯರಾದ ಅನಿಲ ಚವ್ವಾಣ, ನವೀಣ ಕಾಟಕರ, ಕನ್ನಡಪರ ಸಂಘಟನೆಯ ಶಿವಾನಂದ ಕಮ್ಮಾರ, ಕೃಷ್ಣಾ ಹುಲಸ್ವಾರ, ಪ್ರಮುಖರಾದ ಕೃಷ್ಣಾ ಶಹಾಪುರಕರ, ಗುಲಾಬಷಾ ಲತಿಫನವರ, ಸುಂದರ ಕಾನಕತ್ರಿ ಇತರರು ಇದ್ದರು.
Leave a Comment