ಹೊನ್ನಾವರ ;ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ
ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂಧಿಗಳು ವಿವಿಧ ಬೇಡಿಕೆಗಳ
ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿದ್ದು ಇವತ್ತಿಗೆ ಹತ್ತನೆ ದಿನಕ್ಕೆ ಕಾಲಿಟ್ಟಿದೆ.
ಗಾಂಧಿ ಜಯಂತಿ ದಿನದಿಂದ ಪ್ರತಿದಿನ ಆಸ್ಪತ್ರೆಯ ಮುಂಭಾಗದಲ್ಲಿ ಒಂದು
ತಾಸು ಧರಣಿ ನಡೆಸಲು ಮುಷ್ಕರ ನಿರತ ಸಿಬ್ಬಂಧಿಗಳು ನಿರ್ಧರಿಸಿದ್ದು
ಅದರಂತೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಸಮಾನ ಹುದ್ದೆಗೆ ಸಮಾನ
ವೇತನ,ಸೇವಾ ಭದ್ರತೆ, ಮಾನವ ಸಂಪನ್ಮೂಲ ನಿಯಮಾವಳಿ ರಚನೆ
ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರಕಾರದ ಗಮನಕ್ಕೆ
ತರುವಂತೆ ತಹಶೀಲ್ದಾರ ವಿವೇಕ ಶೇಣ್ವೆ ರವರಿಗೆ ಮನವಿ ಪತ್ರ
ಸಲ್ಲಿಸಿದ್ದರು.
ತಾಲೂಕಿನ ಮೂವತ್ತಕ್ಕು ಹೆಚ್ಚು ಸಿಬ್ಬಂಧಿಗಳು
ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.
Leave a Comment