ಹೊನ್ನಾವರ: ಲಾಕ್ ಡೌನ್ ಮುಗಿಯುತ್ತಿದ್ದಂತೆ ಕ್ರೀಕೆಟ್ ಪ್ರೀಯರಿಗೆ ಹುಚ್ಚು ಹಿಡಿಸಿರುವ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಬೆಟ್ಟಿಂಗ್ನತ್ತ ಮುಖ ಮಾಡುತ್ತಿದೆ.
ನೆರೆಯ ಭಟ್ಕಳ ಬಳಿಕ ಹೊನ್ನಾವರದಲ್ಲಿಯು ಇದರ ಜಾಡು ವಿಸ್ತರಿಸಿರುವುದು ಬೆಳಕಿಗೆ ಬಂದಿದೆ. ರವಿವಾರದ ಎರಡನೇ ಪಂದ್ಯವಾದ ಮುಂಬೈ ಇಂಡಿಯನ್ಸ ಮತ್ತು ಡೆಲ್ಲಿ ಕ್ಯಾಪಿಟೆಲ್ಸ ನಡುವೆ ಪಂದ್ಯದ ಸಮಯದಲ್ಲಿ ತಾಲೂಕಿನ ಹಳದಿಪುರದ ಸಂತೆ ಮಾರ್ಕೆಟ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಬೆಟ್ಟಿಂಗ್ ನಡೆಸುತ್ತಿರುವರನ್ನು ಹೆಡೆಮುರಿ ಕಟ್ಟಿದ್ದು ಪೋಲಿಸ್ ಕಾರ್ಯಚರಣೆಯಲ್ಲಿ 21030 ರೂಪಾಯಿ 10 ಮೊಬೈಲ್ಗಳು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಇದರಲ್ಲಿ ತೊಡಗಿದ್ದ ರಾಮ ಮಾಸ್ತಿ ಗೌಡ(32), ಸುನೀಲ ಈಶ್ವರ ಗೌಡ(22), ಮಹೇಶ ರಾಮದಾಸ್ ನಾಯ್ಕ(26), ಕೃಷ್ಣ ರಾಮ ಗೌಡ(27), ಸಚೀನ ರಾಮದಾಸ ನಾಯ್ಕ(26), ಲಕ್ಷ್ಮೀಶ ಮಾದೇವ ಗೌಡ(23), ಕೃಷ್ಣ ಗಣೇಶ ಗೌಡ(24), ವಿನಾಯಕ ರಾಮ ಗೌಡ(21), ಶ್ರೀನಿವಾಸ ಯಶವಂತ ಗೌಡ(22), ಶ್ರೀಧರ ಜಟ್ಟು ಗೌಡ(27) ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಸಿಪಿಐ ಶ್ರೀಧರ ಎಸ್.ಆರ್. ಪಿಎಸೈ ಶಶಿಕುಮಾರ, ಪಿಎಸೈ ಅಶೋಕಕುಮಾರ್ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment