ಹೊನ್ನಾವರ : ಮುಗ್ವಾ ಪಂಚಾಯತ್ ವ್ಯಾಪ್ತಿಗೆ ಒಳಪಡುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ದ್ವೀಚಕ್ರ ವಾಹನ ಸವಾರರಿಗೆ ತಡೆದು ದಂಡ ವಿಧಿಸಿ, ಉಚಿತ ಮಾಸ್ಕ್ ವಿತರಿಸಿದರು.
ಪಿ.ಡಿ.ಓ ಕವಿತಾ ಸಂಕೊಳ್ಳಿ, ಕಾರ್ಯದರ್ಶಿ ಬಾಬುರಾವ್ ನಾಯ್ಕ ಪೊಲೀಸ್ ಸಿಬ್ಬಂದಿಗಳು ಸೇರಿ ದಂಡ ಪ್ರಕ್ರಿಯೆ ನಡೆಸಿದರು. ಕೆಲವರು ಪೊಲೀಸರನ್ನು ನೋಡುತ್ತಿದ್ದಂತೆ ವಾಹನವನ್ನು ತಿರುಗಿಸಿಕೊಂಡು ಹೋಗುತ್ತಿರುವ ದೃಶÀ್ಯ ಕಂಡು ಬಂತು. ಇನ್ನೂ ಕೆಲವರು ಅಸಂಬದ್ಧ ರೀತಿಯಲ್ಲಿ ಮಾಸ್ಕ್ ಧರಿಸಿದ್ದು ಅವರಿಗೂ ಸಹ ದಂಡ ವಿಧಿಸಿ ಸರಿಯಾದ ಕ್ರಮದಲ್ಲಿ ಮಾಸ್ಕ್ ಧರಿಸುವಂತೆ ತಿಳಿಹೇಳಲಾಯಿತು. ಕೆಲವು ಸರ್ಕಾರಿ ವೈದ್ಯರೇ ಮಾಸ್ಕ್ ಧರಿಸದೇ ಸಂಚರಿಸಿದ್ದು ಅಧಿಕಾರಿಗಳಿಗೆ ತಿಳಿ ಹೇಳಲು ಮುಜುಗರವಾಯಿತು. ಇಲ್ಲಿಯವರೆಗೆ 24 ಜನರಿಗೆ ದಂಡ ವಿಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.
Leave a Comment