ಹಳಿಯಾಳ :- ಮನುಷ್ಯ ಪ್ರಕೃತೀಯ ವಿರುದ್ದ ನಡೆಯುತ್ತಿರುವುದರಿಂದ ಇಂದು ಕೊರೊನಾದಂತಹ ಮಹಾಮಾರಿ ಜಗತ್ತನ್ನೇ ಸಂಕಷ್ಟದ ಕೂಪಕ್ಕೆ ತಳ್ಳಿದ್ದು, ಇನ್ನಾದರೂ ಮನುಷ್ಯ ಪ್ರಕೃತಿಯನ್ನು ಪ್ರೀತಿಸಬೇಕಿದೆ ಎಂದು ಚಿಕ್ಕತೊಟ್ಟಲಕೆರಿ ಮತ್ತು ಶಿರಸಿ ಬಣ್ಣದ ಮಠದ ಶ್ರೀಶಿವಲಿಂಗ ಮಹಾಸ್ವಾಮಿಗಳು ಕರೆ ನೀಡಿದ್ದಾರೆ.

ಪಟ್ಟಣದ ವೀರಕ್ತ ಮಠದಲ್ಲಿ ಹಳಿಯಾಳ ತಾಲೂಕಿನ ಹಿರಿಯ ಆಧ್ಯಾತ್ಮಿಕ ಚಿಂತಕರು, ಪ್ರವಚನಕಾರರು, ಉತ್ತರ ಕನ್ನಡ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ನ ಗೌರವಾಧ್ಯಕ್ಷರಾಗಿದ್ದ ದಿ.ಎಂ.ಎನ್.ತಳವಾರ ಹಾಗೂ ಅವರ ಪತ್ನಿ ದಿ.ನಿಲಾಂಬಿಕಾ ಮತ್ತು ಹಳಿಯಾಳ ಆರ್ಯವೈಶ್ಯ ಸಮಾಜದ ತಾಲೂಕಾಧ್ಯಕ್ಷರಾಗಿದ್ದ ದಿ.ಅಶೋಕ ಕಣಿಮೆಹಳ್ಳಿ ಅವರಿಗೆ ನುಡಿನಮನ, ಶೃದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು ಆಧ್ಯಾತ್ಮಿಕ ಚಿಂತಕ ಎಮ್.ಎನ್.ತಳವಾರ ಕಳೆದುಕೊಂಡಿದ್ದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆ ಎಂದರು ಅಲ್ಲದೇ ಆದಷ್ಟು ಬೇಗ ಕೊರೊನಾ ಜಗತ್ತಿನಿಂದ ದೂರವಾಗಲಿ ಎಂದು ಪ್ರಾರ್ಥಿಸಿದರು.
ಹಳಿಯಾಳ ಕೆಕೆ ಹಳ್ಳಿ ಶ್ರೀಗುರು ನಿತ್ಯಾನಂದ ಮಠದ ಸುಬ್ರಹ್ಮಣ್ಯ ಸ್ವಾಮಿಜಿಗಳು ಮಾತನಾಡಿ ಜಾತಿ,ಧರ್ಮ ಮೀರಿ ಬೆಳೆದು ತಾಲೂಕಿನಲ್ಲಿ ಎಲ್ಲ ಸಮಾಜದವರನ್ನು ಜೊತೆಗೆ ತೆಗೆದುಕೊಂಡು ಹೊಗುತ್ತಿದ್ದ ಜನಾನುರಾಗಿಯಾಗಿದ್ದ ಎಮ್.ಎನ್.ತಳವಾರ ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ಹಾನಿ ಎಂದರು.
ಹಳಿಯಾಳದ ಆದಿಶಕ್ತಿ ಪಿಠದ ಕೃಷ್ಣಾನಂದ ಭಾರತಿ ಸ್ವಾಮಿಜಿ ಮಾತನಾಡಿ ಕೊರೊನಾ ಸೃಷ್ಠಿಸಿರುವ ಆತಂಕ ಇಂದು ಉತ್ತಮರನ್ನೇ ಕಳೆದುಕೊಳ್ಳುವಂತೆ ಮಾಡುತ್ತಿದೆ. ಸರ್ವಧರ್ಮ ಸಹಿಷ್ಣುವಾಗಿದ್ದ, ದಾನ ಧರ್ಮಗಳಲ್ಲಿ ಮುಂದಿದ್ದ ತಳವಾರ ಅವರು ಎಲ್ಲರಿಗೂ ಆದರ್ಶಪ್ರಾಯರು ಎಂದು ಅವರ ಕಾರ್ಯಗಳನ್ನು ಶ್ಲಾಘಿಸಿದರು.
ಉಪನ್ಯಾಸಕ ಟಿಸಿ ಮಲ್ಲಾಪುರಮಠ ಮಾತನಾಡಿ ಹಳಿಯಾಳದಲ್ಲಿ “ತಳವಾರ ಅಜ್ಜ” ಎಂದೇ ಖ್ಯಾತರಾಗಿದ್ದ ನಿವೃತ್ತ ಇಂಜೀನಿಯರ್, ಹಳಿಯಾಳ ತಾಲೂಕಿನಲ್ಲಿ ಆಧ್ಯಾತ್ಮದ ಜ್ಞಾನ ಧಿವಿಗೆಯನ್ನು ಬೆಳಗಿಸಿದವರು. ಎಲ್ಲ ಧರ್ಮಗಳ ಆಧ್ಯಾತ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ತಳವಾರಜ್ಜ ಖಾಯಂ ಆಹ್ವಾನಿತರಾಗಿದ್ದರು ಇಂದು ಅವರನ್ನು ಕಳೆದುಕೊಂಡು ಹಳಿಯಾಳ ಬಡವಾಗಿದೆ ಎಂದರು. ಅಲ್ಲದೇ ಹಳಿಯಾಳ ಆರ್ಯ ವೈಶ್ಯ ಸಮಾಜದ ಅಧ್ಯಕ್ಷರಾಗಿದ್ದ ದಿ.ಅಶೋಕ ಕಣಿಮೆಹಳ್ಳಿ ಹಳಿಯಾಳದಲ್ಲಿ ಯೋಗ, ಧ್ಯಾನದ ತರಬೇತಿಯಲ್ಲಿ ಅವರದ್ದು ಉತ್ತಮ ಪಾತ್ರವಿದೆ ಎಂದು ಬಣ್ಣಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಶೀವುದೇವ ದೇಸಾಯಿಸ್ವಾಮಿ, ಉದ್ಯಮಿ ಉದಯ ಜಾಧವ, ಗೃಹಿಣಿ ಸುಮಿತ್ರಾ ಓಶಿಮಠ ಮಾತನಾಡಿದರು. ಡಾ.ಸಿಎಸ್ ಓಶಿಮಠ ಅವರು ನುಡಿನಮನ ಗೀತೆ ಸಾದರ ಪಡಿಸಿ ಅಗಲಿದ ಮಹನೀಯರಿಗೆ ಸಂಗೀತ-ಶೃದ್ದಾಂಜಲಿ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮುತ್ತು ದೇಸಾಯಿಸ್ವಾಮಿ, ಜಿಡಿ ಗಂಗಾಧರ, ಎನ್.ಜಿ.ಪಾಟನಕರ, ರಾಜೇಶ್ವರಿ ಹಿರೇಮಠ, ಎಮ್.ಬಿ ತೊರಣಗಟ್ಟಿ, ಶಿವು ಶೆಟ್ಟರ್, ಬಿಎಚ್ ಶಿವಪ್ಪ, ಬಸವರಾಜ ಬೆಂಡಿಗೇರಿಮಠ, ಉದಯ ಹೂಲಿ, ಲಿಂಗರಾಜ ಹಿರೇಮಠ, ರವಿ ತೊರಣಗಟ್ಟಿ, ಸಚಿನ ಹಳ್ಳಿಕೇರಿ ಇತರರು ಇದ್ದರು.
Leave a Comment