ಹೊನ್ನಾವರ – ಇತ್ತೀಚೆಗೆ ಉತ್ತರಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ನಡೆದ ಹತ್ಯಾಚಾರ ಖಂಡಿಸಿ ಘಟನೆಯ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವಂತೆ ಆಗ್ರಹಿಸಿ ತಾಲೂಕಾ ಜನವಾದಿ ಮಹಿಳಾ ಸಂಘಟನೆ, ಸಿ.ಐ.ಟಿ.ಯು, ಡಿ.ವೈ.ಎಪ್.ಐ, ಎಸ್.ಎಪ್.ಐ ಸಂಘಟನೆಗಳು ಜಂಟಿಯಾಗಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಉತ್ತರಪ್ರದೇಶದಲ್ಲಿ ಸಂಪ್ಟೆಬರ್ 14ರಂದು ನಾಗರಿಕ ಸಮಾಜ ನಾಚಿ ತಲೆತಗ್ಗಿಸಬೇಕಾದ ಘಟನೆ ನಡೆದಿದೆ. ಇಂತಹ ದುರ್ಘಟನೆ ನಡೆದರೂ ಪೆÇೀಲೀಸರು ಪ್ರಕರಣ ದಾಖಲಿಸಿಕೊಳ್ಳುಲು 4-5 ದಿನ ಕಾಲಹರಣ ನಡೆಸಿ ಪ್ರಕರಣದಲ್ಲಿ ಒತ್ತಡ ತೀವ್ರವಾದ ಮೇಲಷ್ಟೆ ಪ್ರಕರಣ ದಾಖಲಾಗಿದೆ. ಉತ್ತರಪ್ರದೇಶವೊಂದು ಗೂಂಡಾ ರಾಜ್ಯದಂತಾಗಿದ್ದು ಅಲ್ಲಿ ಕಾನೂನುಗಳಿಗೆ ಬೆಲೆಯೇ ಇಲ್ಲದ ಜಂಗಲ್ ರಾಜ್ಯವಾಗಿ ಮಾರ್ಪಟ್ಟಿದೆ. ತನಿಖೆ ನಡೆಸಿದ ಸಿ.ಬಿ.ಐ ಸ್ಥಳೀಯವಾಗಿ ಇಬ್ಬರು ಐ.ಪಿ.ಎಸ್ ಮತ್ತು ಒಬ್ಬರು ಐ.ಎ.ಎಸ್ ಅಧಿಕಾರಿಗಳ ಕರ್ತವ್ಯ ಲೋಪವನ್ನು ಎತ್ತಿ ತೋರಿಸಿ ಕ್ರಮಕ್ಕೆ ಸೂಚನೆ ನೀಡಿದ್ದರೂ ಅವರ ಮೇಲೆ ಸರಕಾರ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ಸಂಘಟನೆಯ ಸದಸ್ಯರು ಆರೋಪಿಸಿದ್ದಾರೆ.
ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಶವ ಸಂಸ್ಕಾರಕ್ಕೂ ಅವಕಾಶ ನೀಡದೆ ಮಧ್ಯರಾತ್ರಿಯಲ್ಲಿ ತಾವೇ ಚಿತೆಗೆ ಬೆಂಕಿ ಇಟ್ಟ ಪೆÇೀಲೀಸ್ ಮತ್ತು ಇತರ ಅಧಿಕಾರಿಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಸರಿಯಾಗಿ ಪ್ರಕರಣ ದಾಖಲಿಸಿಕೊಳ್ಳದೇ ಕಾನೂನಿಗೆ ಅಪಚಾರ ಮಾಡಿದ ಸ್ಥಳೀಯ ಪೆÇೀಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ತಹಶೀಲ್ದಾರ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಿ.ಐಟಿಯು ಜಿಲ್ಲಾಧ್ಯಕ್ಷ ತಿಲಕ ಗೌಡ, ತಾಲೂಕ ಅಧ್ಯಕ್ಷ ತಿಮ್ಮಪ್ಪ ಗೌಡ, ಭಟ್ಕಳ ತಾಲೂಕ ಅಧ್ಯಕ್ಷ ಪುಂಡಲೀಕ ನಾಯ್ಕ, ಜನವಾದಿ ಮಹಿಳಾ ಸಂಘಟನೆಯ ಕಲ್ಯಾಣಿ ಗೌಡ, ಚಂದ್ರಕಲಾ ಪಟಗಾರ, ದೇವಿ ಗೌಡ, ಕಾವ್ಯ ಗೌಡ, ರೈತ ಸಂಘಟನೆಯ ಮಂಜುನಾಥ ಗೌಡ, ಅಣ್ಣಪ್ಪ ಗೌಡ ಹಾಜರಿದ್ದರು.
Leave a Comment