ಅಂಕೋಲಾ:ತಾಲೂಕಿನಲ್ಲಿ ಮನೆ ಕಳ್ಳತನ ನಡೆಸಿದ ನಾಲ್ಕು ಜನ ಆರೋಪಿಗಳನ್ನು ಬಂದಿಸಿದ ಘಟನೆ ಅಂಕೋಲಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಮ್ರಾನ್ ಮಕಬುಲ್ ಬ್ಯಾಡಗಿ (23), ಮುಬಾರಕ್ ಅಬ್ದುಲ್ ಶೇಖ್ (21) , ಬಸವರಾಜ ನಾಗಪ್ಪ ವಡ್ಡರ್ (23) ಹಾಗೂ ಮಲಿಕ್ ಅಬ್ದುಲ್ ದೊಡ್ಮನಿ (19 ಎಂದು ಗುರುತಿಸಲಾಗಿದೆ.

ಈ ನಾಲ್ವರು ಆರೋಪಿಗಳು ಹಾವೇರಿ ಜಿಲ್ಲೆಯ ನಿವಾಸಿಗಳಾಗಿದ್ದು ಬಟ್ಟೆ ವ್ಯಾಪಾರ ,ಡ್ರೈವಿಂಗ್ ಹಾಗು ಗಾವಡಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.ಇವರು ಅಂಕೋಲಾ ಸುತ್ತಮುತ್ತಲಿನ ಪ್ರದೇಶಗಳನ್ನು ಗುರುತಿಸಿ ಹೊಂಚು ಹಾಕಿ ದರೋಡೆ ಮಾಡಿದ್ದು ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್.ಐ ಸಂಪತ್ ಅವರ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತರಿಂದ ಕೃತ್ಯಕ್ಕೆ ಬಳಸಿದ 50,000 ರೂ ಮೌಲ್ಯದ ಹೋಲ್ ಮಷೀನ್, ಹುಂಡೈ ಕಂಪನಿಯ ಒಂದು ಕಾರು ಹಾಗೂ 20,500 ನಗದು ಸೇರಿ ಒಟ್ಟು 3,72,100 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಅಂಕೋಲಾ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ ಅಧೀಕ್ಷಕರಾದ I P S ಶಿವಪ್ರಕಾಶ ದೇವರಾಜು ರವರು ಬಹುಮಾನ ಘೋಷಿಸಿದ್ದಾರೆ
Leave a Comment