ಹಳಿಯಾಳ:- ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯ ಛತ್ರನಾಳ ಕ್ರಾಸ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎದುರು ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿ, ದೊಡ್ಡ ಹೊಂಡ ಬಿದ್ದಿದ್ದು ಪ್ರತಿದಿನ ಕೆಸರಿನಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿದ್ದು ಗುರುವಾರವು ಮತ್ತೇ ವಾಹನಗಳು ಸಿಲುಕಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ವಾಹನ ಸವಾರರು, ಪ್ರಯಾಣಿಕರು ಪರದಾಡಬೇಕಾದ ವಿದ್ಯಮಾನ ನಡೆಯಿತು.

ಬಾಣಸಗೇರಿ ಗ್ರಾಮದ ಸಮೀಪ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎದುರು ಕಳಪೆ ರಸ್ತೆ ಕಾಮಗಾರಿಯಿಂದ ರಸ್ತೆಯಲ್ಲಿ ದೊಡ್ಡ ಹೊಂಡವೇ ನಿರ್ಮಾಣವಾಗಿದೆ. ರಾಜ್ಯ ಹೆದ್ದಾರಿಯಾಗಿರುವ ಇಲ್ಲಿ ಪ್ರತಿನಿತ್ಯ ಭಾರಿ, ಲಘು ವಾಹನಗಳು ಸೇರಿ ನೂರಾರು ವಾಹನಗಳು ಸಂಚರಿಸುತ್ತವೇ ಇದರಿಂದ ಸಂಪೂರ್ಣ ಕೆಸರಿನಿಂದ ಕೂಡಿರುವ ಈ ಹೊಂಡದಲ್ಲಿ ಪ್ರತಿದಿನ ವಾಹನಗಳು ಸಿಕ್ಕಿ ಹಾಕಿಕೊಂಡು ಬಳಿಕ ಜೆಸಿಬಿ, ಕ್ರೇನ್ ಮೂಲಕ ತೆಗೆಸಬೇಕಾಗಿದ್ದು, ವಾಹನ ಸವಾರರಿಗೆ ದೊಡ್ಡ ಸವಾಲ್ ಆಗಿ ಪರಿಣಮಿಸಿದೆ.
ಗುರುವಾರ ಕಟ್ಟಿಗೆ ಲೋಡ್ ತುಂಬಿದ ವಾಹನ ಇಲ್ಲಿ ಸಿಲುಕಿಕೊಂಡಿದ್ದರಿಂದ 2 ಕೀಮಿಗೂ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು, ವಾಹನ ಸವಾರರು ತೀವೃ ತೊಂದರೆ ಅನುಭವಿಸಬೇಕಾಯಿತು. ಇಷ್ಟೇಲ್ಲಾ ಸಮಸ್ಯೆ ಆಗುತ್ತಿದ್ದರು ಸಹಿತ ಸಂಬಂಧ ಪಟ್ಟ ಇಲಾಖೆಯವರು ಮಾತ್ರ ರಸ್ತೆಯ ಹೊಂಡವನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡದೆ ಇರುವುದು ಪ್ರಯಾಣಿಕರ ಹಾಗೂ ಸಾರ್ವಜನೀಕರ ಆಕ್ರೊಶಕ್ಕೆ ಕಾರಣವಾಗಿದೆ.

Leave a Comment