ಹಳಿಯಾಳ:- ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ
ಮತ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಹಳಿಯಾಳದಲ್ಲಿ
ಬುಧವಾರ 867 ಮತದಾರರ ಪೈಕಿ 602 ಜನ ಮತದಾರರು
ತಮ್ಮ ಹಕ್ಕನ್ನು ಚಲಾಯಿಸಿದ್ದು 69.43 % ಮತದಾನವಾಗಿದೆ.
ಹಳಿಯಾಳದ ಮಿನಿ ವಿಧಾನಸೌಧದಲ್ಲಿಯ ತಹಶೀಲ್ದಾರ್
ಕಚೇರಿಯಲ್ಲಿ ತೆರೆಯಲಾದ ಮತಗಟ್ಟೆ ಸಂಖ್ಯೆ 110 ರಲ್ಲಿ
ಮತದಾನ ಪ್ರಕ್ರಿಯೇ ನಡೆಯಿತು.
ಹಳಿಯಾಳ ತಾಲೂಕಿನ ಪದವಿಧರ ಪುರುಷ
ಮತದಾರರು 495 ಇದ್ದರೇ ಮಹಿಳೆಯರು 372 ಒಟ್ಟೂ 867
ಮತದಾರರು ಹಳಿಯಾಳ ಕ್ಷೇತ್ರದಲ್ಲಿದ್ದರು. ಈ ಪೈಕಿ
ಬುಧವಾರ ನಡೆದ ಮತದಾನ ಪ್ರಕ್ರಿಯೇಯಲ್ಲಿ 380
ಪುರುಷ 76.77% ಮತ್ತು 222 ಮಹಿಳೆಯರು 59.68%
ಮತದಾನವಾಗಿದ್ದು ಒಟ್ಟೂ 602 ಜನ ಮತದಾನ ಮಾಡಿದ್ದು
ತಾಲೂಕಿನ ಮತದಾನ 69.43 ರಷ್ಟಾಗಿದೆ ಎಂದು ತಹಶೀಲ್ದಾರ್
ವಿದ್ಯಾಧರ ಗುಳಗುಳೆ ತಿಳಿಸಿದ್ದಾರೆ.
Leave a Comment