ಯಲ್ಲಾಪುರ: ತಾಲೂಕಿನ ಗಡಿಭಾಗವಾದ ಕಲ್ಲೇಶ್ವರದ ನಿವಾಸಿ ಗೋಪಾಲಕೃಷ್ಣ ನಾರಾಯಣ ಭಟ್ಟ (84) ಕಾಣೆಯಾಗಿದ್ದು ಅವರು ಪತ್ತೆಯಾದಲ್ಲಿ ಹುಡುಕಿಕೊಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ. ಅಕ್ಟೊಬರ್ 28ರಂದು ಬೆಳಗ್ಗೆ ಮನೆಯಲ್ಲಿ ಇದ್ದ ಅವರು ನಂತರ ಏಕಾಏಕಿ ಕಣ್ಮರೆಯಾಗಿದ್ದಾರೆ. ವಿಷಯ ಬೆಳಕಿಗೆ ಬಂದ ನಂತರ ಊರಿನವರು ಹಾಗೂ ಬಂಧುಗಳು ಅವರ ಹುಟುಕಾಟ ನಡೆಸಿದರೂ ಪತ್ತೆಯಾಗಿಲ್ಲ.

ಮೂರು ತಿಂಗಳ ಹಿಂದೆ ಗೋಪಾಲಕೃಷ್ಣ ಭಟ್ಟ ಅವರ ಪತ್ನಿ ಸಾವನಪ್ಪಿದ್ದರು. ಇದಾದ ನಂತರ ಅವರು ಮಾನಸಿಕವಾಗಿ ಕುಗ್ಗಿದ್ದರು. ಕಾಣೆಯಾದ ದಿನ ಅವರು ಬಿಳಿ ಬಣ್ಣದ ಅಂಗಿ, ಕಪ್ಪು ಬಣ್ಣದ ಲುಂಗಿ ಧರಿಸಿದ್ದರು. ಇವರು ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಹೀಗಾಗಿ ಕಾಣೆಯಾದ ಇವರು ಎಲ್ಲಾದರೂ ಪತ್ತೆಯಾದಲ್ಲಿ 9480796982 ಅಥವಾ 9482190410 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.
Leave a Comment