ಯಲ್ಲಾಪುರ : 35 ವರ್ಷಗಳ ವೃತ್ತಿ ಜೀವನದ ಸುಧೀರ್ಘ ಪಯಣದಲ್ಲಿ ಹಿಂದೆ ಕೆಇಬಿ ಎಂದಿದ್ದ ವಿದ್ಯುತ್ ಇಲಾಖೆಯ ವೃತ್ತಿಗೆ ಬಳ್ಳಾರಿ ಜಿಲ್ಲೆಗೆ ನೇಮಕಗೊಂಡು ನಂತರದ ದಿನಗಳಲ್ಲಿ ಕುಮಟಾ, ಹೊನ್ನಾವರ, ಶಿರಸಿ, ಬಾಗಲಕೋಟೆಗಳ್ಲಿ ಕೆಲಸ ಮಾಡುತ್ತಾ ಇಂದು ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಯಶಸ್ವಿ ಪಯಣದ ಹಿಂದೆ ನನೊಂದಿಗೆ ಬೆರೆತು ವೃತ್ತಿ ನಿಭಾಯಿಸಿ ಕೈ ಜೋಡಿಸಿದ ಅಂದಿನ ಕೆಇಬಿ ಯಿಂದ ಇಂದಿನ ಹೆಸ್ಕಾಂವರೆಗಿನ ಎಲ್ಲಾ ಸಿಬ್ಬಂದಿ ವರ್ಗ, ವಿದ್ಯುತ್ ಗುತ್ತಿಗೆದಾರರು ಹಾಗೂ ಸಾರ್ವಜನಿಕರಿಗೆ ವಂದನೆಗಳು ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರ ಟಿ.ಪಿ.ಶೆಟ್ಟಿ ಹೇಳಿದರು.

ಅವರು ಪಟ್ಟಣದ ಕಸಾಪ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಟಿ.ಪಿ.ಶೆಟ್ಟಿ ನಿವೃತ್ತಿ ಶುಭ ಹಾರೈಕೆಯ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಜೀವನದ ನೆನಪಿಗಾಗಿ ಟಿ.ಪಿ.ಶೆಟ್ಟಿಯವರನ್ನು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಹಾಗೂ ಯಲ್ಲಾಪುರ ಹೆಸ್ಕಾಂ ಕಚೇರಿ ಸಿಬ್ಬಂದಿ ವರ್ಗದವರೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಟಿ.ಪಿ.ಶೆಟ್ಟಿಯವರ ವೃತ್ತಿ ಹಾಗೂ ನಿವೃತ್ತಿ ಜೀವನದ ಕುರಿತು ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಅಭಿನಂದನಾ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮಾತನಾಡಿ ಇಲಾಖೆಯಲ್ಲಿ ಸಹೊದ್ಯೋಗಿಗಳೊಂದಿಗೆ ನಗುಮುಖದೊಂದಿಗೆ ವ್ಯವಹರಿಸುತ್ತಾ ಗುತ್ತಿಗೆದಾರರಿಗೆ ಯಾವುದೇ ಸಮಸ್ಯೆಗಳು ಬಂದಲ್ಲಿ ತಕ್ಷಣದಲ್ಲಿ ಪರಿಹಾರ ಸೂಚಿಸಿ ನೆಚ್ಚಿನವಾರಗಿದ್ದ ಹೆಸ್ಕಾಂ ಅಧೀಕ್ಷಕ ಅಭಿಯಂತರ ಟಿ.ಪಿಶೆಟ್ಟಿಯವರ ನಿವೃತ್ತ ಜೀವನ ಸುಖಮಯವಾಗಿರಲೆಂದು ಶುಭಹಾರೈಸಿದರು.
ಕ.ರಾ.ಸ.ನೌ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ್ ನಾಯಕ, ವಿದ್ಯುತ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಸತೀಶ್ ಹೆಗಡೆ ಕಾರ್ಯಕ್ರಮದ ವೇದಿಕೆಯಲ್ಲಿದ್ದರು. ವಿದ್ಯುತ್ ಗುತ್ತಿಗೆದಾರ ಶಾಂತಾರಾಮ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಯಲ್ಲಾಪುರ ಹೆಸ್ಕಾಂ ವಿಭಾಗೀಯ ಅಧಿಕಾರಿ ರಮಾಕಾಂತ ನಾಯ್ಕ ಶುಭ ಹಾರೈಸಿದರು. ಸುಬ್ರಾಯ ಬಿದ್ರೆಮನೆ ವಂದಿಸಿದರು. ಕೇಬಲ್ ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಹೆಸ್ಕಾಂ ಸಿಬ್ಬಂದಿ ವರ್ಗ , ವಿದ್ಯುತ್ ಗುತ್ತಿಗೆದಾರರು ಭಾಗವಹಿಸಿದ್ದರು.
Leave a Comment