ತಾಲೂಕ ಆಡಳಿತ, ತಾಲೂಕ ಪಂಚಾಯತ ಹಾಗೂ ಪಟ್ಟಣ ಪಂಚಾಯತ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.
ತಹಶೀಲ್ದಾರ ಕಛೇರಿಯಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಂಡು ಪಟ್ಟಣದ ವಿವಿಧಡೆಯಲ್ಲಿ ಭುವನೇಶ್ವರಿ ದೇವಿಯ ಮೆರವಣೆಗೆ ಸಂಚರಿಸಿ ಶರಾವತಿ ವೃತ್ತ ಮೂಲಕ ಪಟ್ಟಣ ಪಂಚಾಯತ ಆವರಣಕ್ಕೆ ಆಗಮಿಸಿತು.

ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ತಹಶೀಲ್ದಾರ ವಿವೇಕ ಶೇಣ್ವಿ ಮಾತನಾಡಿ, ಕನ್ನಡಿಗರ ಒಗ್ಗಟ್ಟು ದ್ವಿಗುಣಗೊಳಿಸಿ ನಾಡಪ್ರೇಮ ಮೂಡಿಸಲು ಈ ದಿನ ನಾಡಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ. ನಮ್ಮ ನಾಡು ಸಾಹಿತ್ಯ, ಕಲೆ, ಸಂಸ್ಕøತಿಯಲ್ಲಿ ತನ್ನದೇ ಆದ ಹಿರಿಮೆ ಹೊಂದಿರುವುದರಿಂದ ಈ ರಂಗದಲ್ಲಿ ಅನೇಕ ಸಾಧಕರನ್ನು ನಾವು ನೋಡಬಹುದು. ಅತಿ ಹೆಚ್ಚು ಜ್ಞಾನಪೀಠ ಪ್ರಶಶ್ತಿ ಪಡೆದ ಹಿರಿಮೆ ಹೊಂದಿರುವ ಭಾಷೆಗೆ ಶಾಸ್ತ್ರಿಯ ಸ್ಥಾನ ದೊರೆತಿರುವುದು ಭಾಷೆಗೆ ಸಂದ ಗೌರವ. ಸಾಕ್ಷರತೆಯಲ್ಲಿಯೂ ಅಭೂತಪೂರ್ಣ ಸಾಧನೆ ಮಾಡಿದ್ದು 26%ದಿಂದ 97% ಪ್ರಗತಿ ಸಾಧಿಸಿದ್ದೇವೆ. ದೇಶದಲ್ಲೆಯೇ ಉಳುವವನೇ ಭೂಮಿಯ ಓಡೆಯ ಕಾನೂನು ಪ್ರಥಮಬಾರಿಗೆ ಜಾರಿಗೆ ತಂದ ಹೆಮ್ಮೆ ಇದೆ. ಭೌಗೋಳಿಕವಾಗಿ ವೈವಿಧ್ಯತೆಯಿಂದ ಕೂಡಿದ್ದು ಮಲೆನಾಡು, ಕರಾವಳಿಯಂತಹ ವಿವಿಧ ಭಾಗ ಹೊಂದಿದ್ದು ಕಡಲತೀರದ ಪ್ರವಾಸೊದ್ಯಮ ಕೇಂದ್ರದ ಜೊತೆ, ಐತಿಹಾಸಿಕ ಮಾಹಿತಿ ಸಾರುವ ಧಾರ್ಮಿಕ ಕೇಂದ್ರ, ಪರಿಸರ ಪ್ರೇಮ ಮೂಡಿಸುವ ಅನೇಕ ಗಿರಿ ಪರ್ವತ ಒಳಗೊಂಡ ಪ್ರವಾಸಿಕೇಂದ್ರವಿದೆ. ನಾಡಿನ ಮುತ್ತಿನ ಕುವರಿ ಹೊನ್ನಾವರವು ಇದಕ್ಕೆ ಹೊರತಾಗಿಲ್ಲ. ಎಲ್ಲ ರಂಗದಲ್ಲಿಯೂ ಸಾಧಕರನ್ನು ಒಳಗೊಂಡಿರುವುದರಿಂದ ಕರ್ನಾಟಕದ ಹೃದಯ ಎಂದರೆ ತಪ್ಪಾಗಲಾರದು. ಭಾಷೆ ಸ್ವಾಭಿಮಾನದ ಸಂಕೇತವಾಗಿದ್ದು, ಜಾಗತೀಕರಣದ ಈ ಯುಗದಲ್ಲಿ ಭಾಷೆ ಉಳಿಸಿ ಬೆಳೆಸುವ ಜೊತೆ ಹೊಸ ನಾಡನ್ನು ಹೊಸ ಬೀಡನ್ನು ಕಟ್ಟುವ ಸಂಕಲ್ಪ ಮಾಡೋಣ ಎಂದರು.


ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಕರೀಂ ಅಸದಿ, ಕ್ಷೇತ್ರ ಶಿಕ್ಷಣಾಧಿಕಾರಿ ದಯಾನಂದ ನಾಯ್ಕ, ಪೆÇೀಲಿಸ್ ವೃತ್ತನಿರಿಕ್ಷಕರಾದ ಶ್ರೀಧರ ಎಸ್. ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಹಾಜರಿದ್ದರು. ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

Leave a Comment