ಕುಮಟಾ: ಮಳೆಗಾಲದಿಂದ ಹದಗೆಟ್ಟಿದ್ದ ಹೆಗಡೆಗೆ ತೆರಳುವ ರೈಲ್ವೇ ಗೇಟ್ ಸಮೀಪದ ಎಡಭಾಗದಿಂದ ಸಾರಿಂಗ ದೇವಸ್ಥಾನದ ಎದುರಿನ ರಸ್ತೆಯನ್ನು ಗುತ್ತಿಗೆದಾರ ಗಣೇಶ ದೇವಪ್ಪ ನಾಯ್ಕ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿಕೊಟ್ಟು ಸಮಾಜದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ.

ಕುಮಟಾದಿಂದ ಹೆಗಡೆಗೆ ತೆರಳುವ ರೈಲ್ವೇ ಗೇಟ್ನಿಂದ ಸಾರಿಂಗ ದೇವಸ್ಥಾನದ ಎದರಿನ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ, ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿದು, ರಸ್ತೆಯ ಮಣ್ಣು ಕೊಚ್ಚಿಹೋಗಿ ಸಂಪೂರ್ಣ ಹದಗೆಟ್ಟಿತ್ತು. ಇದರಿಂದ ಸಾರ್ವಜನಿಕರಿಗೆ ಈ ರಸ್ತೆಯಲ್ಲಿ ಸಂಚರಿಸಂದತಹ ಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರು ಇದನ್ನು ಗುತ್ತಿಗೆದಾರ ಗಣೇಶ ನಾಯ್ಕ ಅವರ ಗಮನಕ್ಕೆ ತಂದರು. ನಂತರ ಅವರು ನಮ್ಮ ಸ್ವಂತ ಹಣದಿಂದ ಯಂತ್ರೋಪಕರಣಗಳನ್ನು ಬಳಿಸಿ, ಕೊಚ್ಚಿಹೊದ ರಸ್ತೆಯನ್ನು ಮರು ನಿರ್ಮಿಸಿ, ಜನರಿಗೆ ಸುಗಮವಾಗಿ ಸಂಚರಿಸಲು ಅನುಕೂಲ ಕಲ್ಪಸಿದ್ದಾರೆ.
ಗಣೇಶ ನಾಯ್ಕ ಅವರು ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯದಲ್ಲಿ ಎಲೆ ಮರೆಯ ಕಾಯಿಯಂತೆ ಯಾವುದೇ ಪ್ರಚಾರದ ಹಂಗಿಲ್ಲದೇ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ರಸ್ತೆ ಪುನರ್ ನಿರ್ಮಾಣ ಮಾಡಿ, ನೂರಾರು ಸಾರ್ವಜನಿಕರಿಗೆ ಅನುಕೂಲ ಮಾಡಿರುವುದಕ್ಕೆ ಸಾರ್ವಜನಿಕರು, ಊರ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೆಗಡೆಗೆ ತೆರಳುವಾಗ ಮತ್ತು ವಾಪಸ್ಸು ಆಗಮಿಸುವಾಗ ರೈಲ್ವೇ ಗೇಟ್ ಹಾಕಿದಾಗ ನೂರಾರು ವಾಹನ ಸವಾರರು ಘಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿಯಿತ್ತು. ಸಾರ್ವಜನಿಕರಿಗೆ ಬಹಳ ಅನುಕೂಲವಾಗುವಂತಹ ಸಾರಿಂಗ ದೇವಸ್ಥಾನದ ಎದುರಿನ ರಸ್ತೆ ಮಳೆಗಾಲದಿಂದ ಸಂಪೂರ್ಣ ಹದಗೆಟ್ಟಿತ್ತು. ಇದನ್ನು ಗುತ್ತಿಗೆದಾರ ಗಣೇಶ ನಾಯ್ಕ ಅವರ ಗಮನಕ್ಕೆ ತಂದ ತಕ್ಷಣವೇ, ತಮ್ಮ ಸ್ವಂತ ಹಣದಿಂದ ರಸ್ತೆ ದುರಸ್ಥಿಗೊಳಿಸಿ, ಸಾರ್ವಜನಿಕರಿಗೆ ನೆರವಾಗಿದ್ದಾರೆ. ಇವರ ಜನಪರ ಕಾಳಜಿ ಎಲ್ಲರಿಗೂ ಮಾದರಿ ಎಂದು ಹೆಗಡೆ ಗೆಳೆಯರ ಬಳಗದ ಪ್ರಮುಖ ಅಮರನಾಥ ಭಟ್ಟ ಸಂತಸ ವ್ಯಕ್ತಪಡಿಸಿದರು.

ಕೋಟ್: ರಸ್ತೆ ದುರಸ್ಥಿ ಕಾರ್ಯ ಮಾಡಿಕೊಡುವಂತೆ ಜನರು ಬೇಡಿಕೆ ಸಲ್ಲಿಸಿದ ತಕ್ಷಣ ಕಾರ್ಯಪ್ರವೃತ್ತನಾಗಿ ಸ್ವಂತ ಹಣದಿಂದ ಕೆಲಸ ನಿರ್ವಹಿಸಿದ್ದೇನೆ. ಪ್ರಚಾರ ಪಡೆಯಲು ಈ ಕೆಲಸ ಮಾಡಿಲ್ಲ. ಬದಲಾಗಿ ನೂರಾರು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ರಸ್ತೆ ದುರಸ್ಥಿ ಮಾಡಲಾಗಿದೆ.
-ಗಣೇಶ ನಾಯ್ಕ ಹೆಗಡೆ, ಗುತ್ತಿಗೆದಾರ
Leave a Comment