ಭಟ್ಕಳ: ಅರಣ್ಯವಾಸಿಗಳ ಮಾನವ ಹಕ್ಕು ಉಲ್ಲಂಘನೆಯು ಇತ್ತೀಚಿನ ಅರಣ್ಯ ಸಿಬ್ಬಂದಿಗಳಿಂದ ಕಿರುಕುಳ, ದೌರ್ಜನ್ಯ, ಆತಂಕದಿಂದ ಆಗುತ್ತಿದ್ದು, ಇದರ ವಿರುದ್ಧ ಕಾನೂನಾತ್ಮಕ ಹೋರಾಟಮಾಡಲಾಗುವುದು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅರಣ್ಯ ಹಕ್ಕು ಕಾಯಿದೆಯು ಅರಣ್ಯವಾಸಿಗಳ ಪರವಾಗಿದ್ದು ಮಂಜೂರಿ ಪ್ರಕ್ರೀಯೆಯಲ್ಲಿ ಪದೇ ಪದೇಯಾಗಿ ಜಿಲ್ಲಾದ್ಯಂತ ಅರಣ್ಯವಾಸಿಗಳ ಸಾಗುವಳಿಗೆಗೆ ಮತ್ತು ಜೀವನಕ್ಕೆ ಆತಂಕ ಉಂಟುಮಾಡುವ ಅರಣ್ಯಸಿಬ್ಬಂದಿಗಳ ಕಾರ್ಯ ಕಾನೂನುಬಾಹಿರ ಕೃತ್ಯ ಇದನ್ನು ಹೋರಾಟಗಾರರ ವೇದಿಕೆಯು ಬಲವಾಗಿ ಖಂಡಿಸುತ್ತದೆ. ಪ್ರಬಲವಾದ ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಹೋರಾಟಕ್ಕೆ ಅರಣ್ಯ ಅತಿಕ್ರಮಣದಾರರು ಸಜ್ಜಾಗಬೇಕೆಂದು ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಿಲ್ಲೆಯಲ್ಲಿ 85 ಸಾವಿರ ಅರಣ್ಯ ವಾಸಿಗಳ ಕುಟುಂಬವು ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯವು ಒಕ್ಕಲೆಬ್ಬಿಸಲು ಮಧ್ಯಂತರ ಆದೇಶ ನೀಡಿದ ಸಂದರ್ಭದಲ್ಲಿ 74 ಸಾವಿರ ಅತಿಕ್ರಮಣದಾರರ ಅರ್ಜಿ ತೀರಸ್ಕಾರವಾಗಿದ್ದು ಇಂತಹ ಅರಣ್ಯವಾಸಿಗಳಿಗೆ ಹಕ್ಕಿಗಾಗಿ ಸರಕಾರವು ಸಕರಾತ್ಮಕ ನಿರ್ಣಯ ತೆಗೆದುಕೊಳ್ಳುವುದು ಅನಿವಾರ್ಯ. ಇಲ್ಲದಿದ್ದಲ್ಲಿ ಜಿಲ್ಲೆಯ ಅರಣ್ಯವಾಸಿ ಕುಟುಂಬವು ಅತಂತ್ರವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ದೇವರಾಜ ಗೊಂಡ, ಕಯೀಂ ಸಾಬ, ರಿಜವಾನ್, ನಾರಾಯಣ ಕೃಷ್ಣ ನಾಯ್ಕ ಹಾಡುವಳ್ಳಿ, ಸಬೀರ್, ದತ್ತ ನಾಯ್ಕ ಹಸರವಳ್ಳಿ, ಶಂಕರ ನಾಯ್ಕ ಹಸರವಳ್ಳಿ, ಮಂಜುನಾಥ ದುರ್ಗಪ್ಪ ನಾಯ್ಕ ಹಲ್ಯಾಣಿ, ಅಣ್ಣಪ್ಪ ನಾರಾಯಣ ನಾಯ್ಕ ಹಿರೇಬಿಳೂರ ಮುಂತಾದವರು ಉಪಸ್ಥಿತರಿದ್ದರು.
Leave a Comment