ದಾಂಡೇಲಿ : ನಗರದ ಕರ್ನಾಟಕ ಸಂಘವನ್ನು ದುರುಪಯೋಗ ಪಡಿಸಿಕೊಂಡಿರುವುದಲ್ಲದೇ, ಸರಕಾರದ ಆದೇಶವನ್ನು ಉಲ್ಲಂಘಿಸುತ್ತಿರುವುದಕ್ಕೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಮ್ ಖಾನ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಅವರು ಈ ಬಗ್ಗೆ ಸಂತೋಷ್ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಕರ್ನಾಟಕ ಸಂಘ ಕರ್ನಾಟಕ ಸಂಘಗಳ ನೊಂದಣಿ ಅಡಿಯಲ್ಲಿ 1987 ರಲ್ಲಿ ನೊಂದಣಿಯಾಗಿದೆ. ಈ ಸಂಸ್ಥೆಯ ಅವ್ಯವಸ್ಥೆ ಮತ್ತು ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದಿನಾಂಕ: 31-01-2018 ರಂದು ಸಮಿತಿಯು ಆಕ್ಷೇಪಣೆ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಯವರು ಸಹಕಾರಿ ಸಂಘಗಳ ಉಪ ನಿಂಬಂಧÀಕರಿಗೆ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ವಹಿಸಬೇಕೆಂದು ದಿನಾಂಕ: 14-01-2019 ರಂದು ತಿಳಿಸಿದ್ದರು. ಅದರ ಪ್ರಕಾರ ವಿಚಾರಣೆ ನಡೆಸಲಾಯಿತು. ವಿಚಾರಣೆಯ ಸಂದರ್ಭದಲ್ಲಿ ಸಂಘದ ಯಾವುದೇ ದಾಖಲೆ ಪತ್ರಗಳು ವಿಚಾರಣೆಗೆ ಹಾಜರುಪಡಿಸಲಿಲ್ಲ. ಕೆ ಜಿ ಗಿರಿರಾಜ ಇವರು ಸಂಘದ ಯಾವುದೇ ಸದಸ್ಯತ್ವ ಇಲ್ಲದೇ ತಾನೆ ಸ್ವಯಂ ಘೋಷಿತ ಕಾರ್ಯದರ್ಶಿಯಾಗಿದ್ದೆನೆಂದು ಹೇಳಿಕೊಳ್ಳುತ್ತಾರೆ. ಸದರಿ ವಿಷಯದ ಬಗ್ಗೆ ವಿಚಾರಣೆಗೆ ಬಂದಾಗ ಯಾರು ಸದಸ್ಯರಿಲ್ಲವೆಂದು ಹೇಳಿಕೆ ನೀಡುತ್ತಾರೆ. ಆದರೆ ಒಮ್ಮಿಂದೊಮ್ಮಲೆ ಕಾರ್ಯದರ್ಶಿಯಾಗಿ ಸಂಘದ ಹಣಕಾಸಿನ ವ್ಯವಹಾರದಲ್ಲಿ ಅಪರಾತಪರಾ ಮಾಡಿರುವ ಶಂಖೆ ಕಂಡುಬರುತ್ತದೆ. ಇಲಾಖೆಯವರು ದಿ: 14.03.2019 ರಂದು ನೇಮಿಸಿದ 14 ಜನರ ತಾತ್ಕಾಲಿಕ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಗುಂಪುಗಾರಿಕೆ ಮಾಡುತ್ತಿದ್ದಾರೆ. ಅಲ್ಲದೇ ಕಳೆದ ನವೆಂಬರ್ 1, 2019 ರಂದು ಪೋಲಿಸ್ ರಕ್ಷಣೆಯಲ್ಲಿ ಧ್ವಜಾರೋಹಣ ನಡೆಸಲಾಯಿತು. ದಿನಾಂಕ:20.10.2020 ಹಾಗೂ 23.10.2020 ರಂದು ಕರೆದ ವಿಚಾರಣೆಯಲ್ಲಿ ಭಾಗವಹಿಸಲಿಲ್ಲ. ಇಲಾಖೆಗಳ ಆದೇಶವನ್ನು ಉಲ್ಲಂಘಿಸಿ ದಾಂಡೇಲಿ ತಾಲೂಕಿನ ತಹಶೀಲ್ದಾರ್ ಹಾಗೂ ನಗರ ಸಭೆಯ ಪೌರಾಯುಕ್ತಕರನ್ನು ಕರೆಸಿಕೊಂಡು ಸಂಘದ ಕಛೇರಿಯಲ್ಲಿ ಧ್ವಜಾರೋಹಣವನ್ನು ನಡೆಸಲಾಯಿತು. ಕಳೆದ ದಿ:01.10.2019 ರಿಂದ ಪಂಚಗಾನ ಭವನವನ್ನು ಮುಚ್ಚಲಾಗಿದೆ ಎಂದು ಕೆ ಜಿ ಗಿರಿರಾಜ ಇವರು ಪತ್ರಿಕೆಗೆ ಹೇಳಿಕೆ ನೀಡಿದ್ದು, ಇದೀಗ ಎಲ್ಲಾ ಕಾಯ್ದೆ ಕಾನೂನುಗಳನ್ನು ಉಲ್ಲಂಘಿಸಿ ಏಕಪಕ್ಷವಾಗಿ ವರ್ತಿಸುತ್ತಿದ್ದಾರೆ ಎಂದು ಅಕ್ರಮ್ ಖಾನ್ ಅವರು ಆರೋಪಿಸಿದ್ದಾರೆ.
ಸುಮಾರು 30 ವರ್ಷದಿಂದ ಸಂಘದ ರಿನಿವಲ್ ಮಾಡದೇ, ಲೆಕ್ಕ ಪತ್ರವನ್ನು ಸಾರ್ವಜನಿಕರ ಗಮನಕ್ಕೆ ತರದೆ, ಸಂಘಗಳ ನೊಂದಣಿ ಕಾಯ್ದೆ 1960 ರ ಪ್ರಕಾರ ಸಂಪೂರ್ಣವಾಗಿ ಉಲ್ಲಂಘನೆ ಆಗಿದ್ದರಿಂದ ಉಪ ನಿಬಂಧಕರು ವಿಚಾರಣೆಯನ್ನು ಗೊತ್ತುಪಡಿಸಿದ್ದರು. ಸಾರ್ವಜನಿಕ ಆಸ್ತಿಯ ದುರುಪಯೋಗ ಮಾಡುವುದನ್ನು ಬಲವಾಗಿ ಅಕ್ರಮ್ ಖಾನ್ ಅವರು ಖಂಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಸತೀಶ ನಾಯ್ಕ, ಎಂ.ಎಚ್.ನಾಯ್ಕ, ಗೌಸ್ ಯರಗಟ್ಟಿ ಮತ್ತು ರೇವಣಕರ ಉಪಸ್ಥಿತರಿದ್ದರು.
Leave a Comment