ಹೊನ್ನಾವರ: ಜನಾದೇಶ ಪಡೆದು ಒಂದುವರೆ ವರ್ಷದ ಬಳಿಕ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 15 ತಿಂಗಳ ಅವಧಿಯ ಅಧ್ಯಕ್ಷರಾಗಿ ಶಿವರಾಜ ಮೇಸ್ತ, ಉಪಾಧ್ಯಕ್ಷರಾಗಿ ಮೇಧಾ ನಾಯ್ಕ ಆಯ್ಕೆಯಾಗಿದ್ದಾರೆ. 20 ವಾರ್ಡಗಳಲ್ಲಿ 12 ಸ್ಥಾನವನ್ನು ತೆಕ್ಕೆಗೆ ಹಾಕಿಕೊಂಡಿದ್ದ ಬಿಜೆಪಿಯು ಈ ಬಾರಿ ಅಧಿಕಾರ ಹಿಡಿಯುವುದು ವರ್ಷದ ಹಿಂದೆಯೇ ನಿಶ್ಚಯವಾಗಿತ್ತು. ತಿವ್ರ ಕೂತೂಹಲ ಮೂಡಿಸಿದ್ದ ಅಧ್ಯಕ್ಷಗಾದಿಗೆ ಇದೇ ಪ್ರಥಮ ಬಾರಿಗೆ ಮೀನುಗಾರ ಸಮುದಾಯದ ಪಾಲಾಗಿದ್ದು, ಉಪಾಧ್ಯಕ್ಷ ಸ್ಥಾನ ರಾಮಕ್ಷತ್ರಿಯ ಸಮಾಜದಿಂದ ಆಯ್ಕೆಯಾದ ಅಭ್ಯರ್ಥಿಗೆ ಒಲಿದಿದೆ. ಅಧ್ಯಕ್ಷರಾಗಿ ಶಿವರಾಜ ಮೇಸ್ತ ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಮೇಧಾ ನಾಯ್ಕ ಆಯ್ಕೆಯಾಗಿದ್ದಾರೆ. ನಂತರ 15 ತಿಂಗಳ ಅವಧಿಯಲ್ಲಿ ಎರಡು ಸ್ಥಾನ ಮಹಿಳೆಯರ ಪಾಲಾಗಲಿದೆ. ಅಧ್ಯಕ್ಷ ಸ್ಥಾನ ಮೊದಲ ಬಾರಿಗೆ ಮೀನುಗಾರ ಸಮುದಾಯ ಮಹಿಳೆ ಭಾಗ್ಯ ಲೋಕೇಶ ಮೇಸ್ತ, ಉಪಾಧ್ಯಕ್ಷ ಸ್ಥಾನ ದೈವಜ್ಞ ಬ್ರಾಹ್ಮಣ ಸಮುದಾಯದ ನಿಶಾ ಮೋಹನ ಶೇಟ್ ಪಾಲಾಗಿದೆ.

ಆಕಾಂಕ್ಷಿಗಳಿಗೆ ಸಮಪಾಲು: ಕಳೆದ ಹಲವು ದಿನಗಳಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗುತ್ತಿರುದನ್ನು ಮನಗಂಡು ಬಿಜೆಪಿ ಜಿಲ್ಲಾ ಸಮಿತಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಅಧ್ಯಕ್ಷ ಉಪಾಧ್ಯಕ್ಷ ಅವಧಿ ಎರಡುವರೆ ವರ್ಷಕ್ಕೆ ಎರಡು ಅವಧಿಯನ್ನಾಗಿಸಿ ಅಧಿಕಾರ ನೀಡಿದೆ. ಈ ಮೂಲಕ ಹೆಚ್ಚಿನವರಿಗೆ ಅಧಿಕಾರ ನೀಡುವ ಜೊತೆ ಅಸಮಧಾನ ಹೇಳದಂತೆ ಗಮನಹರಿಸಿದೆ. ಕಳೆದ ಮೂರು ದಿನದ ಹಿಂದೆ ಪಕ್ಷದ ಮುಖಂಡರು ಎಲ್ಲಾ ಸದಸ್ಯರ ಸಭೆ ನಡೆಸಿ ಪ್ರತೈಕವಾಗಿ ಪ್ರತಿಯೊರ್ವರ ಅಭಿಪ್ರಾಯ ಪಡೆದಿದ್ದರು. ಚುನಾವಣೆಯ ದಿನ 10 ಗಂಟೆಯವರೆಗೂ ಅಂತಿಮ ಪಟ್ಟಿ ಬಹಿರಂಗ ಪಡಿಸದೇ ಕೊನೆ ಹಂತದಲ್ಲಿ ಅಂತಿಮ ಪಟ್ಟಿ ಪ್ರಕಟಿಸಿ ನಾಲ್ವರಿಗೆ ಸಮಧಾನ ಪಡಿಸುವ ಕಾರ್ಯಕ್ಕೆ ಮುಂದಾಗಿದೆ.
ಆಯ್ಕೆ ಬಳಿಕ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ ಮೀನುಗಾರ ಸಮುದಾಯಕ್ಕೆ ಮೊಟ್ಟ ಮೊದಲಿಗೆ ಅಧ್ಯಕ್ಷ ಸ್ಥಾನವನ್ನು ಪಕ್ಷ ನೀಡಿದೆ. ನನಗೆ ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪಟ್ಟಣದ ಸರ್ವತೋಮಕ ಅಭಿವೃದ್ದಿಗೆ ಶ್ರಮಿಸುತ್ತೇನೆ. ಅವಕಾಶ ನೀಡಿದ ಪಕ್ಷದ ಮುಖಂಡರಿಗೂ ತಾಲೂಕಿನ ಜನತೆಗೆ ಚಿರಋಣಿ.
ಉಪಧ್ಯಕ್ಷೆ ಮೇಧಾ ನಾಯ್ಕ ಮತನಾಡಿ ಪಕ್ಷದ ಮೇಲೆ ನಿಷ್ಠೆ ಇಟ್ಟು ಕಾರ್ಯನಿರ್ವಹಿಸಿರುದಕ್ಕೆ ನನಗೆ ಒಳ್ಳೆಯ ಅವಕಾಶ ನೀಡಿದೆ. ಇಂದು ನೀಡಿದ ಅಧಿಕಾರದಿಂದ ನಮಗೆ ಜವಬ್ದಾರಿ ಹೆಚ್ಚಿದ್ದು ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ.

ಶಾಸಕ ದಿನಕರ ಶೆಟ್ಟಿ ಮಾತನಾಡಿ ಜಿಲ್ಲೆಯಲ್ಲಿ ಬಿಜೆಪಿ ಸ್ಥಳಿಯ ಸಂಸ್ಥೆಯಲ್ಲಿ ಅಧಿಕಾರಕ್ಕೆ ಬಂದಿದೆ. ಹೊನ್ನಾವರದಲ್ಲಿ ಸ್ಪಷ್ಟ ಬಹುಮತ ಬಂದಿದ್ದು, ಇಂದು 15 ತಿಂಗಳ ಅವಧಿಗೆ ಅವಿರೋಧವಾಗಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಪಟ್ಟಣದಲ್ಲಿ ಇನ್ನು ಹೆಚ್ಚಿನ ಅಭಿವೃದ್ದಿಗೆ ಸರ್ವ ರೀತಿಯಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಸುನೀಲ ನಾಯ್ಕ ಮಾತನಾಡಿ ಸಾಮನ್ಯ ಕಾರ್ಯಕರ್ತರಿಗೂ ಪಕ್ಷ ಅವಕಾಶ ನೀಡುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಮೂಲಭೂತವಾಗಿ ಅಭಿವೃದ್ದಿಯಾಗಲೂ ಎಲ್ಲಾ ರೀತಿಯಲೂ ಸಹಕಾರ ನೀಡುತ್ತೇನೆ ಎಂದರು.
ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ ಶಾಸಕರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮಾಲರ್ಪಣೆ ಮಾಡಿ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ. ಎಂ.ಪಿ ಕರ್ಕಿ, ಮಂಡಲಾಧ್ಯಕ್ಷ ರಾಜೇಶ ಭಂಡಾರಿ, ಬಿಜೆಪಿ ಮುಖಂಡರಾದ ಎಂ.ಜಿ.ನಾಯ್ಕ, ಎಂ.ಎಸ್.ಹೆಗಡೆ ಕಣ್ಣಿ, ಪಟ್ಟಣ ಪಂಚಾಯತ ಸದಸ್ಯರು ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.
Leave a Comment