• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಭಾರತ ಇಂದು ತನ್ನ ಮನೆಯಲ್ಲಿ ಭಯೋತ್ಪಾದನೆ ಮಾಡುವವರನ್ನು ಹೊಡೆದುರುಳಿಸುತ್ತಿದೆ;ಪ್ರಧಾನಿ ನರೇಂದ್ರ ಮೋದಿ

November 14, 2020 by Sachin Hegde Leave a Comment

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೀಪಾವಳಿಯನ್ನು ಸಶಸ್ತ್ರ ಪಡೆ ಯೋಧರ ಜೊತೆ ಕಳೆಯುವ ತಮ್ಮ ಸಂಪ್ರದಾಯವನ್ನು ಮುಂದುವರಿಸಿದ್ದು, ಲಾಂಗೇವಾಲಾದ ಭಾರತೀಯ ಗಡಿ ಠಾಣೆಯಲ್ಲಿ ಯೋಧರೊಂದಿಗೆ ಸಂವಾದ ನಡೆಸಿ, ಭಾಷಣ ಮಾಡಿದರು. ಹಿಮಚ್ಛಾದಿತವಾದ ಪರ್ವತಗಳಲ್ಲಿ ಅಥವಾ ಮರುಭೂಮಿಯಲ್ಲಿ ಸೈನಿಕರೊಂದಿಗೆ ಕಳೆದಾಗ ಮಾತ್ರ ತಮ್ಮ ದೀಪಾವಳಿ ಪೂರ್ಣಗೊಳ್ಳುತ್ತದೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ಭಾರತೀಯರ ಶುಭಾಶಯ, ಆಶೀರ್ವಾದ ಮತ್ತು ಶುಭಾನುಡಿಗಳನ್ನು ಅವರು ಗಡಿಯಲ್ಲಿರುವ ಸಶಸ್ತ್ರ ಪಡೆ ಸಿಬ್ಬಂದಿಯ ಬಳಿಗೆ ತೆಗೆದುಕೊಂಡು ಹೋಗಿದ್ದರು. ಧೈರ್ಯಶಾಲಿ ತಾಯಂದಿರು ಮತ್ತು ಸಹೋದರಿಯರಿಗೆ ಶುಭ ಕೋರಿದ ಅವರು, ಅವರುಗಳ ತ್ಯಾಗಕ್ಕೆ ಗೌರವ ಸಲ್ಲಿಸಿದರು. ಪ್ರಧಾನಮಂತ್ರಿ ದೇಶವಾಸಿಗಳ ಕೃತಜ್ಞತೆಯನ್ನು ಸಶಸ್ತ್ರ ಪಡೆಗಳಿಗೆ ತಿಳಿಸಿ. 130 ಕೋಟಿ ಭಾರತೀಯರೂ ಪಡೆಗಳೊಂದಿಗೆ ಬಲವಾಗಿ ನಿಂತಿದ್ದಾರೆ ಎಂದು ಹೇಳಿದರು.


ದಾಳಿಕೋರರನ್ನು ಮತ್ತು ಒಳನುಸುಳುಕೋರರನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರ ಮಾತ್ರ ಸುರಕ್ಷಿತವಾಗಿರುತ್ತದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಅಂತಾರಾಷ್ಟ್ರೀಯ ಸಹಕಾರದಲ್ಲಿನ ಪ್ರಗತಿ ಮತ್ತು ಸಮೀಕರಣಗಳ ಬದಲಾವಣೆಗಳ ಹೊರತಾಗಿಯೂ, ಬೇಹುಗಾರಿಕೆಯನ್ನು ಮರೆಯಲು ಸಾಧ್ಯವಿಲ್ಲ, ಕಾರಣ ಭದ್ರತೆಗೆ ಅದು ಪ್ರಮುಖವಾದುದು, ಜಾಗರೂಕತೆಯು ಸಂತೋಷದ ಆಧಾರವಾಗಿದೆ ಮತ್ತು ವಿಜಯದ ವಿಶ್ವಾಸವಾಗಿದೆ ಎಂದು ಅವರು ಹೇಳಿದರು.
ಭಾರತದ ನೀತಿ ಸ್ಪಷ್ಟವಾಗಿದೆ ಎಂದು ಘೋಷಿಸಿದ ಪ್ರಧಾನಮಂತ್ರಿಯವರು – ಇಂದು ಭಾರತ ತಿಳಿವಳಿಕೆ ಮತ್ತು ವಿವರಣೆಯಲ್ಲಿ ನಂಬಿಕೆ ಇಟ್ಟಿದೆ, ಆದಾಗ್ಯೂ ಯಾರಾದರೂ ನಮ್ಮನ್ನು ಪರೀಕ್ಷಿಸುವ ಪ್ರಯತ್ನ ಮಾಡಿದರೆ, ನಮ್ಮ ಪ್ರತಿಕ್ರಿಯೆ ತೀವ್ರವಾಗಿರುತ್ತದೆ ಎಂದರು.
ಈ ದೇಶವು ತನ್ನ ರಾಷ್ಟ್ರೀಯ ಹಿತದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಇಂದು ಜಗತ್ತಿಗೆ ತಿಳಿದಿದೆ ಎಂದು ಅವರು ಘೋಷಿಸಿದರು. ಭಾರತದ ಈ ಸ್ಥಾನಮಾನವು ಅದರ ಶೌರ್ಯ ಮತ್ತು ಸಾಮರ್ಥ್ಯಗಳಿಂದಾಗಿ ಬಂದಿದೆ. ಸಶಸ್ತ್ರ ಪಡೆಗಳ ಭದ್ರತೆಯಿಂದಾಗಿ ಭಾರತವು ಅಂತಾರಾಷ್ಟ್ರೀಯ ವೇದಿಕೆಗಳನ್ನು ಬಲವಾಗಿ ಹಿಡಿದಿಡಲು ಸಮರ್ಥವಾಗಿದೆ, ಭಾರತದ ಸೇನಾ ಶಕ್ತಿಯು ತನ್ನ ಮಾತುಕತೆಯ ಶಕ್ತಿಯನ್ನು ಹೆಚ್ಚಿಸಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಇಂದು ಭಾರತವು ತಮ್ಮ ಮನೆಯಲ್ಲಿ ಭಯೋತ್ಪಾದನೆಯನ್ನು ಪ್ರಚೋದಿಸುವವರನ್ನು ಹೊಡೆದುರುಳಿಸುತ್ತಿದೆ ಎಂದರು.
ವಿಸ್ತರಣಾವಾದದ ಸಿದ್ಧಾಂತದ ವಿರುದ್ಧ ಭಾರತ ಶಕ್ತಿಯುತ ಧ್ವನಿಯಾಗಿ ಹೊರಹೊಮ್ಮಿದೆ. 18 ನೇ ಶತಮಾನದ ಚಿಂತನೆಯನ್ನು ಪ್ರತಿಬಿಂಬಿಸುವ ಮಾನಸಿಕ ವಿಕೃತವಾದ ವಿಸ್ತರಣಾವಾದದ ಶಕ್ತಿಗಳಿಂದ ಇಡೀ ಜಗತ್ತು ತೊಂದರೆಗೀಡಾಗಿತ್ತು ಎಂದು ಅವರು ಹೇಳಿದರು.
ಆತ್ಮನಿರ್ಭರ ಭಾರತದ ಮತ್ತು ಸ್ಥಳೀಯತೆಗೆ ಧ್ವನಿಯಾಗಬೇಕು ಎಂಬುದರ ಮೇಲಿನ ಒತ್ತನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಇತ್ತೀಚೆಗೆ 100ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು ಮತ್ತು ಸಾಧನಗಳನ್ನು ಇನ್ನು ಮುಂದೆ ಆಮದು ಮಾಡಿಕೊಳ್ಳುವುದಿಲ್ಲ ಎಂದು ಪಡೆಗಳು ನಿರ್ಧರಿಸಿದೆ ಎಂದು ಹೇಳಿದರು. ಅವರು ಸ್ಥಳೀಯರಿಗೆ ಧ್ವನಿ ನೀಡುವಲ್ಲಿ ಮುನ್ನಡೆದಿದ್ದಾರೆ ಎಂದು ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು.
ಪಡೆಗಳ ಅಗತ್ಯಗಳನ್ನು ಪೂರೈಸಲು ಅನೇಕ ನವೋದ್ಯಮಗಳು ಮುಂದೆ ಬರುತ್ತಿದ್ದು, ಸಶಸ್ತ್ರ ಪಡೆಗಳಿಗೆ ಉತ್ಪಾದನೆ ಮಾಡಿ ಕೊಡುವಂತೆ ದೇಶದ ಯುವಕರಿಗೆ ಶ್ರೀ ಮೋದಿ ಕರೆ ನೀಡಿದರು. ರಕ್ಷಣಾ ಕ್ಷೇತ್ರದಲ್ಲಿ ಯುವಕರ ನೇತೃತ್ವದ ನವೋದ್ಯಮಗಳು ದೇಶವನ್ನು ಆತ್ಮನಿರ್ಭರತೆಯ ಹಾದಿಯಲ್ಲಿ ಮುನ್ನಡೆಸುತ್ತವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ಸಶಸ್ತ್ರಪಡೆಗಳಿಂದ ಸ್ಫೂರ್ತಿ ಪಡೆದು ದೇಶ ಪ್ರತಿಯೊಬ್ಬ ನಾಗರಿಕರನ್ನು ಸಾಂಕ್ರಾಮಿಕದ ಕಾಲದಲ್ಲಿ ಉಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನಾಗರಿಕರಿಗೆ ಆಹಾರ ಖಾತ್ರಿಪಡಿಸುವುದರ ಜೊತೆಗೆ ದೇಶ, ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಕಾರ್ಯೋನ್ಮುಖವಾಗಿದೆ ಎಂದರು.
ಪ್ರಧಾನಮಂತ್ರಿಯವರು ಯೋಧರು ಈ ಮೂರು ವಿಷಯಗಳನ್ನು ಪಾಲಿಸುವಂತೆ ಕೇಳಿದರು. ಮೊದಲನೆಯದು, ನಾವೀನ್ಯತೆಯನ್ನು ನಿತ್ಯದ ಬದುಕಿನ ಭಾಗವಾಗಿಸಿಕೊಳ್ಳಿ. ಎರಡನೆಯದು, ಯೋಗವನ್ನು ಜೀವನದ ಭಾಗವಾಗಿಸಿ ಮತ್ತು ಅಂತಿಮವಾಗಿ, ಮಾತೃಭಾಷೆ, ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಕನಿಷ್ಠ ಒಂದು ಭಾಷೆಯನ್ನಾದರೂ ಕಲಿಯಿರಿ. ಇದು ನಿಮ್ಮ ಜೀವನಕ್ಕೆ ಹೊಸ ಚೈತನ್ಯ ತುಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಲಾಂಗೆವಾಲಾ ಯುದ್ಧವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು ಕಾರ್ಯತಂತ್ರದ ಯೋಜನೆ ಮತ್ತು ಸೇನಾ ಶೌರ್ಯದ ಅಧ್ಯಾಯದಲ್ಲಿ ಈ ಯುದ್ಧ ಯಾವಾಗಲೂ ನೆನಪಿನಲ್ಲಿರುತ್ತದೆ ಎಂದು ಹೇಳಿದರು. ಪಾಕಿಸ್ತಾನದ ಸೈನ್ಯವು ಬಾಂಗ್ಲಾದೇಶದ ಮುಗ್ಧ ನಾಗರಿಕರನ್ನು ಭಯಭೀತಗೊಳಿಸುತ್ತಿದ್ದ ಮತ್ತು ಹೆಣ್ಣುಮಕ್ಕಳು ಮತ್ತು ಸಹೋದರಿಯರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಸಮಯದಲ್ಲಿ ಪಾಕಿಸ್ತಾನದ ವಿಕೃತ ಮುಖವನ್ನು ಬಹಿರಂಗವಾಗಿತ್ತು ಎಂದು ಅವರು ಹೇಳಿದರು. ಜಗತ್ತಿನ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ ಪಶ್ಚಿಮದ ಗಡಿಯಲ್ಲಿ ಮುಂಪಡೆ ತೆರೆಯಿತು ಆದರೆ ನಮ್ಮ ಪಡೆಗಳು ಅವರಿಗೆ ತಕ್ಕ ಉತ್ತರವನ್ನು ನೀಡಿದವು ಎಂದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, Trending Tagged With: Armed Forces, Battle of Langewala, Diwali full, Diwali is complete, English with minimal, military bravery chapter, new spirit for life, ಇಂಗ್ಲಿಷ್ ಜೊತೆಗೆ ಕನಿಷ್ಠ, ಜೀವನಕ್ಕೆ ಹೊಸ ಚೈತನ್ಯ, ದೀಪಾವಳಿ ಪೂರ್ಣ, ದೀಪಾವಳಿ ಪೂರ್ಣಗೊಳ್ಳುತ್ತದೆ, ಲಾಂಗೆವಾಲಾ ಯುದ್ಧ, ಸಶಸ್ತ್ರ ಪಡೆ, ಸೇನಾ ಶೌರ್ಯದ ಅಧ್ಯಾಯ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 967,574 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

UPSC ನೇಮಕಾತಿ 2021: 159 ಹುದ್ದೆಗಳಿಗೆ ಅರ್ಜಿ ಆಹ್ವಾನ

April 19, 2021 By deepika

ಸುಪ್ರೀಂ ಆದೇಶ: ರಾಮಚಂದ್ರಾಪುರ ಮಠದ ಆಡಳಿತದಿಂದ ಕೈತಪ್ಪಿದ ಗೋಕರ್ಣ ಮಹಾಬಲೇಶ್ವರ ದೇಗುಲ

April 19, 2021 By Devaraj Naik

ವಾಹನ ಖರೀದಿ, ಡಿಎಲ್,LLR, ನೋಂದಣಿ ಸೇರಿ ಎಲ್ಲದಕ್ಕೂ ಆಧಾರ್ ಕಡ್ಡಾಯ

April 19, 2021 By Sachin Hegde

ಕರೋನಾ ಅಲೆ ಹೆಚ್ಚಾಗುತ್ತೀರುವ ಹಿನ್ನೆಲೆ;ಸಂತೆ ಮಾರುಕಟ್ಟೆಯಲ್ಲಿ ಮಾಸ್ಕ ಧರಿಸದೇ ಖರೀದಿಗೆ ಬಂದಿದ್ದ ಸಾರ್ವಜನಿಕರಿಗೆ ದಂಡ

April 19, 2021 By bkl news

SBI Recruitment 2021/ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

April 19, 2021 By deepika

ಇಕೋ ಬೀಚ್ ಸುತ್ತ ಮುತ್ತ ಖಡಕ್ ಸಿನೆಮಾ ಚಿತ್ರೀಕರಣ;ಉತ್ತರಕನ್ನಡದ ಸೌಂದರ್ಯಕ್ಕೆ ತಲೆದೂಗಿದ ‘ಖಡಕ್ ‘ ತಂಡ

April 18, 2021 By Sachin Hegde

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.