ಭಟ್ಕಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ಭಟ್ಕಳ ತಾಲ್ಲೂಕು ಆಸ್ಪತ್ರೆಯಲ್ಲಿ ದಾನಿಗಳ ಕೊಡುಗೆಯಿಂದ ನಿರ್ಮಿಸಲ್ಪಟ್ಟ ನೂತನ ಡಯಾಲಿಸಿಸ್ ಕಟ್ಟಡ ಉದ್ಘಾಟನಾ ಸಮಾರಂಭವೂ ಇಲ್ಲಿನ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರದಂದು ಶಾಸಕ ಸುನೀಲ ನಾಯ್ಕ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ‘ ಡಯಾಲಿಸಿಸ್ ಘಟಕದ ವಿಚಾರದಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚಿನ ವ್ಯವಸ್ಥೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿರುವುದು ನಮ್ಮ ಹೆಮ್ಮೆ. ನೀಡಿದ ದಾನವನ್ನು ಎಲ್ಲಿಯು ಬಹಿರಂಗ ಪಡಿಸದಂತೆ ಬಡವರ ಪರವಾಗಿ ಅವರಿಗೆ ಸಹಾಯವಾಗಬೇಕೆಂದು 45 ಲಕ್ಷ ರೂ. ಅಧಿಕ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆಗಿ ಎಲ್ಲಾ ವ್ಯವಸ್ಥೆ ನೀಡಲಾಗಿದೆ. ಭಟ್ಕಳದ ಜನರಿಗೆ ಡಯಾಲಿಸಿಸ್ ಮರಿಚೀಕೆಯಂತಿದ್ದ ವೇಳೆ ಈ ನೂತನ ಸೆಂಟರ್ ಇನ್ನಷ್ಟು ಸಹಕಾರಿಯಾಗಿದೆ ಎಂದರು.
Leave a Comment