ಹೊನ್ನಾವರ: ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಗ್ರಿಂಡಿಂಗ್ ಯಂತ್ರಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಸ್ಪರ್ಶವಾಗಿ ಯುವಕೊನೊರ್ವ ಮೃತಪಟ್ಟ ಘಟನೆ ತಾಲೂಕಿನ ಕರ್ಕಿಯಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ.

ಮೃತಪಟ್ಟ ವ್ಯಕ್ತಿ ತಾಲೂಕಿನ ಕರ್ಕಿ ಲಕ್ಷ್ಮಣತಿರ್ಥ ನಿವಾಸಿ ಮಹಮ್ಮದ್ ಎ.ಆರ್ ಸದ್ಯಾನ್(24). ಕರ್ಕಿ ರೈಲ್ವೆ ಸ್ಟೇಶನ್ ಕ್ರಾಸ್ ಹತ್ತಿರ ಇರುವ ರಮಣ ಇಂಜಿನಿಯರಿಂಗ್ ವರ್ಕ್ಸನಲ್ಲಿ ವೆಲ್ಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಜೆ.ಸಿ.ಬಿ ಗೆ ವೆಲ್ಡಿಂಗ್ ಮಾಡಿ ಗ್ರಿಂಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಗ್ರಿಂಡಿಂಗ್ ಯಂತ್ರಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಸ್ಪರ್ಶವಾಗಿ ಮೃತ ಪಟ್ಟಿದ್ದಾನೆ ಎನ್ನಲಾಗಿದೆ. ಈತನಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡದೇ ನಿರ್ಲಕ್ಷತನದಿಂದ ಕೆಲಸ ಮಾಡಿಸಿದ್ದಕ್ಕೆ ರಮಣ ಇಂಜಿನಿಯರಿಂಗ್ ವರ್ಕ್ಸ ಮಾಲಿಕ ಆರೋಪಿತ ಸೆಲ್ವರಾಜ್ ಸುಬ್ರಹ್ಮಣ್ಯ ಅವರ ವಿರುದ್ದ ಕಾನೂನು ಕ್ರಮ ಜರಗಿಸುವಂತೆ ಮೃತ ಯುವಕನ ತಂದೆ ಅಬ್ದುಲ್ ರೆಹಮಾನ್ ಹಸನ್ ಸಾಬ್ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿ.ಎಸ್.ಐ ಶಶಿಕುಮಾರ್ ಸಿ.ಆರ್ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Leave a Comment