ಹೊನ್ನಾವರ:-ಪ್ರವಾಸಿತಾಣವಾಗಿ ಗುರುತಿಸಿಕೊಂಡು ದಿನಕ್ಕೆ ನೂರಾರು ಪ್ರವಾಸಿಗರು ಬಂದು ಹೋಗುತ್ತಿರುವ ಕುದ್ರಗಿ ಸಮೀಪ ನಿರ್ಮಾಣವಾದ ತೂಗು ಸೇತುವೆಯ ಬಳಿ ಕಸ ಹಾಗೂ ಪ್ಲಾಸ್ಟಿಕ್ ಬಾಟಲು ಬಿದ್ದು ಅಸ್ವಸ್ಥತೆ ಆಗಾರವಾಗಿತ್ತು ಇ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಇದನ್ನು ತಿಳಿದು ರವಿವಾರ ಯುವ ಬ್ರಿಗೇಡ್ ಹಾಗೂ ಧರ್ಮಜ್ಯೋತಿ ಮಹಿಳಾ ಸಂಘಟನೆ ಮಾಗೋಡು ಮತ್ತು ಉಪ್ಪೊಣಿ ಪಂಚಾಯತ ಸಹಕಾರದಿಂದ ಸ್ವಚ್ಛತಾ ಕಾರ್ಯ ಸುಮಾರು ಮೂರು ಗಂಟೆಗಳ ವರೆಗೆ ನೆಡೆಸಿದ್ದರು.ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ಯುವ ಬ್ರಿಗೇಡ್ ಸದಸ್ಯ ಪ್ರದೀಪ್ ನಾಯ್ಕ ಮಾತನಾಡಿ ಪ್ರವಾಸಿಗರು ಅನೆಕ ಜನರು ಬಂದು ಹೊಗುತ್ತಾರೆ
ಅಂಗಡಿಗಳಲ್ಲಿ ತೆಗೆದುಕೊಂಡಿದ ಬಾಟಲಗಳನ್ನು ಇಲ್ಲೆ ಎಸೆಯುತ್ತಾರೆ. ಇದರ ಬಗ್ಗೆ ಗಮನ ವಹಿಸಬೇಕು.ನಾವು ಇಗಾಗಲೇ ಅಂಗಡಿ ಯವರಿಗೆ ಸೂಚನೆ ನಿಡಿದ್ದೆವೆ. ಕಸವನ್ನು ಕಂಡಕಂಡಲ್ಲಿ ಬಿಸಾಡಿದ್ದರೆ ಪರಿಸರ ಹಾಳಾಗುತ್ತದೆ ಎಂದರು.
ನಂತರ ಮತನಾಡಿದ ಯುವ ಬ್ರಿಗೇಡ್ ಸದಸ್ಯ ರಮೇಶ ನಾಯ್ಕ ಮಾತನಾಡಿ ನಮ್ಮ ಊರು ಪ್ರವಾಸಿ ತಾಣವಾಗಿರುವುದು ತುಂಬ ಸಂತೋಷದ ವಿಷಯ ಆದರೆ ಕಸಗಳನ್ನು ಆದಸ್ಟು ಕಸದ ಬುಟ್ಟಿಯಲ್ಲಿ ಹಾಕುವುದು ಒಳ್ಳೆಯದು ಇಲ್ಲದಿದ್ದರೆ ಪರಿಸರ ತುಂಬ ಹಾಳಾಗುತ್ತದೆ ಎಂದರು. ಇ ಸ್ವಚ್ಛತಾ ಕಾರ್ಯದಲ್ಲಿ ಉಪ್ಪೊಣಿ ಪಂಚಾಯತ ಪಿಡಿಯೊ ಶ್ರೀಧರ ಭಟ್ಟ ,ಯುವ ಬ್ರಿಗೇಡ್ ಸದಸ್ಯರು, ಮತ್ತು ಧರ್ಮ ಜ್ಯೋತಿ ಮಹಿಳಾ ಸಂಘ ಮಾಗೋಡ್ ಮುಂತಾದವರು ಭಾಗವಹಿಸಿದ್ದರು.
Leave a Comment