ಹಳಿಯಾಳ:- ರೈತ ಸಂಪರ್ಕ ಕೇಂದ್ರ ಕಟ್ಟಲು ಕೃಷಿ ಇಲಾಖೆ ಬಳಸಿಕೊಳ್ಳುತ್ತಿರುವ ಕಳೆದ 5-6 ದಶಕಗಳಿಂದ ಗ್ರಾಮಸ್ಥರ ವಹಿವಾಟಿನಲ್ಲಿ ಸಾರ್ವಜನೀಕ, ದೇವರ ಕಾರ್ಯಗಳಿಗೆ ಮಿಸಲಿರುವ ಜಾಗೆಯನ್ನು ಎಂದಿಗೂ ಗ್ರಾಮಸ್ಥರು ಬಿಟ್ಟುಕೊಡುವುದಿಲ್ಲ ಎಂದು ಗ್ರಾಮಸ್ಥರೆಲ್ಲ ಒಂದಾಗಿ ಮಂಗಳವಾರ ಪ್ರತಿಭಟನೆ ನಡೆಸಿದ ವಿದ್ಯಮಾನ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ನಡೆಯಿತು.
ಮುರ್ಕವಾಡ ಗಾಂವಠಾಣಾ ಸರ್ವೆ ನಂ.9999- ಪ್ಲಾಟ್ನಂ-21 ನಲ್ಲಿರುವ 6 ಗುಂಟೆ ಜಮೀನು ಕೃಷಿ ಇಲಾಖೆಯ ಅಧಿನದಲ್ಲಿದ್ದರು ಈವರೆಗೆ ಅಂದರೇ ಕಳೆದ 50-60 ವರ್ಷಗಳಿಂದ ಗ್ರಾಮಸ್ಥರು ಇಲ್ಲಿ ಸಾರ್ವಜನೀಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ, ದೇವತಾ ಕಾರ್ಯಗಳು ಸೇರಿದಂತೆ ಸಾಂಸ್ಕøತೀಕ ಚಟುವಟಿಕೆ ನಡೆಸಲು ಉಪಯೋಗಿಸುತ್ತಾ ಬಂದಿರುವುದು ಅಲ್ಲದೇ ಈ ಸ್ಥಳ ಗ್ರಾಮಸ್ಥರಿಗೆ ಅತ್ಯಂತ ಸೂಕ್ತ ಜಾಗೆಯಾಗಿದೆ.
ಹಳಿಯಾಳ ಕೃಷಿ ಇಲಾಖೆಯವರು ಈ ಜಮೀನಿನಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಲು ಸಜ್ಜಾಗಿದ್ದು ಸರಿಯಾದ ನಿರ್ಧಾರವಲ್ಲ. ನಾವು ಗ್ರಾಮಸ್ಥರು ಈ ಹಿಂದಿನಿಂದಲೂ ಈ ಜಾಗೆ ಸರ್ವ ಗ್ರಾಮಸ್ಥರ ಆಶಯದಂತೆ ಕಾರ್ಯಕ್ರಮಗಳಿಗೆ ಮೀಸಲಿಡಬೇಕು ಎಂದು ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ.
ಆದರೇ ಈಗ ಏಕಾಏಕಿ ಗ್ರಾಮಸ್ಥರ ಭಾವನೆಗಳಿಗ ಬೆಲೆ ಕೊಡದೆ ಈ ಜಾಗೆಯಲ್ಲಿಯೇ ರೈತ ಸಂಪರ್ಕ ಕೇಂದ್ರ ಕಟ್ಟಲು ತಯಾರಿ ನಡೆಸಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದ್ದು ಮಂಗಳವಾರ ಗ್ರಾಮಸ್ಥರು ಒಂದಾಗಿ ಇದೇ ಸ್ಥಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆ ಅಧಿಕಾರಿ ಪಾಂಡುರಂಗ ಮಾನೆ ಅವರೊಂದಿಗೆ ಚರ್ಚಿಸಿದ ಗ್ರಾಮಸ್ಥರು ಈ ಹಿಂದೆ ಮುಗುದಕೊಪ್ಪ ಗ್ರಾಮಕ್ಕೆ ಹೊಗುವ ಕ್ರಾಸ್ ಪಕ್ಕದ ನವಗ್ರಾಮದಿಂದ ಮುರ್ಕವಾಡ ಮತ್ತು ಮುಗದಕೊಪ್ಪ ಗ್ರಾಮಕ್ಕೆ ತೆರಳುವ ಸ್ಥಳದಲ್ಲಿ ಅತ್ಯಂತ ಸೂಕ್ತ ಜಾಗೆಯನ್ನು ತೊರಿಸಿದ್ದರು ಕೂಡ ಸಂಬಂಧಪಟ್ಟ ಇಲಾಖೆಯವರು ಮಾತ್ರ ಗ್ರಾಮಸ್ಥರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದು ಗ್ರಾಮಸ್ಥರ ಆಶಯದ ವಿರುದ್ದವಾಗಿ ಕೆಲಸ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ಅವರಿಗೆ ಲಿಖಿತ ಮನವಿಯನ್ನು ಸಲ್ಲಿಸಿರುವ ಗ್ರಾಮಸ್ಥದ ಸರ್ವರು ಸಾರ್ವಜನಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸುತ್ತಿರುವ 6 ಗುಂಟೆ ಕ್ಷೇತ್ರ ಇರುವ ಈ ಭೂಮಿಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಬೇಕು ಎಂದು ವಿನಂತಿಸಲಾಗಿದೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಶ್ರೀನಾಥ ಪಾಟೀಲ್, ಮಾರುತಿ ಗುತ್ತೆಣ್ಣವರ, ಯಲ್ಲಪ್ಪಾ ಗುತ್ತೆಣ್ಣವರ, ಶಂಕರ ಗೌಡಾ, ಶಿವಾಜಿ ಗೌಡಾ, ನಾಗರಾಜ ಗೌಡಾ, ಅರುಣ ಕೊಳಾಂಬಿ, ನಾರಾಯಣ ದಳವಿ, ನಂದಾ ಕೊರ್ವೆಕರ, ದಿನೇಶ ಗೌಡಾ, ಸಹದೇವ ಮೇತ್ರಿ, ಸುನಿಳ್ ದಳವಿ, ಪುಂಡ್ಲಿಕ ಶಿಂಧೆ, ಯಶವಂತ ಗೌಡಾ, ಯಶವಂತ ಕೊರ್ವೆಕರ ಮೊದಲಾದವರು ಇದ್ದರು.
Leave a Comment