ಪಶುಸಂಗೋಪನೆ ಮತ್ತು ಹೈನುಗಾರಿಕಾ ಇಲಾಖೆ “ಹೈನುಗಾರಿಕೆ ವಲಯಕ್ಕೆ ದುಡಿಯುವ ಬಂಡವಾಳ ಸಾಲಕ್ಕಾಗಿ ಬಡ್ಡಿ ವಿನಾಯಿತಿ” ಎಂಬ ವಿನೂತನ ಯೋಜನೆಯನ್ನು ಜಾರಿಗೊಳಿಸಿದ್ದು, ಇದು “ಹೈನುಗಾರಿಕೆ ಸಹಕಾರಿಗಳಿಗೆ ಉತ್ತೇಜನ ಮತ್ತು ಹೈನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ರೈತ ಉತ್ಪನ್ನ ಸಂಸ್ಥೆಗಳ ಉತ್ತೇಜನ”(ಎಸ್ ಡಿಸಿ&ಎಫ್ ಪಿಒ) ಯೋಜನೆಯ ಒಂದು ಭಾಗವಾಗಿದೆ. ಎಸ್ ಡಿಸಿಎಫ್ ಪಿಒ ಯೋಜನೆ ಅಡಿಯಲ್ಲಿ ಬಡ್ಡಿ ವಿನಾಯಿತಿ ಅಂಶದ ಭಾಗವಾಗಿ ಈವರೆಗೆ 100.85 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದ್ದು, 16.10.2020ರ ವರೆಗೆ ಹಾಲು ಘಟಕಗಳಿಗೆ ಒಟ್ಟು ದುಡಿಯುವ ಬಂಡವಾಳ ಸಾಲಕ್ಕಾಗಿ 8031.23 ಕೋಟಿ ರೂ. ಸಾಲವನ್ನು ನೀಡಲಾಗಿದೆ.
Leave a Comment