ಭಟ್ಕಳ: ಕೊಂಕಣ ರೈಲ್ವೆಯ ಹಳೆಯಲ್ಲಿ ಹಾದುಹೋಗುವ ನೇತ್ರಾವತಿ ಎಕ್ಸಪ್ರೇಸ್ ರೈಲನ್ನು ಭಟ್ಕಳದಲ್ಲಿ ಖಾಯಂ ಆಗಿ ನಿಲುಗಡೆ ಮಾಡಬೇಕು ಹಾಗೂ ಭಟ್ಕಳದಲ್ಲಿ ರೈಲ್ವೆ ಪ್ಲಾಟ್ ಪಾರಂ ಟಿಕೇಟ್ ನೀಡಬೇಕೆಂದು ಆಗ್ರಹಿಸಿ ಕ್ರೀಯಾಶೀಲ ಗೆಳೆಯರ ಸಂಘ ಮತ್ತು ರೈಲು ಬಳಕೆದಾರರ ಸಂಘದಿಂದ ಆರ್.ಆರ್.ಎಂ.ನ ಕೊಂಕಣ ರೈಲ್ವೆ ಪ್ರಾದೇಶೀಕ ವ್ಯವಸ್ಥಾಪಕರಿಗೆ ಮಂಗಳವಾರದಂದ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ಭಟ್ಕಳದ ರೈಲು ನಿಲ್ದಾಣದಲ್ಲಿ ನೇತ್ರಾವತಿ ಎಕ್ಸಪ್ರೇಸ್ ರೈಲಿಗೆ (06346/06345) ನಿಲುಗಡೆ ನೀಡಲಾಗಿತ್ತು. ಈಗ ಈ ರೈಲು ನಿಲುಗಡೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಭಟ್ಕಳದಿಂದ ಸಾವಿರಾರು ಪ್ರಯಾಣಿಕರು ಈ ರೈಲಿನ ಮೂಲಕ ಮುಂಬೈ ಹಾಗೂ ಕೇರಳದ ಕಡೆಗೆ ಪ್ರಯಾಣಿಸುತ್ತಿದ್ದು, ಕೇರಳ ಹಾಗೂ ಮುಂಬೈಯಿಂದ ಸಾವಿರಾರು ಪ್ರಯಾಣಿಕರು, ಪ್ರವಾಸಿಗರು ಹಾಗೂ ಉದ್ಯಮಿಗಳು ಈ ನೇತ್ರಾವತಿ ರೈಲಿನ ಮೂಲಕ ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಆಗಮಿಸುತ್ತಾರೆ. ಭಟ್ಕಳವು ತಾಲೂಕಾ ಕೇಂದ್ರವಾಗಿದ್ದ ಕಾರಣ ಭಟ್ಕಳದಲ್ಲಿ ನೇತ್ರಾವತಿ ಎಕ್ಸಪ್ರೆಸ್ ರೈಲನ್ನು ನಿಲುಗಡೆ ಮಾಡಬೇಕು ಹಾಗೂ ರೈಲು ಆದಾಯ ತರುವ ಪ್ಲಾಟ್ ಫಾರಂ ಟಿಕೆಟ್ ರೈಲ್ವೆ ಕೌಂಟರನಲ್ಲಿ ನೀಡಬೇಕೆಂದು ಆಗ್ರಹಿಸಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಧರ್ಭದಲ್ಲಿ ಭಟ್ಕಳ ಕ್ರೀಯಾಶೀಲ ಗೆಳೆಯರ ಸಂಘದ ಉಪಾಧ್ಯಕ್ಷ ರಮೇಶ ಖಾರ್ವಿ, ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಖಜಾಂಚಿ ಭವಾನಿಶಂಕರ ನಾಯ್ಕ, ಸದಸ್ಯರಾದ ಮನಮೋಹನ ನಾಯ್ಕ, ಪಾಂಡು ನಾಯ್ಕ, ವೆಂಕಟೇಶ ಮೊಗೇರ, ದೀಪಕ ನಾಯ್ಕ, ಸಾರ್ವಜನಿಕರಾದ ಗಣಪತಿ ನಾಯ್ಕ, ಸಚೀನ್ ನಾಯ್ಕ, ವೆಂಕಟರಮಣ ನಾಯ್ಕ ಮುಂತಾದವರು ಇದ್ದರು.
Leave a Comment