ಹೊನ್ನಾವರ: ಪ್ರಜ್ಞಾವಂತರು ಮತದಾನದಿಂದ ಹೊರಗುಳಿದರೆ ಅನರ್ಹರ ಕೈಗೆ ಅಧಿಕಾರ ಹೋಗುತ್ತದೆ.ಮತದಾರರ ಮೇಲೆ ಹಣ,ಜಾತಿ,ಧರ್ಮದ ಪ್ರಭಾವ ಉಂಟಾದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿ.ಚನ್ನಕೇಶವ ರೆಡ್ಡಿ ಯುವ ಮತದಾರರಿಗೆ ಸಲಹೆ ನೀಡಿದರು.

ಪಟ್ಟಣದ ಎಸ್.ಡಿ.ಎಂ. ಕಾಲೇಜಿನಲ್ಲಿ ಚುನಾವಣಾ ಆಯೋಗ,ತಾಲ್ಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ರಾಷ್ಟಿçÃಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರö್ಯ ಬಂದು ೭೦ ವರ್ಷ ಆದರೂ ಇನ್ನು ಅಭಿವೃದ್ದಿ ಹೊಂದದ ಪ್ರದೇಶಗಳಿವೆ. ಪರಿಸರ, ಅರಣ್ಯ,ಗ್ರಾಮೀಣ ಕೆರೆ,ರಸ್ತೆ ಹಾಗೂ ಸಾರಿಗೆ ಅಭಿವೃದ್ಧಿ ಮೊದಲಾದವುಗಳ ಕುರಿತು ಪ್ರಾಮಾಣಿಕ ಕಾಳಜಿ ಇರುವ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಮತದಾನದಲ್ಲಿ ಪ್ರಬುದ್ಧತೆ ತೋರಬೇಕು ಎಂದು ಅವರು ಹೇಳಿದರು.
ಕಾಲೇಜಿನ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥ ಡಾ.ಎಂ.ಆರ್.ನಾಯಕ ಮಾತನಾಡಿ,’ನ್ಯಾಯಾಂಗ ಕ್ರಿಯಾಶೀಲವಾಗಿರುವುದರಿಂದ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮುನ್ನಡೆದಿದೆ.ವಂಶಾಡಳಿತ ಅಥವಾ ಒಂದೇ ಪಕ್ಷದ ಏಕಸ್ವಾಮ್ಯ ಪ್ರಜಾಪ್ರಭುತ್ವಕ್ಕೆ ಮಾರಕ,ಸಂವಿಧಾನದನ್ವಯ ಆಡಳಿತ ವ್ಯವಸ್ಥೆ ನಡೆಯಬೇಕಿದ್ದು ಪ್ರಜಾಪ್ರಭುತ್ವದ ಯಶಸ್ಸಿಗೆ ವಿದ್ಯಾವಂತ ಹಾಗೂ ಬುದ್ಧಿವಂತರಿಗಿAತ ಪ್ರಜ್ಞಾವಂತ ಮತದಾರರ ಅಗತ್ಯವಿದೆ’ ಎಂದು ಹೇಳಿದರು.
ತಹಶೀಲ್ದಾರ ವಿವೇಕ ಶೇಣ್ವಿ ಅಧ್ಯಕ್ಷತೆವಹಿಸಿದ್ದರು.
ವೇದಿಕೆಯಲ್ಲಿ ನ್ಯಾಯಧೀಶೆ ಸನ್ಮತಿ ಎಸ್.ಆರ್, ಪ್ರಾಚಾರ್ಯೆ ಡಾ.ವಿಜಯಲಕ್ಷಿö್ಮ ನಾಯ್ಕ, ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ನಾಯ್ಕ, ಎಪಿಪಿ ಚಂದ್ರಶೇಖರ ಎಚ್.ಎಸ್. ಉಪಸ್ಥಿತರಿದ್ದರು.
ಯುವಜನಸೇವೆ ಹಾಗೂ ಕ್ರೀಡಾಧಿಕಾರಿ ಸುಧೀಶ ನಾಯ್ಕ ಸ್ವಾಗತಿಸಿದರು.ಪ್ರೊ.ನಾಗರಾಜ ಹೆಗಡೆ,ಪ್ರೊ.ಪ್ರಶಾಂತ ಹೆಗಡೆ ನಿರೂಪಿಸಿದರು.
Leave a Comment