ಹೊನ್ನಾವಾರ ತಾಲೂಕಾ ಆಸ್ಪತ್ರೆಯಲ್ಲಿ 71 ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಆಚರಿಸಲಾಯಿತು. ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿಯವರು ಧ್ವಜಾರೋಹಣ ಮಾಡಿ “ ಕೋವಿಡ್ -19 ಸಂಕಷ್ಟದ ಕಾಲದಲ್ಲಿ ನಮ್ಮ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳು ಎದೆಗುಂದದೆ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಪರ ಊರು,ಮತ್ತು ರಾಜ್ಯಗಳಿಂದ ಬಂದ ಜನರ ತಪಾಸಣೆಯಲ್ಲಿ ಹಗಲು ರಾತ್ರಿಯೆನ್ನದೆ ಕಾರ್ಯ ನಿರ್ವಹಿಸಿದ ಡಾ|| ಗುರುದತ್ತ ಕುಲಕರ್ಣಿ ಸೇರಿದಂತೆ ಎಲ್ಲ ವೈದ್ಯರು ಮತ್ತು ಸಿಬ್ಬಂಧಿಗಳ ಸೇವೆಯನ್ನು ಮರೆಯಲಾಗದು. ಆಸ್ಪತ್ರೆಯ ಉತ್ತಮ ಬೆಳವಣಿಗೆಯಲ್ಲಿ ಎಲ್ಲ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿಗಳ ಪರಿಶ್ರಮವಿದೆ.

ಆಸ್ಪತ್ರೆÉಯ ಹಿಂಬಾಗದಲ್ಲಿ ಚೆಂದನೆಯ ಉದ್ಯಾನವ ನಿರ್ಮಾಣವಾಗಿದ್ದು ರೋಗಿಗಳು ಮತ್ತು ಅವರ ಜೊತೆ ಇರುವವರು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಆಸ್ಪತ್ರೆ ಇನ್ನಷ್ಟು ಅಭಿವೃದ್ದಿ ಹೊಂದಲು ಸಂಘ ಸಂಸ್ಥೆಗಳು ಕೈ ಜೋಡಿಸಲು ಮುಂದೆ ಬಂದಿದೆ, ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಹೊಸ ಕಟ್ಟಡಗಳ ನಿರ್ಮಾಣ, ರೀಪೇರಿ ಕಾರ್ಯಗಳು ನಡೆಯಲಿದೆ.” ಎಂದರು.ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಸಯಗಳನ್ನು ಕೋರಿದ್ದರು. ಆಸ್ಪತ್ರೆಯ ಎಲ್ಲ ತಜ್ಷವೈದ್ಯರುಗಳು, ವೈದ್ಯರುಗಳು, ಎಲ್ಲ ಸಿಬ್ಬಂಧಿವರ್ಗ ಮತ್ತು ಅವರ ಕುಟುಂಬ ವರ್ಗದವರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತಾಲೂಕಾಡಳಿತದಿಂದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕರೋನಾ ವಾರಿಯರ್ಗಳೆಂದು ಆಸ್ಪತ್ರೆಯಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ|| ಪ್ರಕಾಶ ನಾಯ್ಕ, (ಹೃದಯ ತಜ್ಞರು) ಆಶಾ ನಾಯ್ಕ (ಪ್ರಯೋಗಶಾಲಾ ತಂತ್ರಜ್ಞರು), ವೀಣಾ ಜೋಶಿ (ಶೂಶ್ರಷಕಿ), ನಾಗರಾಜ ನಾಯ್ಕ (ವಾಹನ ಚಾಲಕರು), ಶ್ರೀಮತಿ ಸೋನು(ನಾನ್ ಕ್ಲಿನಿಕ್ ಸಿಬ್ಬಂಧಿ), ವೆಂಕಟೇಶ ಜಾಡಮಾಲಿ (ಗ್ರೂಪ್ ಡಿ), ಅನಂತ ಶೆಟ್ಟಿ, ಮಂಗಲಾ ಗೌಡ (108 ಸಿಬ್ಬಂದಿ) ರವರನ್ನು ಸನ್ಮಾನಿಸಲಾಯಿತು.

Leave a Comment