ಭಟ್ಕಳ: ಹ್ಯುಮ್ಯಾನಿಟೇರಿಯನ್ ರಿಲೀಫ್ ಸೂಸೈಟಿ ಎಚ್.ಆರ್.ಎಸ್ ಭಟ್ಕಳ ಶಾಖೆಯು ಆಯೋಜಿಸಿದ್ದ ಎರಡು ದಿನಗಳ ಪ್ರಾಕೃತಿಕ ವಿಪತ್ತು ನಿರ್ವಹಣಾ ಕಾರ್ಯಗಾರ ಯಶಸ್ವಿಯಾಗಿ ನೆರವೇರಿತು. ಥೇರಿ ಮತ್ತು ಪ್ರಾಕ್ಟಿಕಲ್ ಮೂಲಕ ವಿಪತ್ತು ಸಂದರ್ಭದಲ್ಲಿ ಯಾವ ರೀತಿ ರಕ್ಷಣಾ ಕಾರ್ಯಗೊಳ್ಳಬೇಕು ಎಂಬುದರ ಕುರಿತಂತೆ ತರಬೇತಿಯನ್ನು ನೀಡಲಾಯಿತು.ಮಂಗಳೂರು ಎಚ್.ಆರ್.ಎಸ್ ಲೀಡರ್ ಅಮೀರ್ ಹಾಗೂ ಅವರ ತಂಡ ಎರಡು ದಿನಗಳ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಕಟ್ಟಡ ಹತ್ತುವುದು, ಅಗ್ನಿಶಮನ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಏನೆಲ್ಲ ಸುರಕ್ಷತೆಗಳನ್ನು ಪಾಲಿಸಿ ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡಬೇಕು ಎಂಬುದುರ ಕುರಿತಂತೆ ಮಾಹಿತಿ ನೀಡಲಾಯಿತು.ಈ ಸಂದರ್ಭದಲ್ಲಿ ಎಚ್.ಆರ್.ಎಸ್ ಕಾರ್ಯಚಟುವಟಿಕೆಗಳನ್ನು ವಿವರಿಸಿ ಮತನಾಡಿದ ಮಂಗಳೂರಿನ ಅಮೀರ್, ಎಚ್.ಆರ್.ಎಸ್ ರಾಜ್ಯಮಟ್ಟದ ಸರ್ಕಾರೇತರ ಸಂಸ್ಥೆಯಾಗಿದ್ದು ಇದು ಪ್ರಕೃತಿ ವಿಪತ್ತು ಮತ್ತು ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ಸಹಾಯ ಮತ್ತು ಪುನರ್ವಸತಿಯನ್ನು ಕಲ್ಪಸಿಕಡಲು ಶ್ರಮಿಸುತ್ತಿದೆ. ಮಾನವೀಯ ಸಹಾಯವನ್ನು ಒದಗಿಸಲು ಇದಕ್ಕೆ ತನ್ನದೆ ಆದ ಸ್ವಯಂಸೇವಕ ತಂಡವಿದ್ದು ಅವರು ನಿಷ್ಠಾವಂತ ಶ್ರದ್ಧಾಳುಗಾಗಿರುವರು. ಇದು ತನ್ನ ಸಮಾಜಸೇವಾ ಚಟುವಟಿಕೆಗಳ ಮೂಲಕ ಮಾನವೀಯ ಸೇವಾ ಸ್ಪೂರ್ತಿನ್ನು ಜಾಗೃತಗೊಳಿಸುವುದರೊಂದಿಗೆ ಸಾಮಾಜಿಕ ಕೆಡುಕಗಳಾದ ಮದ್ಯಪಾನ, ಮಾದಕ ವ್ಯಸನ ಮುಂತಾದವುಗಳ ನಿರ್ಮೂಲನೆಗೂ ನಿರಂತರ ಶ್ರಮಿಸುತ್ತದೆ ಎಂದರು. ಎಚ್.ಆರ್.ಎಸ್ ಕಾರ್ಯಕರ್ತರಿಗೆ ಪ್ರಥಮ ಚಿಕಿತ್ಸೆ, ಅಗ್ನಿಶಮನ, ವಿಪತ್ತು ನಿರ್ವಹಣೆಯ ಸೂಕ್ತ ತರಬೇತಿಗಳನ್ನು ನೀಡುತ್ತದೆ ಎಂದ ಅವರು, ಎಚ್.ಆರ್.ಎಸ್ ನ ಗುರಿ ಕಾರ್ಯಕರ್ತರ ಅದಮ್ಯ ಉತ್ಸಾಹ ಮತ್ತು ನಿಸ್ವಾರ್ಥ ಸಹಕಾರದಿಂದ ಮಾನವೀಯ ನೆಲೆಯಲ್ಲಿ ಆರೋಗ್ಯ ಶಿಕ್ಷಣ, ತುರ್ತುಸೇವೆಗಳನ್ನು ಒದಗಸಿ ಹಸಿವು ಮುಕ್ತ ಆರೋಗ್ಯಪೂರ್ಣ ನಿರ್ಮಲ ಸಮಾಜದ ನಿರ್ಮಾಣ ಮಾಡುವುದಾಗಿದೆ. ಸಮಾಜದ ದಮಿನತ ವರ್ಗದ ಜನರಿಗೆ ಮೂಲಭೂತ ಸೌಲಭ್ಯಗಳಾದ ಆಹಾರ, ವಸತಿ, ಆರೋಗ್ಯ ಮತ್ತು ಶಿಕ್ಷಣ ಒದಗಿಸುವುದಲ್ಲದೆ ಪ್ರಕೃತಿ ವಿಕೋಪಗಳಾದ ಭೂಕಂಪ, ನೆರೆ, ಸಾಂಕ್ರಾಮಿಕ ರೋಗ ಮತ್ತು ಮಾನವಕೃತ ವಿಪತ್ತುಗಳ ಸಂತೃಸ್ತರಿಗೆ ಸಹಾಯಹಸ್ತ ಒದಗಿಸಿ ಅವರ ಸ್ವಾವಲಂಬನೆಗೆ ಅನುವು ಮಾಡಿಕೊಡುವುದಾಗಿ ಎಂದು ಅವರು ತಿಳಿಸಿದರು..ಈ ಸಂದರ್ಭದಲ್ಲಿ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ., ಭಟ್ಕಳದ ಎಚ್.ಆರ್.ಎಸ್ ಸಂಚಾಲಕ ರಯೀಸ್ ಆಹ್ಮದ್, ಖಮರುದ್ದೀನ್ ಮಷಾಯಿಕ್, ಸಫ್ವಾನ್ ಅರ್ಮಾರ್, ಅನಮ್ ಆಲಾ ಎಂ.ಟಿ, ಮುಂತಾದವರು ಉಪಸ್ತಿತರಿದ್ದರು.ಭಟ್ಕಳ: ಹ್ಯುಮ್ಯಾನಿಟೇರಿಯನ್ ರಿಲೀಫ್ ಸೂಸೈಟಿ ಎಚ್.ಆರ್.ಎಸ್ ಭಟ್ಕಳ ಶಾಖೆಯು ಆಯೋಜಿಸಿದ್ದ ಎರಡು ದಿನಗಳ ಪ್ರಾಕೃತಿಕ ವಿಪತ್ತು ನಿರ್ವಹಣಾ ಕಾರ್ಯಗಾರ ಯಶಸ್ವಿಯಾಗಿ ನೆರವೇರಿತು. ಥೇರಿ ಮತ್ತು ಪ್ರಾಕ್ಟಿಕಲ್ ಮೂಲಕ ವಿಪತ್ತು ಸಂದರ್ಭದಲ್ಲಿ ಯಾವ ರೀತಿ ರಕ್ಷಣಾ ಕಾರ್ಯಗೊಳ್ಳಬೇಕು ಎಂಬುದರ ಕುರಿತಂತೆ ತರಬೇತಿಯನ್ನು ನೀಡಲಾಯಿತು.ಮಂಗಳೂರು ಎಚ್.ಆರ್.ಎಸ್ ಲೀಡರ್ ಅಮೀರ್ ಹಾಗೂ ಅವರ ತಂಡ ಎರಡು ದಿನಗಳ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಟ್ಟಡ ಹತ್ತುವುದು, ಅಗ್ನಿಶಮನ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಏನೆಲ್ಲ ಸುರಕ್ಷತೆಗಳನ್ನು ಪಾಲಿಸಿ ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡಬೇಕು ಎಂಬುದುರ ಕುರಿತಂತೆ ಮಾಹಿತಿ ನೀಡಲಾಯಿತು.ಈ ಸಂದರ್ಭದಲ್ಲಿ ಎಚ್.ಆರ್.ಎಸ್ ಕಾರ್ಯಚಟುವಟಿಕೆಗಳನ್ನು ವಿವರಿಸಿ ಮತನಾಡಿದ ಮಂಗಳೂರಿನ ಅಮೀರ್, ಎಚ್.ಆರ್.ಎಸ್ ರಾಜ್ಯಮಟ್ಟದ ಸರ್ಕಾರೇತರ ಸಂಸ್ಥೆಯಾಗಿದ್ದು ಇದು ಪ್ರಕೃತಿ ವಿಪತ್ತು ಮತ್ತು ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ಸಹಾಯ ಮತ್ತು ಪುನರ್ವಸತಿಯನ್ನು ಕಲ್ಪಸಿಕಡಲು ಶ್ರಮಿಸುತ್ತಿದೆ. ಮಾನವೀಯ ಸಹಾಯವನ್ನು ಒದಗಿಸಲು ಇದಕ್ಕೆ ತನ್ನದೆ ಆದ ಸ್ವಯಂಸೇವಕ ತಂಡವಿದ್ದು ಅವರು ನಿಷ್ಠಾವಂತ ಶ್ರದ್ಧಾಳುಗಾಗಿರುವರು. ಇದು ತನ್ನ ಸಮಾಜಸೇವಾ ಚಟುವಟಿಕೆಗಳ ಮೂಲಕ ಮಾನವೀಯ ಸೇವಾ ಸ್ಪೂರ್ತಿನ್ನು ಜಾಗೃತಗೊಳಿಸುವುದರೊಂದಿಗೆ ಸಾಮಾಜಿಕ ಕೆಡುಕಗಳಾದ ಮದ್ಯಪಾನ, ಮಾದಕ ವ್ಯಸನ ಮುಂತಾದವುಗಳ ನಿರ್ಮೂಲನೆಗೂ ನಿರಂತರ ಶ್ರಮಿಸುತ್ತದೆ ಎಂದರು. ಎಚ್.ಆರ್.ಎಸ್ ಕಾರ್ಯಕರ್ತರಿಗೆ ಪ್ರಥಮ ಚಿಕಿತ್ಸೆ, ಅಗ್ನಿಶಮನ, ವಿಪತ್ತು ನಿರ್ವಹಣೆಯ ಸೂಕ್ತ ತರಬೇತಿಗಳನ್ನು ನೀಡುತ್ತದೆ ಎಂದ ಅವರು, ಎಚ್.ಆರ್.ಎಸ್ ನ ಗುರಿ ಕಾರ್ಯಕರ್ತರ ಅದಮ್ಯ ಉತ್ಸಾಹ ಮತ್ತು ನಿಸ್ವಾರ್ಥ ಸಹಕಾರದಿಂದ ಮಾನವೀಯ ನೆಲೆಯಲ್ಲಿ ಆರೋಗ್ಯ ಶಿಕ್ಷಣ, ತುರ್ತುಸೇವೆಗಳನ್ನು ಒದಗಸಿ ಹಸಿವು ಮುಕ್ತ ಆರೋಗ್ಯಪೂರ್ಣ ನಿರ್ಮಲ ಸಮಾಜದ ನಿರ್ಮಾಣ ಮಾಡುವುದಾಗಿದೆ. ಸಮಾಜದ ದಮಿನತ ವರ್ಗದ ಜನರಿಗೆ ಮೂಲಭೂತ ಸೌಲಭ್ಯಗಳಾದ ಆಹಾರ, ವಸತಿ, ಆರೋಗ್ಯ ಮತ್ತು ಶಿಕ್ಷಣ ಒದಗಿಸುವುದಲ್ಲದೆ ಪ್ರಕೃತಿ ವಿಕೋಪಗಳಾದ ಭೂಕಂಪ, ನೆರೆ, ಸಾಂಕ್ರಾಮಿಕ ರೋಗ ಮತ್ತು ಮಾನವಕೃತ ವಿಪತ್ತುಗಳ ಸಂತೃಸ್ತರಿಗೆ ಸಹಾಯಹಸ್ತ ಒದಗಿಸಿ ಅವರ ಸ್ವಾವಲಂಬನೆಗೆ ಅನುವು ಮಾಡಿಕೊಡುವುದಾಗಿ ಎಂದು ಅವರು ತಿಳಿಸಿದರು..ಈ ಸಂದರ್ಭದಲ್ಲಿ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ., ಭಟ್ಕಳದ ಎಚ್.ಆರ್.ಎಸ್ ಸಂಚಾಲಕ ರಯೀಸ್ ಆಹ್ಮದ್, ಖಮರುದ್ದೀನ್ ಮಷಾಯಿಕ್, ಸಫ್ವಾನ್ ಅರ್ಮಾರ್, ಅನಮ್ ಆಲಾ ಎಂ.ಟಿ, ಮುಂತಾದವರು ಉಪಸ್ತಿತರಿದ್ದರು.
Leave a Comment