ಹಳಿಯಾಳ:- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ೨೦೨೦-೨೧ರ ಬಜೆಟ್ ಮೂಲಭೂತ ಸೌಕರ್ಯಗಳನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ ಬೆಳವಣಿಗೆಗೆ ಹೆಚ್ಚು ಒತ್ತುಕೊಡಲಾಗಿದ್ದು, ಇದರಿಂದ ಸುಸ್ಥಿರ ಅಭಿವೃದ್ಧಿ ಸಾಧಿಸಬಹುದಾಗಿದ್ದು ಬಜೆಟ್ ಮಂಡನೆ ಸ್ವಾಗತಾರ್ಹವಾಗಿದೆ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಹೇಳಿದ್ದಾರೆ.

ಬಜೆಟ್ ಮಂಡನೆಯ ಬಳಿಕ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಶಾಸಕರು ಕೋವಿಡ್ -೧೯ ಹಾಗೂ ಲಾಕ್‌ಡೌನನಿಂದ ದೇಶದ ಪರಿಸ್ಥಿತಿಯ ವಿಭಿನ್ನವಾಗಿದ್ದು, ಆರ್ಥಿಕತೆಯನ್ನು ಚೇತರಿಸುವ ದೃಷ್ಟಿಯಲ್ಲಿ ಸಮಗ್ರ ದೃಷ್ಟಿಕೋನ ಒಳಗೊಂಡ ಬಜೆಟ್ ಇದಾಗಿದ್ದು ಬಹುಶಃ ಕೋವಿಡ್‌ನಿಂದ ಕಲಿತ ಪಾಠವನ್ನು ಬಿಂಬಿಸುತ್ತದೆ ಎಂದಿದ್ದಾರೆ.
ಕೃಷಿ, ಆರೋಗ್ಯ, ಮೂಲಸೌಕರ್ಯ, ನೈರ್ಮಲ್ಯ, ಶಿಕ್ಷಣ ಉತ್ಪಾದನಾ ಕ್ಷೇತ್ರ ಮತ್ತು ಜವಳಿ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದ್ದು, ಖರ್ಚಿನ ಬಹುಪಾಲನ್ನು ಬಂಡವಾಳ ವೆಚ್ಚವಾಗಿ ಪರಿವರ್ತಿಸಿದ್ದು ಒಳ್ಳೆಯ ಬೆಳವಣಿಗೆ. ವಾಹನದ ಮಾಲಿನ್ಯ ನಿಯಂತ್ರಣ ತಡೆಗಟ್ಟುವ ಸಲುವಾಗಿ ಸ್ವಯಂ ಪ್ರೇರಿತವಾಗಿ ಹಳೆಯ ವಾಹನಗಳನ್ನು ಗುಜರಿಗೆ ಸೇರಿಸುವ ಕಾನೂನು, ಅಟೋಮೊಬೈಲ್ ಕ್ಷೇತ್ರ ಮತ್ತು ಪರಿಸರಕ್ಕೆ ವರದಾನವಾಗಬಹುದು.
೨೦೨೦-೨೧ ನೇ ಸಾಲಿನಲ್ಲಿ ವಿತ್ತಿಯ ಕೊರೆತೆ ಜಿ.ಡಿ.ಪಿ.ಯ ೯.೫% ಮತ್ತು ಭವಿಷ್ಯದ ೨೦೨೨ ಕ್ಕೆ ವಿತ್ತೀಯ ಕೊರತೆಯನ್ನು ಜಿ.ಡಿ.ಪಿ.ಯು ೬.೮% ಅಂದಾಜಿಸಿದ್ದು, ಇದುತೀವ್ರ ಕಳವಳಕ್ಕೆ ಕಾರಣವಾಗಿದೆ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಬಹಳ ಜ್ವಲಂತವಾಗಿದೆ. ಇದಕ್ಕೆ ದೇಶದ ಯುವಕರ ಉಜ್ವಲ ಭವಿಷ್ಯದ ದೃಷ್ಟಿಯಿಂದ ಮತ್ತು ರಾಷ್ಟçದ ಸರ್ವಾಂಗೀಣ ಪ್ರಗತಿಗೆ ಈ ಮುಂಗಡ ಪತ್ರ ಸ್ಪಂದಿಸಿ, ಉತ್ತರ ಕಂಡು ಹಿಡಿಯಬೇಕಾಗಿದೆ. ಈ ಮುಂಗಡ ಪತ್ರದಲ್ಲಿ ವ್ಯಾಪಾರಸ್ಥರು, ಸಣ್ಣ ಕೈಗಾರಿಕೆಗಳು ಮತ್ತು ಮಧ್ಯಮ ವರ್ಗದ ಜನರಿಗೆ ಪರಿಹಾರ ಸಿಕ್ಕಿಲ್ಲ. ಇದರ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ.
ಕೋವಿಡ್ ಸಂಕಷ್ಟದಲ್ಲಿ ಜನಸಾಮಾನ್ಯರಿಂದ ಹೆಚ್ಚಿನ ನಿರೀಕ್ಷೆ ಇದ್ದು, ಈ ಬಜೆಟ್‌ನ ಮುಖಾಂತರ ಪೂರೈಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಎಡವಿದೆ ಎಂದು ದೇಶಪಾಂಡೆ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾ
Leave a Comment