ಹಳಿಯಾಳ:- ಹಳಿಯಾಳ ಯೂಥ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷ ರವಿ ತೋರಣಗಟ್ಟಿ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಚುನಾವಣೆಯಲ್ಲಿ ಒಟ್ಟೂ 2700 ಯುವ ಕಾಂಗ್ರೇಸ್ ಸದಸ್ಯರಿದ್ದು ಈ ಸದಸ್ಯ ಮತದಾರರ ಪೈಕಿ ಪರಿಶೀಲನೆ ವೇಳೆ 1453 ಮತದಾರರು ಮಾತ್ರ ಮತದಾನಕ್ಕೆ ಸಿಂಧುವಾಗಿದ್ದರು. ಅಂತರ್ಜಾಲದ ಮೂಲಕ ಜ 11 ರಂದೇ ಚುನಾವಣೆ ನಡೆದಿದ್ದು ದಿ. 18 ರಂದು ಫಲಿತಾಂಶ ಪ್ರಕಟಗೊಳ್ಳಬೇಕಿತ್ತು, ಆದರೆ ಹಲವು ತಾಂತ್ರಿಕ ಕಾರಣಗಳಿಂದ ಫಲಿತಾಂಶ ತಡವಾಗಿದ್ದು.
ಇನ್ನೂ ತಾಲೂಕಿನಲ್ಲಿ ಮತದಾನದ ಹಕ್ಕು ಹೊಂದಿರುವ ಒಟ್ಟು 1453 ಯೂಥ್ ಬ್ಲಾಕ್ ಕಾಂಗ್ರೆಸ್ ಸದಸ್ಯರ ಪೈಕಿ 329 ಮತಗಳು ಚಲಾವಣೆಯಾಗಿದ್ದವು ಇದರಲ್ಲಿ 195 ಮತಗಳನ್ನು ರವಿ ತೊರಣಗಟ್ಟಿ ಪಡೆದು ಎರಡನೇ ಬಾರಿಗೆ ಯುವ ಕಾಂಗ್ರೇಸ್ನ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿದ್ದಾರೆ.

Leave a Comment